Advertisement
ದಲಿತ ಸಿಎಂ ವಿಚಾರವಾಗಿ ಮಂಗಳವಾರ ನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸದ್ಯ ಸಿಎಂ ಕುರ್ಚಿ ಖಾಲಿ ಇಲ್ಲ. ಕುರ್ಚಿ ಖಾಲಿ ಇದ್ದರೆ ತಾನೆ ಮುಂದಿನ ಮಾತು. ಐದು ವರ್ಷ ಸಿದ್ದರಾಮಯ್ಯ ಸಿಎಂ ಆಗಿರುತ್ತಾರೆಂದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಖರ್ಗೆ ಅವರೇ ಹೇಳಿದ್ದಾರೆ ಎಂದು ಪುನರುಚ್ಚರಿಸಿದರು.
Related Articles
Advertisement
ಜಾರಕಿಹೊಳಿ ಅವರು ಮೈಸೂರಿಗೂ, ಹೋಗುತ್ತಾರೆ, ಬೆಳಗಾವಿಗೂ ಹೋಗುತ್ತಾರೆ. ನಾನು ವಿಜಯಪುರಕ್ಕೆ ಬಂದಿದ್ದೇನೆ. ಮುಖಂಡರನ್ನು ಭೇಟಿ ಮಾಡುವುದು ತಪ್ಪಾ?. ಸಚಿವ ಶಿವಾನಂದ ಪಾಟೀಲ್ ಭೇಟಿಯಾಗಿದ್ದರು. ನಾವು ಜತೆಗೆ ಊಟ ಮಾಡಿದ್ದೇವೆ. ಅದು ಕೂಡ ಸುದ್ದಿ ಮಾಡೋಕಾಗುತ್ತಾ ಎಂದು ಬೇಸರ ವ್ಯಕ್ತಪಡಿಸಿದರು.
ಉಪಚುನಾವಣೆಯಲ್ಲಿ ಕುಮಾರಸ್ವಾಮಿಗೆ ಚನ್ನಪಟ್ಟಣ ಮತದಾರರು ತಕ್ಕಪಾಠ ಕಲಿಸುತ್ತಾರೆ:
ವಿಜಯಪುರ: ಈ ಬಾರಿ ಚನ್ನಪಟ್ಟಣ ಉಪಚುನಾವಣೆಯಲ್ಲಿ ಮತದಾರರು ಜೆಡಿಎಸ್ ನಾಯಕ, ಕೇಂದ್ರ ಸಚಿವ ಹೆಚ್. ಡಿ.ಕುಮಾರಸ್ವಾಮಿ ಅವರಿಗೆ ತಕ್ಕಪಾಠ ಕಲಿಸುತ್ತಾರೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.
ಮುಂಬರುವ ಚನ್ನಪಟ್ಟಣ ಉಪಚುನಾವಣೆಯಲ್ಲಿ ಬಿಜೆಪಿ ನಾಯಕ ಸಿ.ಪಿ. ಯೋಗೇಶ್ವರ್ ಅವರಿಗೆ ಬಿಜೆಪಿ- ಜೆಡಿಎಸ್ ಮೈತ್ರಿ ಟಿಕೆಟ್ ಕೊಟ್ಟರೆ ನಮ್ಮ ಪಕ್ಷ ಉಳಿಯುತ್ತಾ ಎಂಬ ಕುಮಾರಸ್ವಾಮಿ ಹೇಳಿಕೆಗೆ ಮಂಗಳವಾರ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಆ ಪಕ್ಷ (ಜೆಡಿಎಸ್) ಎಲ್ಲಿದೆ ಉಳಿಯೋಕೆ?, ಜನ ಎಷ್ಟು ಅಂತಾ ಸಹಿಸಿಕೊಳ್ಳುತ್ತಾರೆ. ರಾಮನಗರ ಇತ್ತು, ರಾಮನಗರಕ್ಕೆ ರಾಜಿನಾಮೆ ಕೊಟ್ಟರು. ಈಗ ಸೋತು ಸುಣ್ಣರಾಗಿದ್ದಾರೆ. ಚನ್ನಪಟ್ಟಣಕ್ಕೆ ಜನ ಆಯ್ಕೆ ಮಾಡಿದ್ದರು. ಚನ್ನಪಟ್ಟಣ ಜನರನ್ನ ಕೇಳಿ ಮಂಡ್ಯ ಲೋಕಸಭಾ ಚುನಾವಣೆಗೆ ನಿಂತರಾ ಎಂದು ಪ್ರಶ್ನಿಸಿದರು.
ಅಲ್ಲದೇ, ಮಂಡ್ಯ ಲೋಕಸಭೆ ಚುನಾವಣೆಯಲ್ಲೂ ಚನ್ನಪಟ್ಟಣದಲ್ಲಿ ಜನ ಗೆಲ್ಲಿಸಿಕೊಂಡು ಬಂದಿದ್ದರು. ಆದರೆ, ಮಂಡ್ಯಕ್ಕೆ ಹೋಗುವ ಮುನ್ನ ಒಂದು ಮಾತು ಚನ್ನಪಟ್ಟಣ ಜನರನ್ನು ಕೇಳಿದ್ದರಾ?, ಚನ್ನಪಟ್ಟಣ ಮತದಾರರ ಅನುಮತಿ ತೆಗೆದುಕೊಂಡಿದ್ದಾರಾ?, ಏನೇನೂ ಕೇಳಿಲ್ಲ, ತಮ್ಮ ಮನಸ್ಸಿಗೆ ಬಂದಂಗೆ ಮಾಡಿದ್ದಾರೆ. ಹೀಗಾಗಿ ಜನ ಎಷ್ಟು ಅಂತಾ ಸಹಿಸಿಕೊಳ್ಳುತ್ತಾರೆ ಎಂದು ಕುಮಾರಸ್ವಾಮಿ ಅವರಿಗೆ ಜಮೀರ್ ಕುಟುಕಿದರು.
ಇದನ್ನೂ ಓದಿ: Jammu Kashmir Result: ಜಮ್ಮು-ಕಾಶ್ಮೀರದ ನೂತನ ಸಿಎಂ ಹೆಸರು ಘೋಷಿಸಿದ ಫಾರೂಕ್ ಅಬ್ದುಲ್ಲಾ