Advertisement

ಯೂಟ್ಯೂಬ್:ಹಣ ಸಂಪಾದನೆಯ ಅಕ್ಷಯ ಪಾತ್ರೆ

02:00 PM Mar 05, 2018 | Harsha Rao |

Youtube ಎನ್ನುವುದು ಕುಬೇರನ ಖಜಾನೆ. ಇಲ್ಲಿ ನೀವು ಬಯಸಿದಷ್ಟು ಹಣ ಸಂಪಾದನೆ ಮಾಡಬಹುದು. ಅದಕ್ಕೆ ನಿಮ್ಮಲ್ಲಿ ಇರಬೇಕಾದ ಅರ್ಹತೆಗಳೆಂದರೆ ಯಾವುದಾದರೊಂದು ಕ್ಷೇತ್ರದಲ್ಲಿ ಒಂದು ಹಿಡಿಯಷ್ಟು ಪ್ರತಿಭೆ,ತುಸು
ತಾಂತ್ರಿಕತೆ ಕಲಿಯುವ ವ್ಯವಧಾನ ಮತ್ತು ಅಗಾಧವಾದ ತಾಳ್ಮೆ. ಹೇಳಿ ಕೇಳಿ ಇದು ಇಂಟರ್ನೆಟ್‌ ಯುಗ. ಈ ಗೂಗಲ್
ಅಣ್ಣನ ಒಡಹುಟ್ಟಿದ ತಂಗಿಯೇ Youtube! ಗೂಗಲ್ ಅಣ್ಣ…ಅಕ್ಷರ-ಲೇಖನ-ಚಿತ್ರಗಳ ರೂಪದಲ್ಲಿ ನಮಗೆ ಬೇಕಾದ ಮಾಹಿತಿಗಳನ್ನು ಒದಗಿಸಿದರೆ, ಯೂಟ್ಯೂಬ್‌ ನಮಗೆ ಬೇಕಾದ ಮಾಹಿತಿಗಳನ್ನು ವಿಡಿಯೋ ರೂಪದಲ್ಲಿ ನೀಡುತ್ತಾಳೆ. ಮಾತ್ರವಲ್ಲ ತನ್ನೊಡಲಿಗೆ ವಿಡಿಯೋಗಳನ್ನು ತುಂಬುವವರಿಗೆ ಬೊಗಸೆ ತುಂಬಾ ಹಣವನ್ನೂ ತುಂಬುತ್ತಾಳೆ.

Advertisement

ಯೂಟ್ಯೂಬ್‌ನಲ್ಲಿ ಹಣ ಸಂಪಾದನೆಗೆ ಮಾಡಬೇಕು?
ವಿಡಿಯೋಗಳನ್ನು ಅಪ್ಲೋಡ್‌ ಮಾಡಬೇಕು. ಎಂಥಾ ವಿಡಿಯೋಗಳನ್ನು ಅಪ್ಲೋಡ್‌ ಮಾಡಬೇಕು? ಜನಕ್ಕೆ
ಇಷ್ಟವಾಗುವಂಥ, ಮಾಹಿತಿ- ಮನರಂಜ ನೀಡುವಂಥ ವಿಡಿಯೋಗಳನ್ನು ಅಪ್ಲೋಡ್‌ ಮಾಡಬೇಕು. ಇದು ಕಡ್ಡಾಯವೇನಲ್ಲ. ಹಾಗಿದ್ದಾಗ ಮಾತ್ರ ಜನರು ನಿಮ್ಮ ವಿಡಿಯೋಗಳನ್ನು ನೋಡುತ್ತಾರೆ ಎನ್ನುವ ಕಾರಣಕ್ಕೆ.  ಪ್ರತಿಯೊಬ್ಬರಲ್ಲೂ ಯಾವುದಾದರೊಂದು ಪ್ರತಿಭೆ-ಅಭಿರುಚಿ ಇರುತ್ತವೆ.ಅವನ್ನು ವಿಡಿಯೋ ಮಾಡಿ ಅಪ್ಲೋಡ್‌ ಮಾಡಿ.

