Advertisement
ಜಿಪಂ ಅಧ್ಯಕ್ಷ ಈರಪ್ಪ ನಾಡಗೌಡ್ರ ಅಧ್ಯಕ್ಷತೆಯಲ್ಲಿ ಶುಕ್ರವಾರ ಜಿಲ್ಲಾಡಳಿತಭವನದ ಜಿಪಂ ಸಭಾಂಗಣದಲ್ಲಿ ನಡೆದಜಿಪಂ ಸಾಮಾನ್ಯ ಸಭೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳ ವೈಫಲ್ಯವನ್ನು ಸದಸ್ಯರು ಎಳೆಎಳೆಯಾಗಿ ಬಿಚ್ಚಿಟ್ಟರು. ಹೀಗಾಗಿ, ಸುಮಾರು ಒಂದು ಗಂಟೆ ಕಾಲ ಆರೋಗ್ಯಇಲಾಖೆ ಕುರಿತು ಸುದೀರ್ಘ ಚರ್ಚೆನಡೆಯಿತು. ಈ ವೇಳೆ ಸದಸ್ಯರ ಪ್ರಶ್ನೆಗಳಿಗೆಉತ್ತರಿಸಲಾಗದೇ ತಡಬಡಾಯಿಸಿದ ಡಿಎಚ್‌ಒಗೆ ಕ್ಲಾಸ್ ತೆಗೆದುಕೊಂಡರು.
Related Articles
Advertisement
ಶಿಗ್ಲಿ ಜಿಪಂ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿಯ ಗೃಹಗಳನ್ನುತಮ್ಮ ಅನುದಾನದಲ್ಲಿ ದುರಸ್ತಿಗೊಳಿಸಲಾಗಿದೆ.ಆದರೆ, ಅದಕ್ಕೆ ಜಿಲ್ಲಾ ಆರೋಗ್ಯ ಇಲಾಖೆಎಂದು ಬೋರ್ಡ್ ಮಾತ್ರ ಬರೆದಿರುವುದುಭ್ರಷ್ಟಾಚಾರದ ವಾಸನೆ ಕಂಡು ಬರುತ್ತದೆ ಎಂದು ಆರೋಪಿಸಿದರು.
ಅದಕ್ಕೆ ಆರೋಗ್ಯಾಧಿಕಾರಿಗಳು ಸಮರ್ಪಕ ಉತ್ತರ ನೀಡದೇ, ಪ್ರತ್ಯೇಕ ಎರಡುಯೋಜನೆಯಡಿ 1 ಲಕ್ಷ ರೂ. ಹಾಗೂ 6 ಲಕ್ಷರೂ. ಮೊತ್ತದಲ್ಲಿ ಕಾಮಗಾರಿಯನ್ನು ನಿರ್ಮಿತಿಕೇಂದ್ರಕ್ಕೆ ವಹಿಸಲಾಗಿದೆ. ಹೆಚ್ಚಿನ ಮಾಹಿತಿಇನ್ನಷ್ಟೆ ಪಡೆಯುವುದಾಗಿ ಉತ್ತರಿಸಿದರು.ಇದರಿಂದ ಕೆರಳಿದ ಸದಸ್ಯರು, ಆರೋಗ್ಯಇಲಾಖೆ ಅನುದಾನ ನೀಡುವುದಾದರೆ,ಅದರ ಮೇಲುಸ್ತುವಾರಿ ನೋಡಿಕೊಳ್ಳಬೇಕು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ1 ಕೋಟಿ ರೂ. ಮೊತ್ತದಲ್ಲಿ ಅತ್ಯಾಧುನಿಕ ಆ್ಯಂಬುಲೆನ್ಸ್‌ಗಳ ಪೂರೈಕೆ ಬಗ್ಗೆಯೂ ಸದಸ್ಯರಗಮನಕ್ಕೂ ತರುವುದಿಲ್ಲ. ನಾವು ಅಮೆರಿಕದಿಂದ ಬರೋದಿಲ್ಲ. ಜಿಪಂನಲ್ಲೇ ಇರುತ್ತೇವೆ. ಬಂದು ಮಾಹಿತಿ ನೀಡಲು ಸಮಸ್ಯೆ ಏನು ಎಂದು ಜಿಪಂ ಅಧ್ಯಕ್ಷ ನಾಡಗೌಡ್ರ ಛಾಟಿ ಬೀಸಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ನಿರ್ಮಿತಿ ಕೇಂದ್ರದ ಶಿರೋಳ, ಕೆಲ ಪಿಎಚ್‌ಸಿಗಳಿಗೆ 6 ಲಕ್ಷ ರೂ. ಹಾಗೂ ಇನ್ನೂ ಕೆಲ ಆರೋಗ್ಯಕೇಂದ್ರಗಳಿಗೆ 1 ಲಕ್ಷ ರೂ. ಮಂಜೂರಾಗಿದೆಎಂದು ಕಾಮಗಾರಿಯನ್ನು ವಿವರಿಸಿ, ಚರ್ಚೆಗೆ ತೆರೆ ಎಳೆದರು.
