Advertisement

ಇನ್ಮುಂದೆ ಜೋಮ್ಯಾಟೋ ಪಬ್ಲಿಕ್ ಲಿಮಿಟೆಡ್ ಕಂಪೆನಿ..!?

10:42 AM Apr 16, 2021 | |

ನವ ದೆಹಲಿ : ಜೋಮ್ಯಾಟೋ ಕಂಪೆನಿ ಸಾರ್ವಜನಿಕ ನಿಯಮಿತ ಕಂಪೆನಿಯಾಗಿ(ಪಬ್ಲಿಕ್ ಲಿಮಿಟೆಡ್ ಕಂಪೆನಿಯಾಗಿದೆ) ಹೊರ ಹೊಮ್ಮಿದೆ.

Advertisement

ತನ್ನ, ಐಪಿಒ ಬಿಡುಗಡೆಗೂ ಮುನ್ನವೇ ಜೋಮ್ಯಾಟೋ ಕಂಪನಿಯ ಹಿಡುವಳಿ ಘಟಕವನ್ನು ಖಾಸಗಿ ಕಂಪನಿಯಿಂದ ಸಾರ್ವಜನಿಕ ನಿಯಮಿತ ಕಂಪನಿಯಾಗಿ ಪರಿವರ್ತಿಸಲಾಗಿದೆ ಎಂಬ ವರದಿಯಾಗಿದೆ.

ವಿಶೇಷ ತಿದ್ದುಪಡಿ ಬಳಸಿ ಈ ನಿರ್ಣಯ ತೆಗೆದುಕೊಂಡಿರುವ ಜೋಮ್ಯಾಟೋ ಏಪ್ರಿಲ್ 9 ರಂದೇ ಜೋಮ್ಯಾಟೋ ಲಿಮಿಟೆಡ್ ಆಗಿ ಪರಿವರ್ತನೆಗೊಂಡಿದ್ದು, ಈ ಬಗ್ಗೆ ಬಿ ಎಸ್ ಇ ಗೆ ತಿಳಿಸಲು ಮುಂದಾಗಿದೆ.

ಓದಿ : ಪ್ರವಾಸಿಗರೆ ಗಮನಿಸಿ: ಮೇ 15ರವರೆಗೆ ಎಲ್ಲ ಸ್ಮಾರಕಗಳೂ ಬಂದ್‌

ಕಂಪೆನಿಗಳ ಕಾಯ್ದೆ 2013ರ ಅನ್ವಯ ಸಾರ್ವಜನಿಕ ನಿಯಮಿತ ಸಂಸ್ಥೆಗಳು ಮಾತ್ರ ಯಾವುದೇ ಷೇರು ಮಾರುಕಟ್ಟೆ ಲಿಸ್ಟಿಂಗ್‌ ನಲ್ಲಿ ಕಾಣಿಸಿಕೊಳ್ಳಬಹುದು. ಕಾನೂನು ಮಾನದಂಡಗಳನ್ನು ಅನುಸರಿಸಲು ಬೇಕಾದ ಸೂಕ್ತ ನಿರ್ಣಯಗಳನ್ನು ತೆಗೆದುಕೊಂಡಿರುವ ಜೋಮ್ಯಾಟೋ ”ಲಿಮಿಟೆಡ್” ಸಂಸ್ಥೆ ಎನಿಸಿಕೊಂಡಿದೆ.

Advertisement

ಮಾತ್ರವಲ್ಲದೇ, 44,30,60,73,250 ಈಕ್ವಿಟಿ ಷೇರುಗಳನ್ನು ಷೇರುದಾರರಿಗೆ ಹಂಚಿಕೆ ಮಾಡಿದೆ.  6699:1 ಅನುಪಾತದ ಬೋನಸ್ ಷೇರುಗಳ ರೂಪದಲ್ಲಿ 247,60,30,788 ಈಕ್ವಿಟಿ ಷೇರು ಹಂಚಿಕೆಯಾಗಿದೆ.

ಇನ್ನು, ಐಪಿಒ ಪ್ರಕ್ರಿಯೆ ನಡೆಸಲು ಕೋಟಕ್ ಮಹೀಂದ್ರಾ ಬ್ಯಾಂಕ್, ಮಾರ್ಗನ್ ಸ್ಟ್ಯಾನಿ, ಸಿಟಿ ಬ್ಯಾಂಕ್, ಕ್ರೆಡಿಟ್ ಸೂಸೆ ಹಾಗೂ ಬ್ಯಾಂಕ್ ಆಫ್ ಅಮೆರಿಕಗಳನ್ನು ಬ್ಯಾಂಕರ್‌ಗಳಾಗಿ ಆಯ್ಕೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.

ಓದಿ : ಉಡುಪಿ: ದೇವಸ್ಥಾನದ ಹುಂಡಿ ಕಳವಿಗೆ ವಿಫಲ ಯತ್ನ, ಕಾರು ಬಿಟ್ಟು ಓಡಿ ಹೋದ ಕಳ್ಳರು

Advertisement

Udayavani is now on Telegram. Click here to join our channel and stay updated with the latest news.

Next