ಉದಾ:ನೀವು ಚಾರಣ ಹವ್ಯಾಸಿಗಳಾಗಿದ್ದರೆ, ನಿಗದಿತ ಸ್ಥಳಕ್ಕೆ ಚಾರಣ ಹೋಗುವ ಸ್ಥಳದ ವಿವರಗಳನ್ನು, ಸಾಗಬೇಕಾದ ಮಾರ್ಗದ ಗುರುತುಗಳನ್ನು ಚಿತ್ರೀಕರಿಸಿ ಅಪ್ಲೋಡ್‌ ಮಾಡಿ. ಆಸಕ್ತರು ನೋಡುತ್ತಾರೆ. ಗೃಹಿಣಿಯಾಗಿದ್ದರೆ ರಂಗೋಲಿ ಬಿಡಿಸುವ ಬಗ್ಗೆ, ತರಹೇವಾರಿ ರುಚಿಕರ ಅಡುಗೆಗಳನ್ನು ಮಾಡುವ ಬಗ್ಗೆ, ನೀವು ಟೀಚರ್‌ ಆಗಿದ್ದರೆ ಕಷ್ಟಕರ ಲೆಕ್ಕಗಳನ್ನು ಸರಳವಾಗಿ ಬಿಡಿಸುವ ಬಗ್ಗೆ, ನೀವು ಹಾಸ್ಯ ಕಲಾವಿದರಾದರೆ ನಿಮ್ಮ ಹಾಸ್ಯ-ಅಣಕು ದೃಶ್ಯಗಳನ್ನು, ನೀವು ಜ್ಯೋತಿಷಿಗಳಾಗಿದ್ದರೆ ವರ್ಷ ಭವಿಷ್ಯ, ಮಾಸ ಭವಿಷ್ಯ…ಇತ್ಯಾದಿ.

ನೀವು ಸಿನಿಮಾರಂಗದವರಾದರೆ ಕಿರುಚಿತ್ರಗಳನ್ನು ನಿರ್ಮಿಸಿ ಅಪ್ಲೋಡ್‌ ಮಾಡಿ, ಚಿತ್ರ ವಿಮರ್ಶೆಗಳನ್ನು ಮಾಡಿ, ಕುರಿಬಾಂಡ್‌ ಶೈಲಿಯ ಪ್ರ್ಯಾಂಕ್‌, ಸೋಷಿಯಲ್ ಏಸ್ಕ್ಪೆರಿಮೆಂಟ್‌ ವಿಡಿಯೋಗಳು (Actor Varun Pruthi
ಚಾನೆಲ್ ನೋಡಿ)… ಚಿತ್ರೀಕರಣಕ್ಕೆ ದುಬಾರಿ ಕ್ಯಾಮೆರಾಗಳೇ ಆಗಬೇಕೆಂದೇನಿಲ್ಲ. ನಿಮ್ಮ ಕೈಲಿರುವ ಸಾಧಾರಣ ಮೊಬೈಲ್ ಕ್ಯಾಮೆರಾದಲ್ಲಿ ಶೂಟ್‌ ಮಾಡಿದರೂ ಓಕೆ. ಯೂಟ್ಯೂಬ್‌ಲ್ಲಿ ಇಂಥದ್ದೇ ವಿಡಿಯೋಗಳನ್ನು ಅಪ್ಲೋಡ್‌ ಮಾಡಬೇಕೆನ್ನುವ ಯಾವ ನಿರ್ಬಂಧವೂ ಇಲ್ಲ (ರಕ್ತಪಾತ/ಕ್ರೌರ್ಯ ಮತ್ತು ನೀಲಿ ಚಿತ್ರಗಳನ್ನು ಹೊರತು ಪಡಿಸಿ)ಯಾರು,
ಎಷ್ಟು ವಿಡಿಯೋಗಳನ್ನು ಬೇಕಾದರೂ ಅಪ್ಲೋಡ್‌ ಮಾಡಬಹುದು. ಎಷ್ಟು ಬೇಕಾದರೂ ಹಣ ಸಂಪಾದನೆ ಮಾಡಬಹುದು.