ಡಿಡಿಪಿಐ ಬಸವಲಿಂಗಪ್ಪ ಮಾತನಾಡಿ,
ಜನೆವರಿಯಿಂದ 6, 7, 8 ನೇ ತರಗತಿವಿದ್ಯಾರ್ಥಿಗಳಿಗೆ ವಿದ್ಯಾಗಮ, 9 ಮತ್ತು 10ನೇ ತರಗತಿಗಳು ಆರಂಭವಾಗಿವೆ. ಜೂನ್16 ರಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆಗಳನ್ನುನಡೆಸಲು ಪೂರ್ವಸಿದ್ಧತೆ ಆರಂಭವಾಗಿದೆ ಎಂದು ಮಾಹಿತಿ ನೀಡಿದರು.
ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಫಲಿತಾಂಶ ಸುಧಾರಣೆಗಾಗಿ ತೆಗೆದುಕೊಂಡಿರುವ ಕ್ರಮಗಳ ಕುರಿತು ಹಾಗೂಶಾಲೆಯ ಅಂಗನವಾಡಿಗಳಲ್ಲಿ ರಾತ್ರಿ ಅನೈತಿಕಚಟುವಟಿಕೆಗಳನ್ನು ತಪ್ಪಿಸಲು ಅದಕ್ಕೆ ಪೊಲೀಸ್‌ಗಸ್ತು ವ್ಯವಸ್ಥೆ ಮಾಡಬೇಕು ಎಂದು ಸದಸ್ಯರು ಗಮನ ಸೆಳೆದರು.
ಬಿಂಕದಕಟ್ಟಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ 1.45 ಕೋಟಿ ರೂ. ವೆಚ್ಚದಲ್ಲಿ ಸೋಲಾರಅಳವಡಿಸಲಾಗಿದ್ದು, ಅವುಗಳು ಸರಿಯಾಗಿಕಾರ್ಯನಿರ್ವಹಿಸುತ್ತಿಲ್ಲ ಎಂದು ಜಿಪಂ ಸದಸ್ಯೆ ಶಕುಂತಲಾ ಮೂಲಿಮನಿ ಸಭೆಯ ಗಮನಕ್ಕೆ ತಂದರು.
ಈ ಬಗ್ಗೆ ಸಭೆಯ ಸದಸ್ಯರೆಲ್ಲರೂ ಆ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸುವುದರೊಂದಿಗೆಮುಂಗಡ ಠೇವಣಿಯನ್ನು ಮುಟ್ಟುಗೋಲುಹಾಕಿಕೊಳ್ಳುವ ಮೂಲಕ ಅಳವಡಿಸಿದಸೋಲಾರ ದೀಪಗಳ ನಿರ್ವಹಣೆಗೆ ಪ್ರತ್ಯೇಕಟೆಂಡರ್ ಕೈಗೊಳ್ಳುವಂತೆ ತಿಳಿಸಿದರು.ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್.ಮಾತನಾಡಿ, ರೈತರಿಗೆಪರಿಹಾರ ವಿತರಣೆಯಲ್ಲಿ ಜಿಲ್ಲೆ ರಾಜ್ಯದಲ್ಲಿಯೇ ಮೂರನೇ ಸ್ಥಾನದಲ್ಲಿದೆ. ಹಿಂಗಾರು ಕಡಲೆ ಖರೀದಿಗಾಗಿ ಖರೀದಿ ಕೇಂದ್ರದ ನೋಂದಣಿಕಾರ್ಯ ಫೆ. 15 ರಿಂದ ಆರಂಭವಾಗಲಿದ್ದು,ಪ್ರತಿ ಕ್ವಿಂಟಲ್ ಕಡಲೆಗೆ 5,110 ರೂ. ಅನ್ನು ಸರ್ಕಾರ ಬೆಂಬಲ ಬೆಲೆಯಾಗಿ ನೀಡಿಖರೀದಿಸಲಿದೆ. ಪ್ರತಿ ರೈತರಿಂದ 15 ಕ್ವಿಂಟಲ್ ಕಡಲೆ ಖರೀದಿಸಲಾಗುವುದು ಎಂದರು. ಒಂದು ಜಿಲ್ಲೆ ಒಂದು ಬೆಳೆ ಯೋಜನೆಯಡಿಗದಗ ಜಿಲ್ಲೆಗೆ ಮೆಣಸಿನಕಾಯಿ ಬೆಳೆಯನ್ನು ನಿಗದಿಪಡಿಸಲಾಗಿದ್ದು, ಜಿಲ್ಲೆಯಲ್ಲಿ 20 ಸಂಸ್ಕರಣಾ ಘಟಕಗಳನ್ನು ತೆರೆಯಲು ಅವಕಾಶವಿದೆ. ಪ್ರತಿ ಯುನಿಟ್‌ಗೆ 10 ಲಕ್ಷ ರೂ. ಸಹಾಯಧನವನ್ನು ಸರ್ಕಾರ ಒದಗಿಸಲಿದೆ ಎಂದರು.
ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಮಂಜುಳಾ ಹುಲ್ಲಣ್ಣವರ, ಜಿಪಂ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಜಿಪಂ ಸದಸ್ಯರು, ತಾಪಂ ಅಧ್ಯಕ್ಷರು, ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು ಹಾಜರಿದ್ದರು.