Advertisement

ತಮ್ಮ ಜನ್ಮ ದಿನಾಂಕವನ್ನೇ ಬದಲಾಯಿಸಿಕೊಂಡ ಕಾಂಬೋಡಿಯಾ ಪ್ರಧಾನಿ : ಅಸಲಿ ಕಾರಣ ಇಲ್ಲಿದೆ

10:18 AM May 22, 2022 | Team Udayavani |

ಫೊಮ್‌ ಪೆನ್‌: ಕಾಂಬೋಡಿಯಾದ ಪ್ರಧಾನಿ ಹುನ್‌ ಸೇನ್‌, ತಮಗೆ ಒದಗಿಬರಬಹುದಾದ ದುರಾದೃಷ್ಟದಿಂದ ಪಾರಾಗಲು ತಮ್ಮ ಜನ್ಮದಿನಾಂಕ ಬದಲಾಯಿಸಿಕೊಂಡಿ­ದ್ದಾರೆ!

Advertisement

ಸರಕಾರಿ ದಾಖಲೆಗಳಲ್ಲಿ ಅವರ ಜನ್ಮದಿನ “ಎ. 4, 1951′ ಎಂದಿದೆ. ಆದರೆ ಅವರು ಅದನ್ನು “ಆ. 5, 1952′ ಎಂದು ಬದಲಾಯಿಸಿಕೊಂಡಿದ್ದಾರೆ. ಬದಲಾಯಿಸಲ್ಪಟ್ಟಿರುವ ದಿನಾಂಕವೇ ನೈಜ ಜನ್ಮದಿನವೆಂದೂ ಹುನ್‌ ಸೇನ್‌ ತಿಳಿಸಿದ್ದಾರೆ.

ಹುನ್‌ ಅವರ ಅಣ್ಣ ಇತ್ತೀಚೆಗೆ ದೀರ್ಘ‌ಕಾಲಿಕ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಅವರು ತಮ್ಮ ನೈಜ ಹುಟ್ಟು ಹಬ್ಬದ ದಿನವನ್ನು ಬಿಟ್ಟು ಬೇರೆ ದಿನವನ್ನು ತಮ್ಮ ಹುಟ್ಟುಹಬ್ಬದ ದಿನವನ್ನಾಗಿ ಆಚರಿಸುತ್ತಿದ್ದರಿಂದಲೇ ಹೀಗಾಗಿದ್ದು ಎಂಬುದು ಹುನ್‌ನಂಬಿಕೆ. ಹಾಗಾಗಿ ಹುಟ್ಟುಹಬ್ಬವನ್ನೇ ಬದಲಿಸಿದ್ದಾರೆ.

ಇದನ್ನೂ ಓದಿ : ಶಾಲೆಗೆ ಬಣ್ಣ ಬಳಿಯುವ ವಿಚಾರದಲ್ಲಿ ಜೆಎಂಎಂ-ಬಿಜೆಪಿ ವರ್ಣ ಕದನ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next