Advertisement

ಪಂಚಭಾಷೆಗಳಲ್ಲಿ ಕಮಾಲ್; ಬನಾರಸ್ ಮೂಲಕ ಬಣ್ಣದ ಲೋಕಕ್ಕೆ ಝೈದ್ ಖಾನ್ ರಂಗ ಪ್ರವೇಶ

01:11 PM Jul 06, 2022 | Team Udayavani |

ಬೆಂಗಳೂರು: ಕನ್ನಡವೂ ಸೇರಿ ಪಂಚ ಭಾಷೆಯಲ್ಲಿ ಏಕಕಾಲದಲ್ಲಿ ತಯಾರಾಗ್ತಿರುವ ಬನಾರಸ್ ಚಿತ್ರಕ್ಕೆ ನಿರ್ದೇಶಕ ಜಯತೀರ್ಥ ಸಾರಥ್ಯ ವಹಿಸಿಕೊಂಡಿದ್ದಾರೆ. ಟೈಟಲ್, ಮೋಷನ್ ಪೋಸ್ಟರ್ ಹಾಗೂ ಇತ್ತೀಚಿಗಷ್ಟೇ ರಿಲೀಸ್ ಆಗಿರೋ ಮಾಯಗಂಗೆ ವೀಡಿಯೋ ಸಾಂಗ್ ಕೂಡಾ ಪಂಚ ಭಾಷೆಗಳಲ್ಲೂ ಚಿತ್ರದ ಮೇಲಿನ ನಿರೀಕ್ಷೆಗಳನ್ನ ಹೆಚ್ಚಿಸುತ್ತಿದೆ.

Advertisement

ಈ ಮೂಲಕ ಈ ಪ್ಯಾನ್ ಇಂಡಿಯಾ ಸಿನೆಮಾ ಹೊಸದೊಂದು ದಾಖಲೆಯನ್ನು ಸೃಷ್ಟಿಸೋದು ಪಕ್ಕಾ ಅನ್ನುವ ಮಾತುಗಳೂ ಜೋರಾಗಿಯೇ ಕೇಳಿ ಬರ್ತಿದೆ. ಈ ಚಿತ್ರದ ಮೂಲಕ ಭಾರತೀಯ ಚಿತ್ರರಂಗಕ್ಕೆ ಸ್ಮಾರ್ಟ್ ಹೀರೋ ಪರಿಚಯವೂ ಆಗ್ತಿದೆ.

