Advertisement

Youtuber Dr Bro: ಯೂಟ್ಯೂಬ್‌ ಆದಾಯ ರಿವೀಲ್‌ ಮಾಡಿದ ಡಾ.ಬ್ರೋ; ತಿಂಗಳ ಸಂಪಾದನೆ ಎಷ್ಟು?

05:43 PM Aug 25, 2024 | Team Udayavani |

ಬೆಂಗಳೂರು: ತನ್ನ ಪ್ರವಾಸಿ ಸಾಹಸದ ವಿಡಿಯೋಗಳಿಂದಲೇ ಅಪಾರ ಜನಪ್ರಿಯತೆಗಳಿಸಿರುವ ಯೂಟ್ಯೂಬರ್ ಡಾ.ಬ್ರೋ (Youtuber Dr.Bro) ಇತ್ತೀಚೆಗೆ ಲೈವ್‌ ಬಂದು ಹತ್ತಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Advertisement

ಡಾ.ಬ್ರೋ ಎಂದೇ ಖ್ಯಾತಿಯಾಗಿರುವ ಗಗನ್ ಶ್ರೀನಿವಾಸ್ (Gagan Srinivas) ಕಳೆದ ಕೆಲ ವರ್ಷಗಳಿಂದ ದೇಶ – ವಿದೇಶಗಳನ್ನು ಸುತ್ತುತ್ತಲೇ, ಕನ್ನಡ ಪ್ರೀತಿಯನ್ನು ಪಸರಿಸಿದ್ದಾರೆ. 25 ದೇಶಗಳನ್ನು ಸುತ್ತಿ ಪ್ರವಾಸದ ಅನುಭವವನ್ನು ಕನ್ನಡಿಗರಿಗೆ ಹಂಚಿರುವ ಡಾ.ಬ್ರೋ ಅವರ ಚಾನೆಲ್‌ಗೆ 2.55 ಮಿಲಿಯನ್‌ ಸಬ್‌ ಸ್ಕ್ರೈಬರ್ಸ್‌ ಗಳಿದ್ದಾರೆ.

ದೂರದ ತಾಲಿಬಾನ್‌ ಆಕ್ರಮಿತ ಅಘ್ಘಾನ್‌ನಿಂದಿಡಿದು ಬಹುತೇಕರಿಗೆ ಪರಿಚಯವೇ ಇಲ್ಲದ ಆಫ್ರಿಕಾ ಖಂಡದ ಯಾವುದೋ ಒಂದು ದೇಶ ಸೇರಿದಂತೆ ರಾಮಮಂದಿರದ ದರ್ಶನವನ್ನು ಮಾಡಿಸಿದ ಡಾ.ಬ್ರೋ ಅವರ ವಿಡಿಯೋಗಳಿಗೆ ಮಿಲಿಯನ್‌ ಗಟ್ಟಲೆ ವೀಕ್ಷಣೆ ಬರುತ್ತದೆ.

ಇದನ್ನೂ ಓದಿ: Darshan: ಕೈಯಲ್ಲಿ ಸಿಗರೇಟ್‌,ಮುಖದಲ್ಲಿ ನಗು.. ಜೈಲಿನಲ್ಲಿರುವ ದರ್ಶನ್‌ ಫೋಟೋ ವೈರಲ್

ಯಾವಾಗಲೂ ದೇಶ – ವಿದೇಶ ಸುತ್ತುವ ಗಗನ ಬಿಗ್‌ ಬಾಸ್‌ಗೆ ಬರುತ್ತಾರಾ?, ಅವರು ಯೂಟ್ಯೂಬ್‌ ಚಾನೆಲ್‌ನಿಂದ ತಿಂಗಳಿಗೆ ಎಷ್ಟು ಆದಾಯವನ್ನು ಗಳಿಸುತ್ತಾರೆ ಎನ್ನುವ ವಿಚಾರದ ಬಗ್ಗೆ ಲೈವ್‌ನಲ್ಲಿ ಮಾತನಾಡಿದ್ದಾರೆ.

Advertisement

ವಿಡಿಯೋಗಳಿಗೆ ಯಾವ ಕ್ಯಾಮೆರಾ ಉಪಯೋಗಿಸುತ್ತೀರಿ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, “ನಾನು ನಾಲ್ಕೈದು ಕ್ಯಾಮೆರಾಗಳನ್ನು ಯೂಸ್‌ ಮಾಡುತ್ತೇನೆ. ಡ್ರೋನ್‌, ಗೋ ಪ್ರೋ, ಇನ್ಸ್ಟಾ360, ಇನ್ನೊಂದು ಐಫೋನ್‌ ಯೂಸ್‌ ಮಾಡ್ತೇನೆ. ದೊಡ್ಡ ಕ್ಯಾಮೆರಾ ಇಟ್ಟುಕೊಂಡು ಹೋದರೆ ಜನ ಅನುಮಾನದಿಂದ ನೋಡ್ತಾರೆ. ಫೋನ್‌ ಕ್ಯಾಮೆರಾ ಯೂಸ್‌ ಮಾಡಿದರೆ ತುಂಬಾ ಒಳ್ಳೆಯದು. ಅದು ಜನರಿಗೆ ಅಷ್ಟು ನೋಟಿಸ್‌ ಆಗಲ್ಲ. ನೀವು ಯೂಟ್ಯೂಬ್‌ ಆರಂಭಿಸಿದರೆ ಫೋನ್‌ ಕ್ಯಾಮೆರಾನೇ ಬೆಸ್ಟ್”‌ ಎಂದು ಹೇಳಿದ್ದಾರೆ.

