Advertisement

ಕೋವಿಡ್ ಆಯ್ತು ಜತೆಯಲ್ಲೇ ಝೀಕಾ ಭೀತಿ : ಈ ವೈರೆಸ್ ಲಕ್ಷಣವೇನು…

02:29 PM Aug 10, 2021 | ಗಿರೀಶ್ ಗಂಗನಹಳ್ಳಿ |
ಜುಲೈ 8 ರಂದು ಕೇರಳದಲ್ಲಿ ಮೊದಲ ಝೀಕಾ ವೈರಸ್ ಪ್ರಕರಣ ವರದಿಯಾಗಿದೆ. ಪ್ರಸ್ತುತ, ಇಲ್ಲಿ 63 ಸಕ್ರಿಯ ಪ್ರಕರಣಗಳಿವೆ. ಆದರೆ ಅಧಿಕಾರಿಗಳು ಯಾರೂ ಆಸ್ಪತ್ರೆಯಲ್ಲಿ ದಾಖಲಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಜನರಿಗೆ ಮನವಿ ಮಾಡಲಾಗಿದೆ. ಝೀಕಾ ವೈರಸ್ ಪತ್ತೆಯಾದ ಮಹಿಳೆ ಚಿಕಿತ್ಸೆ ಪಡೆದ ನಂತರ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಸೊಳ್ಳೆ ಕಡಿತದಿಂದ ರಕ್ಷಿಸಿಕೊಳ್ಳುವುದು ಮಾತ್ರ ಈ ವೈರೆಸ್ ನಿಂದ ದೂರ ಇರಲು ಅಸ್ತ್ರವಾಗಿದೆ...
Now pay only for what you want!
This is Premium Content
Click to unlock
Pay with

ದೇಶದಲ್ಲಿ ಈಗಾಗಲೇ ಕೋವಿಡ್ ಭಾರೀ ಪ್ರಮಾಣದ ಸಾವು ನೋವಿಗೆ ಕಾರಣವಾಗಿ. ಸ್ವಲ್ಪ ದಿನಗಳಲ್ಲಿ ಕೊಂಚ ಮಟ್ಟಿಗೆ ಬಿಡುವು ನೀಡಿದ್ದ ಕೋವಿಡ್ ಮಹಾ ಮಾರಿ ಇದೀಗ ಮತ್ತೆ ತನ್ನ ನಾಗಾಲೋಟವನ್ನು ಶುರು ಮಾಡಿದೆ. ಕಳೆದ ಸತತ ಮೂರು ದಿನಗಳಿಂದ ದೇಶದಲ್ಲಿ ಕೋವಿಡ್ 40,000 ಸಾವಿರದ ಗಡಿಯನ್ನು ದಾಟಿತ್ತು. ಇದೀಗ ಕೋವಿಡ್ ಸೋಂಕಿನ ನಂತರ, ಝೀಕಾ ವೈರಸ್ ವೇಗವಾಗಿ ಹರಡುತ್ತಿದೆ. ಕೇರಳದಲ್ಲಿ 60 ಕ್ಕೂ ಹೆಚ್ಚು ಝೀಕಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ಏತನ್ಮಧ್ಯೆ ಮಹಾರಾಷ್ಟ್ರದ ಪುಣೆಯಲ್ಲಿ ಮೊದಲ ಪ್ರಕರಣ ವರದಿಯಾಗಿದೆ. ಇಲ್ಲಿ 50 ವರ್ಷದ ಮಹಿಳೆಗೆ ಝೀಕಾ ವೈರಸ್ ತಗುಲಿರುವುದು ವರದಿಯಾಗಿದೆ.

Advertisement

ಜುಲೈ 8 ರಂದು ಕೇರಳದಲ್ಲಿ ಮೊದಲ ಝೀಕಾ ವೈರಸ್ ಪ್ರಕರಣ ವರದಿಯಾಗಿದೆ. ಪ್ರಸ್ತುತ, ಇಲ್ಲಿ 63 ಸಕ್ರಿಯ ಪ್ರಕರಣಗಳಿವೆ. ಆದರೆ ಅಧಿಕಾರಿಗಳು ಯಾರೂ ಆಸ್ಪತ್ರೆಯಲ್ಲಿ ದಾಖಲಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಜನರಿಗೆ ಮನವಿ ಮಾಡಲಾಗಿದೆ. ಝೀಕಾ ವೈರಸ್ ಪತ್ತೆಯಾದ ಮಹಿಳೆ ಚಿಕಿತ್ಸೆ ಪಡೆದ ನಂತರ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

