Advertisement

ಗುಡ್‌ ಗುಡ್ಡರ್‌ ಗುಡ್ಡೆಸ್ಟ್‌: ಹೊಸಬರ ಕಿಕ್‌ ಸ್ಟಾರ್ಟ್‌

04:18 PM May 23, 2022 | Team Udayavani |

ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ “ಗುಡ್‌ ಗುಡ್ಡರ್‌ ಗುಡ್ಡೆಸ್ಟ್‌’ ಸಿನಿಮಾಕ್ಕೆ ಇತ್ತೀಚೆಗೆ ಚಾಲನೆ ದೊರೆಕಿತು. ಬೆಂಗಳೂರಿನ ವೀರಾಂಜನೇಯ ಸ್ವಾಮಿ ದೇಗುಲದಲ್ಲಿ ನಡೆದ “ಗುಡ್‌ ಗುಡ್ಡರ್‌ ಗುಡ್ಡೆಸ್ಟ್‌’ ಸಿನಿಮಾದ ಮುಹೂರ್ತ ಸಮಾರಂಭದಲ್ಲಿ “ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌’ ರಿಯಾಲಿಟಿ ಶೋ ವಿನ್ನರ್‌ ಚೈತ್ರಾಲಿ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿದರೆ, ಭರತನಾಟ್ಯದಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಅಂಧ ಕಲಾವಿದ ಬೂಸೆ ಗೌಡ ಕ್ಯಾಮೆರಾ ಸ್ವಿಚ್‌ ಆನ್‌ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು.

Advertisement

ಕಳೆದ ಹದಿನೈದು ವರ್ಷಗಳಿಂದ ಚಿತ್ರರಂಗದಲ್ಲಿ ಸಂಭಾಷಣೆಕಾರನಾಗಿ ಗುರುತಿಸಿಕೊಂಡಿರುವ ಯುವಧೀರ, “ಗುಡ್‌ ಗುಡ್ಡರ್‌ ಗುಡ್ಡೆಸ್ಟ್‌’ ಸಿನಿಮಾ ಮೂಲಕ ನಿರ್ದೇಶನ ಮತ್ತು ನಾಯಕ ನಟನಾಗಿ ಸ್ಯಾಂಡಲ್‌ವುಡ್‌ ಗೆ ಪರಿಚಯವಾಗುತ್ತಿದ್ದಾರೆ.

ಮುಹೂರ್ತದ ಬಳಿಕ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಯುವಧೀರ, “ಕಳೆದ ಹದಿನೈದು ವರ್ಷಗಳಿಂದ ಸಿನಿಮಾರಂಗದಲ್ಲಿ ಸಕ್ರಿಯನಾಗಿದ್ದೇನೆ. “ಮಿಂಚು’, “ಜಾನಿ ಜಾನಿ ಎಸ್‌ ಪಪ್ಪಾ’ ಸೇರಿದಂತೆ ಹಲವು ಸಿನಿಮಾಗಳಿಗೆ ಕೆಲಸ ಮಾಡಿದ್ದೇನೆ. ನಿರ್ದೇಶಕನಾಗಿ ಇದು ನನ್ನ ಮೊದಲ ಸಿನಿಮಾ. ಒಂದೇ ಕಥೆ ಮೂರು ಡಿಫ‌ರೆಂಟ್‌ ಟ್ರಾಫಿಕ್‌ನಲ್ಲಿ ನಡೆಯುತ್ತದೆ. ಇದು ಯಾವುದೋ ಒಂದು ಜಾನರ್‌ಗೆ ಸೀಮಿತವಾದ ಸಿನಿಮಾವಲ್ಲ. ಇದೊಂದು ಡಾರ್ಕ್‌ ಹ್ಯೂಮರ್‌ ಸೆಟೈರ್‌ ಕಾಮಿಡಿ ಸಿನಿಮಾವಾಗಿದ್ದು, ಜೊತೆಗೆ ರೊಮ್ಯಾನ್ಸ್‌, ಥ್ರಿಲ್ಲರ್‌, ಡ್ರಾಮಾ, ಕ್ರೈಂ, ಆ್ಯಕ್ಷನ್‌ ಕೂಡ ಒಳಗೊಂಡಿದೆ’ ಎಂದರು

ಇದನ್ನೂ ಓದಿ:‘ಓ ಮೈ ಲವ್‌’ ಗೆ ಕೆ.ರಾಘವೇಂದ್ರ ರಾವ್‌ ಮೆಚ್ಚುಗೆ

ಇನ್ನು ನಿರ್ದೇಶಕ ಯುವಧೀರ ಸಿನಿಮಾದಲ್ಲಿ ನಾಯಕನಾಗಿಯೂ ಅಭಿನಯಿಸುತ್ತಿದ್ದು, ಇವರಿಗೆ ಜೋಡಿಯಾಗಿ ಆದ್ಯಾ ಪ್ರಿಯಾ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ಸೋನು ಗೌಡ, ಪ್ರಮೋದ್‌ ಶೆಟ್ಟಿ, ಗೋಪಾಲಕೃಷ್ಣ ದೇಶಪಾಂಡೆ, ಸುಚೇಂದ್ರ ಪ್ರಸಾದ್‌, ವಿ. ಮನೋಹರ್‌ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

Advertisement

“ಶ್ರೀನಿಧಿ ಪಿಕ್ಚರ್’ ಬ್ಯಾನರ್‌ ತಯಾರಾಗುತ್ತಿರುವ “ಗುಡ್‌ ಗುಡ್ಡರ್‌ ಗುಡ್ಡೆಸ್ಟ್‌’ ಚಿತ್ರಕ್ಕೆ ಬಿಲ್ಡರ್‌ ಆಗಿರುವ ಸುರೇಶ್‌ ಬಿ. ಬಂಡವಾಳ ಹೂಡಿ ನಿರ್ಮಾಣ ಮಾಡುತ್ತಿದ್ದಾರೆ. “ಗುಡ್‌ ಗುಡ್ಡರ್‌ ಗುಡ್ಡೆಸ್ಟ್‌’ ಚಿತ್ರಕ್ಕೆ ಸಂದೀಪ್‌ ಹೊಲ್ಲೂರಿ ಛಾಯಾಗ್ರಹಣ, ಕಿರಣ್‌ ಸಂಕಲನ ಕಾರ್ಯವಿದೆ. ಚಿತ್ರದ ಹಾಡುಗಳಿಗೆ ಶಶಾಂಕ್‌ ಶೇಷಗಿರಿ ಸಂಗೀತ ಸಂಯೋಜನೆಯಿದೆ. ಬೆಂಗಳೂರು, ಮಂಗಳೂರು, ಮೈಸೂರು ಸುತ್ತಮುತ್ತ ಸುಮಾರು 45 ದಿನಗಳ ಕಾಲ “ಗುಡ್‌ ಗುಡ್ಡರ್‌ ಗುಡ್ಡೆಸ್ಟ್‌’ ಸಿನಿಮಾದ ಶೂಟಿಂಗ್‌ ನಡೆಸಲು ಚಿತ್ರ ಯೋಜನೆ ಹಾಕಿಕೊಂಡಿದೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next