ಬಿಗ್‌ ಬಾಸ್‌ಗೆ ಹೋಗ್ತೀರಾ?: ಪ್ರತಿಸಲಿ ಬಿಗ್‌ ಬಾಸ್‌(Bigg Boss) ಶುರುವಾದಾಗ ಸ್ಪರ್ಧಿಗಳ ಹೆಸರಿನಲ್ಲಿ ಡಾ.ಬ್ರೋ ಅವರ ಹೆಸರು ಕೇಳಿಬರುತ್ತದೆ. ಕಳೆದ ವರ್ಷವೂ ಅವರ ಹೆಸರು ಹರಿದಾಡಿತ್ತು. ಲೈವ್‌ನಲ್ಲಿ ಈ ಬಗ್ಗೆ ಅವರಿಗೆ ಪ್ರಶ್ನೆಯನ್ನು ಕೇಳಲಾಗಿದೆ. ಇದಕ್ಕೆ ಉತ್ತರಿಸಿರುವ ಅವರು, “3 ತಿಂಗಳು ಒಂದು ಮನೆಯಲ್ಲಿರುವುದು ತುಂಬಾ ಕಷ್ಟವಾಗುತ್ತದೆ. 3 ತಿಂಗಳಿನಲ್ಲಿ 5 ದೇಶಗಳನ್ನು ಸುತ್ತಿಬರಬಹುದು” ಎಂದು ಹೇಳಿದ್ದಾರೆ.

ಯೂಟ್ಯೂಬ್‌ ಆದಾಯ ರಿವೀಲ್:‌ ದೇಶ – ವಿದೇಶ ಸುತ್ತುವ ಡಾ.ಬ್ರೋ ಯೂಟ್ಯೂಬ್‌ನಲ್ಲಿ ಎಷ್ಟು ಸಂಪಾದನೆ ಮಾಡುತ್ತಾರೆ ಎನ್ನುವ ಪ್ರಶ್ನೆ ಅನೇಕರಿದೆ. ಲೈವ್ ನಲ್ಲಿ ತನ್ನ ಯೂಟ್ಯೂಬ್‌ ಸ್ಟುಡಿಯೋ ತೋರಿಸಿ ತಮ್ಮ ಯೂಟ್ಯೂಬ್‌ ಆದಾಯವನ್ನು (YouTube Income) ಅವರು ರಿವೀಲ್‌ ಮಾಡಿದ್ದಾರೆ.

“ಕಳೆದ ಒಂದು ತಿಂಗಳ ನನ್ನ ಯೂಟ್ಯೂಬ್ ಸಂಬಳ 2 ಸಾವಿರದ 100 ಡಾಲರ್. ಅಂದರೆ 1 ಲಕ್ಷದ 76 ಸಾವಿರ ರೂಪಾಯಿ. ಇಷ್ಟು ಹಣ ಬಂದರೆ ಒಂದು ದೇಶಕ್ಕೆ ಹೋದರೆ ನನಗೆ ಖರ್ಚು ಎಷ್ಟು ಬೀಳುತ್ತದೆ. ಹೋಗಿ ಬರಲು ವಿಮಾನದ ಟಿಕೆಟ್‌ ಬೆಲೆ. ಅಲ್ಲಿ ಉಳಿದುಕೊಳ್ಳಲು ಖರ್ಚು, ಎಡಿಟಿಂಗ್‌ ಕಾಸ್ಟ್‌, ಗೆಜೆಟ್ ಇಎಂಐ ಖರ್ಚು ಎಲ್ಲ ಸೇರಿ 10 -20 ಸಾವಿರ ನನ್ನ ಕೈಗೆ ಬರಬಹುದು. ಇದು  ನನ್ನ ಯೂಟ್ಯೂಬ್ ಆದಾಯ, ಜಾಹೀರಾತುಗಳಿಂದಲೂ ಆದಾಯ ಬರುತ್ತದೆ. ಜಾಹೀರಾತು ಹಾಕಿದ ಬಳಿಕ ಅದು ಬರುತ್ತದೆ ಎಂದು ಡಾ. ಬ್ರೋ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next