WHO ಪ್ರಕಾರ, ಝೀಕಾ ವೈರಸ್ ಡೆಂಗ್ಯೂ ಜ್ವರ, ಹಳದಿ ಜ್ವರ ಮತ್ತು ವೆಸ್ಟ್ ನೈಲ್ ವೈರಸ್ ಅನ್ನು ಹೋಲುತ್ತದೆ ಮತ್ತು ಹೆಚ್ಚಾಗಿ ಈಡಿಸ್ ಜಾತಿಯ ಸೊಳ್ಳೆಗಳ ಕಡಿತದಿಂದ ಹರಡುತ್ತದೆ. ಈಡಿಸ್ ಸೊಳ್ಳೆಗಳು ಸಾಮಾನ್ಯವಾಗಿ ಹಗಲಿನಲ್ಲಿ ಕಚ್ಚುತ್ತವೆ. ಇದು ಮುಂಜಾನೆ ಮತ್ತು ಮಧ್ಯಾಹ್ನ ಅಥವಾ ಸಂಜೆ ಸಮಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಝೀಕಾ ವೈರಸ್ ರೋಗದ ಲಕ್ಷಣಗಳೇನು

ಝೀಕಾ ವೈರಸ್ ತಗುಲಿದರೆ ಜ್ವರ, ದೇಹದಲ್ಲಿ ನೋವು, ದದ್ದು, ಸ್ನಾಯುಗಳು ಮತ್ತು ಕೀಲುಗಳಲ್ಲಿ ನೋವು, ಅಸ್ವಸ್ಥತೆ, ತಲೆನೋವು ಕಾಣಿಸಿಕೊಳ್ಳುತ್ತದೆ. ಇನ್ನು ಝೀಕಾ ವೈರೆಸ್ ತಗುಲಿದರೆ ಸಾಮಾನ್ಯವಾಗಿ 2 ರಿಂದ 7 ದಿನಗಳವರೆಗೆ ರೋಗಲಕ್ಷಣಗಳು ಇರುತ್ತದೆ. ಹೆಚ್ಚಿನ ಸೋಂಕಿತರಲ್ಲಿ ರೋಗಲಕ್ಷಣಗಳೇ ಕಾಣಿಸಿಕೊಳ್ಳುವುದಿಲ್ಲ ಎಂದು ಸಂಶೋಧನೆಗಳು ತಿಳಿಸಿವೆ. ಮತ್ತೊಂದು ಆತಂಕದ ವಿಚಾರ ಅಂದ್ರೆ ಝಿಕಾ ವೈರಸ್ ಗರ್ಭಿಣಿ ಮಹಿಳೆಯಿಂದ ಭ್ರೂಣಕ್ಕೆ ಹರಡುತ್ತದೆ.‌ ಲೈಂಗಿಕ ಸಂಪರ್ಕ ಮತ್ತು ರಕ್ತ ವರ್ಗಾವಣೆಯ ಮೂಲಕ ಕೂಡ ಝೀಕಾ ಹರಡುವ ಸಾಧ್ಯತೆ ಇದೆ.

Advertisement

ರಕ್ತ ಅಥವಾ ಮೂತ್ರ ಅಥವಾ ವೀರ್ಯದಂತಹ ಇತರ ದೇಹದ ದ್ರವಗಳನ್ನು ಪರೀಕ್ಷೆ ಮಾಡಿದ್ದು, ಪ್ರಯೋಗಾಲಯದಲ್ಲಿ ಝಿಕಾ ವೈರಸ್ ಪತ್ತೆ ಹಚ್ಚಲು ಪರೀಕ್ಷಿಸಲಾಗುತ್ತದೆ. ಇಲ್ಲಿಯವರೆಗೆ, ಝಿಕಾ ವೈರಸ್‌ಗೆ ಲಸಿಕೆ ಅಥವಾ ಔಷಧವನ್ನು ಕಂಡುಹಿಡಿದಿಲ್ಲ. ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಸೊಳ್ಳೆ ಕಡಿತದಿಂದ ರಕ್ಷಿಸಿಕೊಳ್ಳುವುದು ಮಾತ್ರ ಈ ವೈರೆಸ್ ನಿಂದ ದೂರ ಇರಲು ಅಸ್ತ್ರವಾಗಿದೆ.

ಈ ಮಾರಣಾಂತಿಕ ಝಿಕಾ ವೈರಸ್‌ ತಗುಲಿದ ಮೇಲೆ ಏನು ಮಾಡಬೇಕು ಎಂಬ ಆತಂಕ ಕೂಡ ಇರುತ್ತದೆ. ಈ ವೈರೆಸ್ ಬಂದ ಮೇಲೆ ಉತ್ತಮ ವಿಶ್ರಾಂತಿ ತೆಗೆದುಕೊಳ್ಳಬೇಕು. ಜ್ವರ ಮತ್ತು ನೋವಿಗೆ ವೈದ್ಯರ ಸಲಹೆಯಂತೆ ಔಷಧಿ ತೆಗೆದುಕೊಳ್ಳಬೇಕು. ದ್ರವ ಪಾನೀಯಗಳನ್ನು ಹೆಚ್ಚಾಗಿ ಸೇವಿಸಬೇಕು. ಯಾವುದೇ ಔಷಧಿ ತೆಗೆದುಕೊಳ್ಳುವ ಮೊದಲು, ವೈದ್ಯರನ್ನು ಸಂಪರ್ಕಿಸಬೇಕು.

Advertisement

Udayavani is now on Telegram. Click here to join our channel and stay updated with the latest news.