Advertisement

ಸ್ಮಾರ್ಟ್‌ಟಿವಿಯಲ್ಲೂ ಯೂಟ್ಯೂಬ್‌ ಶಾರ್ಟ್ಸ್; ಹೊಸ ಅಪ್‌ಡೇಟ್‌ ತರಲು ಸಿದ್ಧತೆ

07:49 PM Aug 24, 2022 | Team Udayavani |

ವಾಷಿಂಗ್ಟನ್‌: ಯೂಟ್ಯೂಬ್‌ ಸಂಸ್ಥೆಯು ಸ್ಮಾರ್ಟ್‌ಟಿವಿಯಲ್ಲಿ ಯೂಟ್ಯೂಬ್‌ ವೀಕ್ಷಿಸುವವರಿಗಾಗಿ ಹೊಸ ಅಪ್‌ಡೇಟ್‌ ತರಲು ಸಿದ್ಧವಾಗಿದೆ.

Advertisement

ಯೂಟ್ಯೂಬ್‌ ಶಾರ್ಟ್ಸ್ ಗಳನ್ನು ಟಿವಿಯಲ್ಲೂ ನೋಡುವುದಕ್ಕೆ ಅವಕಾಶ ಮಾಡಿಕೊಡುವುದಾಗಿ ಹೇಳಲಾಗಿದೆ. ಹಾಗೆಯೇ ಅದಕ್ಕೆ ಲೈಕ್‌, ಕಾಮೆಂಟ್‌ ಮಾಡುವ ಆಯ್ಕೆಯೂ ಇರಲಿದೆ.

ಜತೆಯಲ್ಲಿ ಯೂಟ್ಯೂಬ್‌ ಟಿವಿಯಲ್ಲಿ ಒಮ್ಮೆಲೆ ನಾಲ್ಕು ಲೈವ್‌ ಸ್ಟ್ರೀಮಿಂಗ್‌ಗಳನ್ನು ನೋಡುವುದಕ್ಕೂ ಅವಕಾಶ ಮಾಡಿಕೊಡುವುದಾಗಿ ಯೂಟ್ಯೂಬ್‌ ತಿಳಿಸಿದೆ.

ಇತ್ತೀಚೆಗೆಷ್ಟೇ ತನ್ನ ಶಾರ್ಟ್ಸ್ ಗಳಲ್ಲಿ ವಾಟರ್‌ಮಾರ್ಕ್‌ ಹಾಕುವುದಾಗಿ ಯೂಟ್ಯೂಬ್‌ ಘೋಷಿಸಿತ್ತು. ಯೂಟ್ಯೂಬ್‌ ಮ್ಯೂಸಿಕ್‌ಗಳು ಕೆಲವು ಅಪ್‌ಡೇಟ್‌ಗಳನ್ನು ತರುವುದಕ್ಕೆ ಚಿಂತನೆ ನಡೆಸುತ್ತಿರುವುದಾಗಿ ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next