ವಾಷಿಂಗ್ಟನ್: ಯೂಟ್ಯೂಬ್ ಜಗತ್ತಿನಲ್ಲಿ ಅತೀ ಹೆಚ್ಚು ಸಬ್ಸಕ್ರೈಬರ್ಸ್ ಹೊಂದಿವರಲ್ಲಿ ಒಬ್ಬರಾಗಿರುವ ʼಮಿಸ್ಟರ್ ಬೀಸ್ಟ್ʼ ಅಂದರೆ ಜಿಮ್ಮಿ ಡೊನಾಲ್ಡ್ಸನ್ ಯಾರಿಗೆ ಗೊತ್ತಿಲ್ಲ ಹೇಳಿ ಬರೋಬ್ಬರಿ 130 ಮಿಲಿಯನ್ ಸಬ್ಸಕ್ರೈಬರ್ಸ್ ಹೊಂದಿರುವ ಈ ವಿಡಿಯೋಗಳು ಕೋಟಿ ಗಟ್ಟಲೆ ಸಂಪಾದನೆ ಮಾಡುತ್ತದೆ.
ಒಂದಲ್ಲ ಒಂದು ವಿಭಿನ್ನ ಕಂಟೆಂಟ್ ಗಳನ್ನು ಆಪ್ಲೋಡ್ ಮಾಡುವ ಮಿ.ಬೀಸ್ಟ್ ಇದೀಗ ಎಲ್ಲರೂ ಮೆಚ್ಚುವ ಕಾಯಕವೊಂದನ್ನು ಮಾಡಿದ್ದಾನೆ. ಈತನ ಈ ಕಾಯಕಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಭಾಗಶಃ ಕುರುಡಾಗಿರುವ ಜನ, ಕಣ್ಣಿನ ಪೊರೆಯಿಂದ ದೃಷ್ಟಿ ಕಳೆದುಕೊಂಡ ಜನ. ಒಟ್ಟಿನಲ್ಲಿ ಅಂಧತ್ವದ ಸಮಸ್ಯೆಯಿಂದ ಬಳಲುತ್ತಿದ್ದ ಸುಮಾರು 1000 ಜನರಿಗೆ ಮೊದಲ ಬಾರಿಗೆ ದೃಷ್ಟಿ ಕಾಣುವಂತೆ ಮಾಡಿದ್ದಾರೆ ಈ ಮಿ.ಬೀಸ್ಟ್. ಮೊದಲು ಜಿಮ್ಮಿ ಡೊನಾಲ್ಡ್ಸನ್ ಅವರ ತಂಡ ಯಾರಿಗೆ ತನ್ನ ಕಣ್ಣಿನ ದೃಷ್ಟಿಯ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿಲ್ಲದ ಸ್ಥಿತಿ ಇರುತ್ತದೋ ಅಂಥವರನ್ನು ಹುಡುಕಿತ್ತು.
ಸೆಪ್ಟೆಂಬರ್ ನಲ್ಲಿ ಮಿ.ಬೀಸ್ಟ್ ಜಾಕ್ಸನ್‌ವಿಲ್ಲೆ ಮೂಲದ ನೇತ್ರಶಾಸ್ತ್ರಜ್ಞ ಮತ್ತು ಶಸ್ತ್ರಚಿಕಿತ್ಸಕ ಡಾ. ಜೆಫ್ ಲೆವೆನ್ಸನ್ ಈ ಬಗ್ಗೆ ಮಾತನಾಡಿಕೊಂಡಿರುತ್ತಾರೆ. ಅದರಂತೆ ಸುಮಾರು 1000 ಮಂದಿಯ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆ ಹಾಗೂ ಭಾಗಶಃ ಅಂಧತ್ವವುಳ್ಳವರಿಗೆ ದೃಷ್ಟಿಯನ್ನು ನೀಡಲು ಮುಂದಾಗುತ್ತಾರೆ. ಅಷ್ಟು ಮಂದಿಯ ಹಣವನ್ನು ಪಾವತಿಸಿದ್ದಾರೆ.
ಇನ್ನು ದೃಷ್ಟಿ ಪಡೆದ ಕೆಲವರಿಗೆ ಮಿಸ್ಟರ್ ಮೀಸ್ಟ್ ಉಡುಗೊರೆಯನ್ನು ನೀಡಿ ಸಂತಸ ಪಡಿಸಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿರುವ ಮಿ.ಬೀಸ್ಟ್ ಚಿಕಿತ್ಸೆ ಪಡೆದವರ ಮೊದಲ ಅನುಭವ, ಮೊದಲ ಬಾರಿ ಬೆಳಕನ್ನು ನೋಡುವ ಕ್ಷಣವನ್ನು ವಿಡಿಯೋದಲ್ಲಿ ಚಿತ್ರೀಕರಿಸಿದ್ದು, ಎರಡೇ ದಿನದಲ್ಲಿ 57 ಮಿಲಿಯನ್ ಗೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ.
ಜಮೈಕಾ, ಹೊಂಡುರಾಸ್, ನಮೀಬಿಯಾ, ಮೆಕ್ಸಿಕೋ, ಇಂಡೋನೇಷ್ಯಾ, ಬ್ರೆಜಿಲ್, ವಿಯೆಟ್ನಾಂ ಮತ್ತು ಕೀನ್ಯಾ ಮುಂತಾದ ಕಡೆಯ ಮಂದಿ ಮೊದಲ ಬಾರಿ ದೃಷ್ಟಿಯನ್ನು ಪಡೆದುಕೊಂಡಿದ್ದಾರೆ.