ಹೌದು ಬನಾರಸ್ ಚಿತ್ರದ ನಾಯಕ ಝೈದ್ ಖಾನ್ ಈಗ ಚಿರಪರಿಚಿತ. ಒಂದೇ ಸಿನೆಮಾ ಅದರಲ್ಲೂ ಮೊದಲ ಪ್ರಯತ್ನದಲ್ಲೇ ಮೆಚ್ಚುಗೆ ಗಳಿಸಿರುವ ಈ ಹುಡುಗ ಇಡೀ ಚಿತ್ರರಂಗಕ್ಕೆ ಮುಂದೊಂದು ದಿನ ಭರವಸೆಯ ನಾಯಕನ ಪಟ್ಟಿಗೆ ಸೇರೋ ಎಲ್ಲಾ ಲಕ್ಷಣಗಳೂ ಎದ್ದು ಕಾಣುತ್ತಿವೆ. ಈ ಸಿನೆಮಾದಿಂದ ಬಿಡುಗಡೆಯಾದ ಮಾಯಗಂಗೆ ಹಾಡೇ ಜೈದ್ ನಟನಾ ರಂಗಕ್ಕೆ ಬರುವ ಮುಂಚೆ ಮಾಡಿಕೊಂಡ ಸಕಲ ತಯಾರಿಗಳ ಪಟ್ಟಿಯನ್ನ ಕಣ್ಣ ಮುಂದೆ ತರಿಸುತ್ತದೆ. ಈ ಬಗ್ಗೆ ಕನ್ನಡ ಮಾತ್ರವಲ್ಲದೇ, ಎಲ್ಲೆಡೆ ಝೈದ್ ಖಾನ್ ಅವರ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ತಮ್ಮಿಷ್ಟದ ಅನೇಕ ನಟರ ಹಿಂದಿನ ಶ್ರಮದ ಬಗ್ಗೆ ಗಮನ ಹರಿಸಿ, ತಾನೂ ಅವರಂತೆ ಬಣ್ಣದ ಲೋಕದಲ್ಲಿ ಮಿಂಚಬೇಕಾದರೆ ಏನೆಲ್ಲ ಸಕಲ ಸಿದ್ದತೆಗಳು ಬೇಕೂ ಅದನ್ನೆಲ್ಲಾ ಈ ನಟ ಮೊದಲಿನಿಂದಲೇ ಅಭ್ಯಸಿಸುತ್ತಿದ್ದರು. ತಾನು ಚಿತ್ರರಂಗದಲ್ಲಿ ನೆಲೆಯೂರಬೇಕಾದರೆ, ನಟನೆ, ಡ್ಯಾನ್ಸ್, ಫೈಟ್, ಸೇರಿದಂತೆ ಹಲವಾರು ಪ್ರಕ್ರಿಯೆ ಗಳಲ್ಲಿ ತಮ್ಮನ್ನು ತಾವು ಪಳಗಿಸಿಕೊಂಡಿದ್ದರ ಫಲವೇ ಝೈದ್ ಇಂದು ಒಂದೊಳ್ಳೆ ಭರವಸೆಯ ನಟನಾಗಿ ಹೊರಹೊಮ್ಮುವ ಲಕ್ಷಣಗಳು ಮೊದಲ ಪ್ರಯತ್ನದ ಬನಾರಸ್ ನಲ್ಲಿಯೇ ಮೂಡಿಬಂದಿದೆ.

Advertisement

ಹಲವು ತಯಾರಿಗಳೊಂದಿಗೆ ಚಿತ್ರ ಬದುಕಿಗೆ ಮುನ್ನುಡಿ ಬರೆಯಲು ತಪಸ್ಸು ಮಾಡಿ ಕಾದಿದ್ದ ಝೈದ್ ಗೆ ಜಯತೀರ್ಥ ರವರು ತಂದ ಬನಾರಸ್ ನ ಪ್ರೇಮಕಥೆ ವರವಾಗಿ ಲಭಿಸಿದೆ ಎನ್ನಬಹುದು. ಮಾಯಗಂಗೆ ಹಾಡಿನಲ್ಲಿ ದೇವರೂರಿನ ದಾರಿಹೋಕನಾಗಿಸುವ ಈ ಹಾಡು ಝದ್ ಖಾನ್ ಅವರನ್ನ ಲವರ್ ಬಾಯ್ ಆಗಿ ಸ್ವೀಕರಿಸಿದೆ. ಪ್ರೇಮದಲ್ಲಿ ಮಿಂದೆಳಿಸುವ ಹಾಡಿನಲ್ಲೇ ಹುಡುಗ, ಹುಡುಗೀರ ದಿಲ್ ಕದ್ದಿರೋ ಈ ನವನಟನ ತೆರೆಯ ಮೇಲೆ ಕಣ್ತುಂಬಿಕೊಳ್ಳಲು ಈಗಾಗಲೇ ದೊಡ್ಡ ಅಭಿಮಾನಿ ಬಳಗವೂ ಸೃಷ್ಟಿಯಾಗಿದೆ. ಈ ಮೂಲಕ ಝೈದ್ ಖಾನ್ ಎಂಬ ನವನಾಯಕ ಹೀರೋ ಆಗಿ ಗಟ್ಟಿಯಾಗಿ ನೆಲೆ ಕಂಡುಕೊಳ್ಳುತ್ತಾರೆಂಬ ಮಾತುಗಳೂ ವ್ಯಾಪಕವಾಗಿಯೇ ಕೇಳಿ ಬರುವ ಜೊತೆಗೆ ಬನಾರಸ್ ನ ಮೇಲೆಯೂ ಭರವಸೆ ಹೆಚ್ಚಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next