ಗಂಗಾವತಿ: ವಿಧಾನಸಭಾ ಚುನಾವಣೆಯನ್ನು ಪ್ರಮಾಣಿಕ ಮತ್ತು ಪಾರದರ್ಶಕವಾಗಿ ಮಾಡುವ ಉದ್ದೇಶದಿಂದ ಕ್ಷೇತ್ರಗಳ ಗಡಿಗಳಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಚೆಕ್ ಪೋಸ್ಟ್ ಸ್ಥಾಪಿಸಿ ದಿನದ 24 ತಾಸುಗಳ ಕಾಲ ಬೈಕ್, ಕಾರು ಸೇರಿ ಇತರೆ ವಾಹನಗಳನ್ನು ಚೆಕ್ ಮಾಡಲಾಗುತ್ತಿದೆ ಎಂದು ಜಿ.ಪಂ.ಸಿಇಒ ರಾಹುಲ್ ರತ್ನಂ ಪಾಂಡೆ ತಿಳಿಸಿದರು.
ಅವರು ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದ ಚೆಕ್ ಪೊಸ್ಟ್ ಗೆ ಭೇಟಿ ಇದುವರೆಗೆ ವಾಹನಗಳ ಪರಿಶೀಲನೆ ದಾಖಲಾತಿ ಹಾಗೂ ಚೆಕ್‌ಪೋಸ್ಟ್ನಲ್ಲಿ ಕಾರ್ಯನುಇರ್ವಹಿಸುವ ಸಿಬ್ಬಂದಿ ವರ್ಗದವರಿಗೆ ಕುಡಿವ ನೀರು, ಬೆಳಕಿನ ವ್ಯವಸ್ಥೆ ಪರಿಶೀಲಿಸಿದರು.
ಕಾರ್, ಗೂಡ್ಸ್ ವಾಹನ, ಟಾಟಾ ಏಸ್ ಸೇರಿ ಇತರೆ ಅನುಮಾನಸ್ಪದ ವಾಹನಗಳ ತಪಾಸಣೆ ಮಾಡುವಂತೆ ಚೆಕ್ ಪೊಸ್ಟ್ ಸಿಬ್ಬಂದಿಗಳಿಗೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸೂಚಿಸಿದರು.
ಈ ಸಂದರ್ಭದಲ್ಲಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಮಹಾಂತಗೌಡ ಪಾಟೀಲ್, ಗ್ರಾಪಂ ಅಭಿವೃದ್ಧಿ ಅಧಿಕಾರಿ ರಾಮುನಾಯ್ಕ್, ತೋಟಗಾರಿಕೆ ಇಲಾಖೆ ಎಎಚ್‌ಓ, ತಾಪಂ ವಿಷಯ ನಿರ್ವಾಹಕರು, ತಾಂತ್ರಿಕ ಸಂಯೋಜಕರು, ಐಇಸಿ ಸಂಯೋಜಕರು, ಓಖಐಒ ಸಂಜೀವಿನಿ ಯೋಜನೆ ವಲಯ ಮೇಲ್ವಿಚಾರಕರು, ಗ್ರಾಪಂ ಕಾರ್ಯದರ್ಶಿಗಳು, ಪೊಲೀಸ್ ಇಲಾಖೆ ಸಿಬ್ಬಂದಿಗಳಿದ್ದರು.
ಇದನ್ನೂ ಓದಿ