ಯೂಟ್ಯೂಬ್‌ ನಮಗೆ ಯಾಕೆ ಹಣ ಕೊಡುತ್ತದೆ?
ನಾವು ಅಪ್ಲೋಡ್‌ ಮಾಡುವ ವಿಡಿಯೋಗಳನ್ನು ಜನ ನೋಡುತ್ತಾರೆ. ಟಿವಿ ಧಾರಾವಾಹಿಗಳ ನಡುನಡುವೆ ಹೇಗೆ ಜಾಹೀರಾತುಗಳು ಬಿತ್ತರವಾಗುತ್ತವೋ, ಹಾಗೆಯೇ ಗೂಗಲ್ ನವರು ನಾವು ಅಪ್ಲೋಡ್‌ ಮಾಡುವ ವಿಡಿಯೋಗಳ ಆರಂಭಕ್ಕೆ ಮುನ್ನ, ನಡುನಡುವೆ. ದೃಶ್ಯ ರೂಪದ ಜಾಹೀರಾತುಗಳನ್ನೂ ಮತ್ತು ವಿಡಿಯೋಗಳು ರನ್‌ ಆಗುತ್ತಿರುವಾಗ ಅವುಗಳ ಮೇಲೆ ಕಾರ್ಡ್‌ ರೂಪದಲ್ಲಿ ಜಾಹೀರಾತುಗಳನ್ನೂ ಬಿತ್ತರಿಸುತ್ತಿರುತ್ತಾರೆ. ಜಾಹೀರಾತುಗಳನ್ನು ನಮ್ಮ ವಿಡಿಯೋಗಳಲ್ಲಿ ಬಿತ್ತರಿಸಿ ಆ ಜಾಹೀರಾತುದಾರರಿಗೆ ಪ್ರಚಾರ ಕೊಡಲು ಗೂಗಲ್ ನವರು ಶುಲ್ಕ ತೆಗೆದುಕೊಳ್ಳುತ್ತಾರೆ.
ನಾವು ವಿಡಿಯೋಗಳನ್ನು ಅಪ್ಲೋಡ್‌ ಮಾಡಿ, ದುಡ್ಡು ದುಡಿಯಲು ಗೂಗಲ್ ನವರಿಗೆ ನೆರವಾದ ಕಾರಣಕ್ಕೆ ಅವರು ದುಡಿದ ದುಡ್ಡಿನಲ್ಲಿ ನಮಗೆ ಸಂಭಾವನೆಯ ರೂಪದಲ್ಲಿ ಪಾಲು ಕೊಡುತ್ತಾರೆ.
ನಮ್ಮನ್ನು ಯೂಟ್ಯೂಬ್‌ ಪಾಲುದಾರರು ಎಂದು ಪರಿಗಣಿಸುತ್ತಾರೆ.

