Advertisement

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

10:31 PM Dec 18, 2024 | |

ಬೆಳಗಾವಿ: ಕ್ಯಾನ್ಸರ್‌ಗೆ ಬಳಸುವ ಔಷಧವನ್ನು ಮಾದಕ ದ್ರವ್ಯವಾಗಿ ಚುಚ್ಚುಮದ್ದಿನ ರೂಪದಲ್ಲಿ
ತೆಗೆದುಕೊಳ್ಳಲಾಗುತ್ತಿದೆ ಎನ್ನುವ ಭಯಾ ನಕ ಅಂಶವನ್ನು ವಿಪಕ್ಷ ನಾಯಕ ಆರ್‌. ಅಶೋಕ್‌ ಬಹಿರಂಗಪಡಿಸಿದರು.

Advertisement

ಬಾಣಂತಿಯರ ಸರಣಿ ಸಾವು ಪ್ರಕರಣ ಕುರಿತು ನಿಯಮ 69ರಡಿ ನಡೆಯುತ್ತಿದ್ದ ಚರ್ಚೆ ವೇಳೆ ಈ ವಿಷಯ ಪ್ರಸ್ತಾಪಿಸಿದ ಅವರು, ಜಯನಗರದಲ್ಲಿ 60 ಸಾವಿರಕ್ಕೂ ಅಧಿಕ ಮುಸಲ್ಮಾನರಿದ್ದಾರೆ. ಅಲ್ಲಿನ ಕೆಲವು ಯುವಕರು ಕ್ಯಾನ್ಸರ್‌ ಔಷಧವನ್ನು ಡ್ರಗ್‌ ರೂಪದಲ್ಲಿ ಪಡೆಯುತ್ತಿದ್ದಾರೆ ಎಂದರು. ಕ್ಯಾನ್ಸರ್‌ಗೆ ಬಳಸುವ ಔಷಧವು ಕೇವಲ 40 ರೂ.ಗೆ ಸಿಗುತ್ತಿದೆ.

ಚುಚ್ಚುಮದ್ದಿನ ರೂಪದಲ್ಲಿ ಡ್ರಗ್‌ ತೆಗೆದುಕೊಳ್ಳುತ್ತಿದ್ದಾರೆ. ತುಮ ಕೂರಿನ ತಾಯಿಯೊಬ್ಬರು ಡ್ರಗ್‌ ತೆಗೆದು ಕೊಳ್ಳುವ ಮಗನ ಕಾಟ ತಾಳಲಾರದೆ ದಯಾಮರಣ ಕೋರಿದ್ದಾರೆ. ಈ ಬಗ್ಗೆ ಸರಕಾರ ಗಮನ ಹರಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಸ್ಪೀಕರ್‌ ಖಾದರ್‌ ಹಾಗೂ ಸದಸ್ಯರು ಮರುಕ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next