Advertisement

ಝಾಗ್ರೆಬ್‌ ಓಪನ್‌ ಕುಸ್ತಿ ಚಾಂಪಿಯನ್‌ಶಿಪ್‌: ಕಂಚು ಗೆದ್ದ ಆಶು

11:30 PM Feb 05, 2023 | Team Udayavani |

ಝಾಗ್ರೆಬ್‌: ಝಾಗ್ರೆಬ್‌ ಓಪನ್‌ ರ್‍ಯಾಂಕಿಂಗ್‌ ಸೀರಿಸ್‌ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಆಶು ಕಂಚಿನ ಪದಕ ಜಯಿಸಿದ್ದಾರೆ. 67 ಕೆಜಿ ವಿಭಾಗದ ಗ್ರೀಕೊ ರೋಮನ್‌ ಸ್ಪರ್ಧೆಯಲ್ಲಿ ಅವರು ಲಿಥುವೇನಿಯಾದ ಅಡೋಮಸ್‌ ಗ್ರಿಗಲಿಯುನಾಸ್‌ ವಿರುದ್ಧ 5-0 ಅಂತರದ ಗೆಲುವು ಸಾಧಿಸಿದರು.

Advertisement

23 ವರ್ಷದ, ಏಷ್ಯನ್‌ ಚಾಂಪಿಯನ್‌ಶಿಪ್‌ ಕಂಚಿನ ಪದಕ ವಿಜೇತೆ ಆಶು ಅವರಿಂದ ಭಾರತಕ್ಕೆ ಎರಡನೇ ಕಂಚಿನ ಪದಕ ಒಲಿಯಿತು. ಇದಕ್ಕೂ ಮುನ್ನ ಪುರುಷರ ಅಂಡರ್‌-23 ವಿಭಾಗದಲ್ಲಿ ಫ್ರೀಸ್ಟೈಲ್‌ ರೆಸ್ಲರ್‌ ಅಮಾನ್‌ ಸೆಹ್ರಾವತ್‌ ಕೂಡ ಕಂಚಿನ ಪದಕ ಜಯಿಸಿದ್ದರು (57 ಕೆಜಿ ವಿಭಾಗ).

ಅರ್ಹತಾ ಸುತ್ತಿನಲ್ಲಿ ಆಶು ಇರಾನ್‌ನ ರೆಝಾ ಮೆಹದಿ ಅಬ್ಟಾಸಿ ವಿರುದ್ಧ 9-0 ಅಂತರದಿಂದ ಸೋಲನುಭವಿಸಿದ್ದರು. ಆದರೆ ರೆಪಿಶಾಜ್‌ ಸುತ್ತಿನಲ್ಲಿ ತಿರುಗಿ ಬಿದ್ದು ಹಂಗೇರಿಯ ಆ್ಯಡಂ ಫೋಯಿಲೆಕ್‌ ಅವರನ್ನು 8-0, ನಾರ್ವೆಯ ಹಾವರ್ಡ್‌ ಜಾರ್ಜೆನ್ಸೆನ್‌ ಅವರನ್ನು 9-0 ಅಂತರದಿಂದ ಮಣಿಸಿ ಕಂಚಿನ ಸುತ್ತಿನ ಪದಕ ಸುತ್ತನ್ನು ಪ್ರವೇಶಿಸಿದರು.

ಮತ್ತೋರ್ವ ಗ್ರೀಕೊ ರೋಮನ್‌ ರೆಸ್ಲರ್‌ ಸಾಗರ್‌ (63 ಕೆಜಿ) ರೆಪಿಶಾಜ್‌ ಸುತ್ತಿನಲ್ಲಿ ಆಸ್ಟ್ರಿಯಾದ ಸ್ಪರ್ಧಿಗೆ ಸೋತರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next