Advertisement

ಯೂಟ್ಯೂಬ್‌ನಲ್ಲಿ ಅಕೌಂಟ… ಓಪನ್‌ ಮಾಡುವುದು ಹೇಗೆ?
ನಿಮ್ಮ ಜಿಮೇಲ್ ಅಕೌಂಟ್‌ನಿಂದ ಯೂಟ್ಯೂಬ್‌ಗೆ ಲಾಗ್‌ ಇನ್‌ ಆಗಿ, ಅದರ ಟೈಮ… ಲೈನ್‌ಗೊಂದು, ಪ್ರೊಫೈಲ್ ಗೊಂದು ಚಿತ್ರ ಅಪ್ಲೋಡ್‌ ಮಾಡಿದರೆ(ಫೇಸ್‌ಬುಕ್‌ಗೆ ಅಪ್ಲೋಡ್‌ ಮಾಡುವಂತೆ). ನಿಮ್ಮ ಯೂಟ್ಯೂಬ್‌ ಅಕೌಂಟ್‌ ಓಪನ್‌ ಆದ ಹಾಗೆ. ಅದನ್ನು ನಿಮ್ಮ ಯೂಟ್ಯೂಬ್‌ ಚಾನೆಲ್ ಎನ್ನುತ್ತಾರೆ. ನಂತರ ನಿಮ್ಮ ಚಾನೆಲ್ಗೆ ವಿಡಿಯೋಗಳನ್ನು ಅಪ್ಲೋಡ್‌ ಮಾಡುತ್ತಾ ಹೋಗಿ. )ವಿಡಿಯೋಗಳೆಲ್ಲವೂ ಸ್ವಂತವಾಗಿರಬೇಕು. ಯಾವುದೇ ದೃಶ್ಯ ಅಥವಾ ಶ್ರವ್ಯವೂ ನಕಲು ಅಥವಾ ಕಳುವು ಮಾಡಿದ್ದಾಗಿರಬಾರದು) ಆ ನಿಮ್ಮ ವಿಡಿಯೋಗಳನ್ನು ಆಡ್‌ಸೈನ್ಸ್ ಪ್ರಕ್ರಿಯೆಗೆ, ಅಂದರೆ ಆ ವಿಡಿಯೋಗಳಲ್ಲಿ ಜಾಹೀರಾತುಗಳು ಬರುವ ಹಾಗೆ. ಆ ಮೂಲಕ ನಿಮ್ಮ ವಿಡಿಯೋಗಳಿಗೆ ಗೌರವಧನ ಬರುವ ಪ್ರಕ್ರಿಯೆಗೆ ಒಳಪಡಿಸಬೇಕು.(ಇದನ್ನು ತಜ್ಞರ ನೆರವಿನೊಂದಿಗೆ ಮಾಡಿಸಿಕೊಳ್ಳತಕ್ಕದ್ದು) ನೀವು ಗೂಗಲ್ ಆಡ್‌ಸೈನ್ಸ್ ಅಕೌಂಟ್‌ ಓಪನ್‌ ಮಾಡಬೇಕಾದರೆ ನಿಮ್ಮ ಅಸಲಿ ಹೆಸರು, ವಿಳಾಸ ಮತ್ತು ನಿಮ್ಮ ಬ್ಯಾಂಕ್‌-ಅಕೌಂಟ್‌ ವಿವರಗಳನ್ನು ತುಂಬ ಬೇಕು. ನಂತರ 15ದಿನಗಳಲ್ಲಿ ಗೂಗಲ್ ನವರು ನಿಮ್ಮ ಅಕೌಂಟ…ಗೆ ಸಂಬಂಧಪಟ್ಟ ಹಾಗೆ One
Time Password ಹೊಂದಿದ ಒಂದು ಪತ್ರವನ್ನು ನಿಮ್ಮ ಮನೆಯ ವಿಳಾಸಕ್ಕೆ ಕಳಿಸುತ್ತಾರೆ. ಅದರೊಳಗಿನ OTP (ಗುಪ್ತಪದ) ಕೂಡಲೇ ನಿಮ್ಮ ಆಡ್‌ಸೈನ್ಸ್ ಅಕೌಂಟ್‌ನಲ್ಲಿ ತುಂಬಬೇಕು.

ಆಗಷ್ಟೇ ನಿಮ್ಮ ವಿಡಿಯೋಗಳಿಗೆ ಜಾಹೀರಾತು ಬಂದು, ನಿಮ್ಮ ಯೂಟ್ಯೂಬ್‌ ಚಾನೆಲ್ ಹಣ ಸಂಪಾದನೆಗೆ ಯೋಗ್ಯವಾಗುವುದು. ಇಷ್ಟಾದರೂ ಮೊದಲ ಹತ್ತು ಸಾವಿರ ವೀಕ್ಷಣೆಗಳಿಗೆ ಯಾವುದೇ ಹಣ ಬರುವುದಿಲ್ಲ. ಹತ್ತು ಸಾವಿರದ ಒಂದನೆಯ ವೀಕ್ಷಣೆಯಿಂದ ನಿಮ್ಮ ಖಾತೆಗೆ ಹಣ ಸೇರುತ್ತಾ ಹೋಗುತ್ತದೆ.

