ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಮತ್ತು ಅವರ ಪತ್ನಿ ಹೇಜಲ್ ಕೀಚ್ ಶನಿವಾರ ತಮ್ಮ ಗಂಡು ಮಗುವಿನ ಹೆಸರನ್ನು ಬಹಿರಂಗಪಡಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಯುವರಾಜ್ ದಂಪತಿಗಳು ತಮ್ಮ ಮಗನೊಂದಿಗೆ ಇರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. “ಜಗತ್ತಿಗೆ ಸುಸ್ವಾಗತ ಓರಿಯನ್ ಕೀಚ್ ಸಿಂಗ್” ಎಂದು ಯುವರಾಜ್ ಹೃದಯದ ಎಮೋಜಿಯೊಂದಿಗೆ ಶೀರ್ಷಿಕೆಯಲ್ಲಿ ಬರೆದಿದ್ದಾರೆ.
“ಮಮ್ಮಿ ಮತ್ತು ಡ್ಯಾಡಿ ತಮ್ಮ ಪುಟ್ಟ “ಪುತ್ತರ್”ನನ್ನ ಪ್ರೀತಿಸುತ್ತೇವೆ. ನಕ್ಷತ್ರಗಳ ನಡುವೆ ನಿನ್ನ ಹೆಸರು ಬರೆಯಲ್ಪಟ್ಟಂತೆ ನಿನ್ನ ಕಣ್ಣುಗಳು ಪ್ರತಿ ನಗುವಿನಲ್ಲೂ ಮಿನುಗುತ್ತವೆ” ಎಂದು #HappyFathersDay ಹ್ಯಾಶ್‌ಟ್ಯಾಗ್ ಜತೆಗೆ ಸಂಭ್ರಮ ಹಂಚಿಕೊಂಡಿದ್ದಾರೆ.
ಜನವರಿ 25 ರಂದು ದಂಪತಿಗಳು ತಮ್ಮಮಗುವಿಗೆ ಜನ್ಮ ನೀಡಿದ ಬಗ್ಗೆ ಘೋಷಿಸಿದ್ದರು.