Advertisement

ಮುಂದಿನ ಪಂದ್ಯದಲ್ಲಿ ಹೊಸ ದಾಖಲೆ ನಿರ್ಮಾಣ ಬರೆಯಲಿರುವ ಚಾಹಲ್

09:54 AM Nov 10, 2019 | keerthan |

ನಾಗ್ಪುರ: ಬಾಂಗ್ಲಾದೇಶ ವಿರುದ್ಧದ ಮೂರನೇ ಮತ್ತು ಅಂತಿಮ ಟಿ ಟ್ವೆಂಟಿ ಪಂದ್ಯ ರವಿವಾರ ನಾಗ್ಪುರದಲ್ಲಿ ನಡೆಯಲಿದೆ. ಭಾರತದ ಪ್ರಮುಖ ಸ್ಪಿನ್ ಅಸ್ತ್ರ ಯಜುವೇಂದ್ರ ಚಾಹಲ್ ಈ ಪಂದ್ಯದಲ್ಲಿ ಹೊಸ ದಾಖಲೆ ಬರೆಯುವ ಸನಿಹದಲ್ಲಿದ್ದಾರೆ.

Advertisement

ಚಾಹಲ್ ಇನ್ನು ಒಂದು ವಿಕೆಟ್ ಪಡೆದರೆ ಅಂತಾರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್ ನಲ್ಲಿ 50 ವಿಕೆಟ್ ಪಡೆದ ಸಾಧನೆ ಮಾಡಲಿದ್ದಾರೆ. ಈ ಸಾಧನೆ ಮಾಡಿದ ಮೂರನೇ ಭಾರತೀಯ ಎಂಬ ದಾಖಲೆಗೆ ಪಾತ್ರವಾಗಲಿದ್ದಾರೆ.

ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಕೇರಂ ಸ್ಪಿನ್ನರ್ ಆರ್ ಅಶ್ವಿನ್ ಈ ಸಾಧನೆ ಮಾಡಿದ ಮೊದಲೀರ್ವರು. ಅವರಿಬ್ಬರು ಕ್ರಮವಾಗಿ 51 ಮತ್ತು 52 ವಿಕೆಟ್ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next