ಎಷ್ಟು ವೀಕ್ಷಣೆಗೆ ಎಷ್ಟು ಹಣ?
ಸುಮಾರು 6,00,000 ವೀಕ್ಷಣೆಗಳಿಗೆ 100 ಡಾಲರ್‌ (ಅಂದಾಜು 6000 ರೂ) ಮೊತ್ತ ಬರುತ್ತದೆ ಎನ್ನಬಹುದಾದರೂ, ವೀಕ್ಷಕರು ನಿಮ್ಮ ವಿಡಿಯೋಗಳಲ್ಲಿ ಹೆಚ್ಚು ಸಮಯವನ್ನು ಕಳೆದರೆ, ವಿಡಿಯೋಗಳ ಮೇಲೆ ಮೂಡುವ ಜಾಹೀರಾತನ್ನು ಕತ್ತರಿಸದೇ ನೋಡಿದರೆ, ಆ ಜಾಹೀರಾತುಗಳಿಗೆ ಮಾರು ಹೋಗಿ ಅವುಗಳ ವೆಬ…ಸೈಟ್‌ಗೆ ಭೇಟಿ ನೀಡಿದರೆ, ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಚಾನೆಲ್ ಗೆ ಸಾವಿರಾರು, ಲಕ್ಷಾಂತರ ಸಂಖ್ಯೆಯಲ್ಲಿ ಚಂದಾದಾರರಿದ್ದರೆ ಇನ್ನೂ ಹೆಚ್ಚಿನ ಮೊತ್ತ ನೀಡುತ್ತಾರೆ. ನಿಮ್ಮ ಆಡ್‌ಸೈನ್ಸ್ ಅಕೌಂಟ್‌ನಲ್ಲಿ ಡಾಲರ್‌ 100 ತುಂಬುತ್ತಿದ್ದ ಹಾಗೆ ನಿಮ್ಮ ಬ್ಯಾಂಕ್‌ ಅಕೌಂಟ…ಗೆ ನಿಮ್ಮ ಯೂಟ್ಯೂಬ್‌ ದುಡಿಮೆ ಜಮಾವಣೆಯಾಗಿ ಹೋಗುತ್ತದೆ. ಆರು ಲಕ್ಷ ವೀಕ್ಷಣೆಗಳಿಗೆ ಕೇವಲ ಆರು ಸಾವಿರ ರೂಪಾಯಿಗಳು! ಅಲ್ಲಿಗೆ ಒಂದು ವೀಕ್ಷಣೆಗೆ ಒಂದೇ ಪೈಸೆ!

ಹೀಗೆ ಪೈಸೆಪೈಸೆ ದುಡಿದರೆ ಲಕ್ಷಾಂತರ ರೂ.ಗಳನ್ನು ದುಡಿಯುವ ನಮ್ಮ ಕನಸು ಈಡೇರುವುದು ಯಾವಾಗ? ಎಷ್ಟು ಬೇಗ ನಾವು ಲಕ್ಷ-ಕೋಟಿ ವೀಕ್ಷಕರು ನಮ್ಮ ವಿಡಿಯೋಗಳನ್ನು ನೋಡುವ ಹಾಗೆ ಮಾಡುತ್ತೇವೆಯೋ ಅಷ್ಟು ಬೇಗನೇ ನಾವು ಕೋಟ್ಯಾಧೀಶರಾಗುತ್ತೇವೆ. ಯೂಟ್ಯೂಬ್‌ನಲ್ಲಿ ತಿಂಗಳಿಗೆ ಲಕ್ಷಾಂತರ ರೂ.ಗಳನ್ನು ದುಡಿಯುವ ಲಕ್ಷಾಂತರ ಚಾನೆಲ್ ಗಳು ಭಾರತದಲ್ಲಿವೆ.
Ex. VillageFoodFactory, PutChutney,
ActorVarunPruthi etc.
ಡಿಜಿಟಲ್ ಇಂಡಿಯಾ ಕೃಪೆಯಲ್ಲಿ ಭವಿಷ್ಯದಲ್ಲಿ ಭಾರತೀಯರೆಲ್ಲರ ಕೈಯ್ಯಲ್ಲೂ ಆಂಡ್ರಾಯ್ಡ್ ಫೋನ್‌ಗಳು ವಿಜೃಂಭಿಸಲಿರುವುದರಿಂದ ನೀವು ಹಾಕುವ ವಿಡಿಯೋಗಳನ್ನು ನೋಡುವವರು ಇದ್ದೇ ಇದ್ದಾರೆ. ಮತ್ಯಾಕ್‌ ತಡ, ಶೂಟಿಂಗ್‌..ಅಪ್ಲೋಡ್‌ ಶುರು ಹಚ್ಕೊಳ್ಳಿ.

– ಸಾರಕ್ಕಿ ಮಂಜು

Advertisement

Udayavani is now on Telegram. Click here to join our channel and stay updated with the latest news.

Next