Advertisement
ನಗರದ ಜಿಲ್ಲಾ ಪಂಚಾಯ್ತಿ ಭವನದಲ್ಲಿ 20ನೇ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಶುದ್ಧ ಕುಡಿಯುವ ನೀರನ್ನು ನಲ್ಲಿಗಳ ಮೂಲಕ ಮನೆ, ಮನೆಗೂ ಸರಬರಾಜು ಮಾಡುವ ಯೋಜನೆ ಜಲ ಜೀವನ ಮಿಷನ್. ಈ ಯೋಜನೆಯಡಿ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ಕೊಟ್ಟರು.
Related Articles
Advertisement
ಲಸಿಕೆ ಪಡೆಯಲು ಮನವಿ: 45 ವರ್ಷ ಮೇಲ್ಪಟ್ಟವರಿಗೆ ಆರೋಗ್ಯ ಇಲಾಖೆಯಿಂದ ಉಚಿತವಾಗಿ ಕೋವಿಡ್ ಲಸಿಕೆ ನೀಡಲಾಗುತ್ತಿದ್ದು, ಜಿಲ್ಲಾ ಪಂಚಾಯತ್ ಸದಸ್ಯರೂ ಸಹ ಕೋವಿಡ್ ಲಸಿಕೆ ಪಡೆದುಕೊಳ್ಳಿ. ಆರೋಗ್ಯ ಇಲಾಖೆ ವತಿಯಿಂದ ಜಿಲ್ಲಾ ಪಂಚಾಯತ್ ಸದಸ್ಯರಿಗೆ ವಿಶೇಷ ವ್ಯವಸ್ಥೆ ಕಲ್ಪಿಸಿ ಲಸಿಕೆ ನೀಡಲಾಗುವುದು ಎಂದು ಅಧ್ಯಕ್ಷರು ಭರವಸೆ ನೀಡಿದರು. ಸಭೆಯಲ್ಲಿ ಜಿ. ಪಂ. ಉಪಾಧ್ಯಕ್ಷೆ ಜಯರತ್ನ ರಾಜೇಂದ್ರ, ಜಿಲ್ಲಾ ಪಂಚಾಯತ್ ಸಿಇಒ ಇಕ್ರಂ ಹಾಗೂ ಇನ್ನಿತರ ಅಧಿಕಾರಿಗಳು ಹಾಜರಿದ್ದರು.
ಅಧ್ಯಕ್ಷರ ಅಸಮಾಧಾನ :
ಜಿಲ್ಲೆಯಲ್ಲಿ ಕೆರೆ ಅಭಿವೃದ್ಧಿ ಯೋಜನೆಗಳಹೆಸರಿನಲ್ಲಿ ಕೆಲ ಇಲಾಖೆಗಳ ಅಧಿಕಾರಿಗಳು ಹಣ ಲಪಟಾಯಿಸಿದ್ದಾರೆ ಎಂದು ಸ್ವತಃ ಅಧ್ಯಕ್ಷರೆ ದೂರಿ ಅಧಿಕಾರಿಗಳನ್ನು ತರಾಟೆಗೆತೆಗೆದುಕೊಂಡರು. ಇದಕ್ಕೆ ದನಿಗೂಡಿಸಿದಸದಸ್ಯ ಗಂಗಾಧರ್, ತಮ್ಮ ಕ್ಷೇತ್ರದ ವ್ಯಾಪ್ತಿ ಯಲ್ಲಿ 3 ಕೆರೆಗಳ ಅಭಿವೃದ್ಧಿಗೆ ಸಿದ್ದರಾಮಯ್ಯಸರ್ಕಾರದಲ್ಲಿ 90 ಲಕ್ಷ ಬಿಡುಗಡೆ ಆಗಿತ್ತು. ಆದರೆ ಏನೇನು ಕೆಲಸ ಆಗಿಲ್ಲ ಎಂದರು ದೂರಿದರು. ಈ ಬಗ್ಗೆ ಗಮನ ಹರಿಸುವಂತೆ ಅಧ್ಯಕ್ಷರು ಅಧಿಕಾರಿಗಳಿಗೆ ಸೂಚನೆ ಕೊಟ್ಟರು.
ನೀರಿನ ಘಟಗಳ ದುರಸ್ತಿಗೆ ಆದೇಶ :
ಜಿಲ್ಲೆಯಲ್ಲಿ ದುರಸ್ತಿ ಅವಶ್ಯಕತೆಯಿಂದ ಸ್ಥಗಿತಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತಕ್ಷಣ ದುರಸ್ತಿ ಪಡಿಸಿ ಎಂದು ಜಿಪಂ ಅಧ್ಯಕ್ಷ ಎಚ್.ಎನ್.ಅಶೋಕ್ ಅಧಿಕಾರಿಗಳು ಹಾಗೂನಿರ್ವಹಣಾ ಏಜನ್ಸಿಗಳಿಗೆ ಸೂಚನೆ ನೀಡಿದರು. ಸಾಮಾನ್ಯಸಭೆಯಲ್ಲಿ ಮಾತನಾಡಿ, ಕೆಲವು ಕಡೆ ಮೂರು ವರ್ಷದಿಂದ ಶುದ್ಧನೀರು ಘಟಕಗಳ ವಿದ್ಯುತ್ ಬಿಲ್ ಪಾವತಿ ಆಗಿಲ್ಲ. ಕೂಟಗಲ್ ಗ್ರಾಮದಲ್ಲಿ ಇಂತಹದ್ದೇ ಸಮಸ್ಯೆಯಿದೆ. ನಿರ್ವಹಣೆ ಗುತ್ತಿಗೆ ಪಡೆದ ಏಜೆನ್ಸಿಗಳೇ ವಿದ್ಯುತ್ ಬಿಲ್ ಪಾವತಿ ಮಾಡಬೇಕು ಎಂದು ಸೂಚಿಸಿದರು.
ಸಹಾಯವಾಣಿ ಸ್ಥಾಪಿಸಲು ಸಲಹೆ :
ಜಿಪಂ ಸದಸ್ಯ ಎಸ್. ಗಂಗಾಧರ್ ಮಾತನಾಡಿ, ಜಿಲ್ಲೆಯ ಅನೇಕ ಕಡೆ ಶುದ್ಧ ಕುಡಿಯುವ ನೀರಿನ ಘಟಕಗಳು ವಿವಿಧ ಸಮಸ್ಯೆಗಳಿಂದಾಗಿ ಸ್ಥಗಿತವಾಗಿವೆ. ನೀರಿನ ಸಮಸ್ಯೆಗಳ ದೂರಿಗಾಗಿ ಇಡೀ ಜಿಲ್ಲೆಗೆ ಕೇಂದ್ರೀಕೃತ ಸಹಾವಾಣಿ ಸ್ಥಾಪಿಸಿ ಎಂದು ಸಲಹೆ ನೀಡಿದರು.ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಜಿಲ್ಲೆಯಲ್ಲಿನ 540 ಘಟಕಗಳಪೈಕಿ 533 ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಪರಿಹಾರ ವಾಣಿ ಮೂಲಕ ದೂರುಗಳನ್ನು ಸ್ವೀಕರಿಸಲಾಗುತ್ತಿದೆ ಎಂದರು