ಜನಪ್ರಿಯ ವಿಡಿಯೋ ತಾಣವಾದ ಯೂಟ್ಯೂಬ್ ಹೊಸ ಫೀಚರ್ ಅನ್ನು ಸೇರಿಸುತ್ತಿದ್ದು, ಬಳಕೆದಾರರು ತನ್ನ ಮಿನಿಪ್ಲೇಯರ್ ಮೂಲಕ ವೆಬ್ ಫೋನ್ ಮತ್ತು ಇತರ ಸಾಧನಗಳಿಂದ ವೀಡಿಯೋಗಳನ್ನು ನೋಡುವುದನ್ನು ಮುಂದುವರಿಸಬಹುದಾಗಿದೆ.
ಸಾಮಾನ್ಯವಾಗಿ, ಬಳಕೆದಾರರು ಆಂಡ್ರಾಯ್ಡ್ ಅಥವಾ ಐಒಎಸ್ ಮೂಲಕ ಯೂಟ್ಯೂಬ್‌ನಲ್ಲಿ ವೀಡಿಯೊಗಳನ್ನ ವೀಕ್ಷಿಸಿ ಮುಚ್ಚಿದಾಗ ಮುಂದುವರಿಸಿ ನೋಡಲು ಸಾಧ್ಯವಾಗುತ್ತಿರಲಿಲ್ಲ. ಇತ್ತೀಚಿನ ವೈಶಿಷ್ಟ್ಯವೆಂದರೆ ಅದೇ ವೀಡಿಯೊವನ್ನು ಮತ್ತೆ ಯು ಟ್ಯೂಬ್ ನಲ್ಲಿ ನೋಡಬಹುದಾಗಿದೆ.
ಬಳಕೆದಾರನು ಫೋನನ್ನು ಆಫ್ ಮಾಡಿದಲ್ಲಿಂದ ಪುನರಾರಂಭಿಸಲು ಸಣ್ಣ ವೀಡಿಯೊ ಪ್ಲೇಯರ್ ಪ್ಲೇ ಬಟನ್‌ನೊಂದಿಗೆ ವಿನ್ಯಾಸ ಮಾಡಲಾಗಿದ್ದು ವಿಂಡೋ ಒಳಗೆ ಎಲ್ಲಿಯಾದರೂ ಕ್ಲಿಕ್ ಮಾಡುವುದರಿಂದ ಬಳಕೆದಾರರನ್ನು ಪೂರ್ಣ ವೀಡಿಯೊ ಪುಟಕ್ಕೆ ಕರೆದೊಯ್ಯುತ್ತದೆ.
ನಿಮ್ಮ ಫೋನ್‌ನಿಂದ ಭಾಗಶಃ ಪ್ಲೇ ಮಾಡಿದ ವೀಡಿಯೊಗಳನ್ನು ಮತ್ತೆ ನೋಡುವಲ್ಲಿ ಇದು ಸಹಾಯವಾಗಬಲ್ಲುದು.
ಇನ್ನೂ ಕೆಲ ಹೊಸತನಗಳನ್ನು ಪರಿಚಯಿಸಲು ಯೂಟ್ಯೂಬ್ ಮುಂದಾಗಿದ್ದು ವಿಡಿಯೋ ಡೌನ್ಲೋಡ್ ಮಾಡುವಲ್ಲಿ ಹೊಸತನ ಪರಿಚಯಿಸಲು ಮುಂದಾಗಿದೆ.