ಚಿಕ್ಕಮಗಳೂರು : ಕಳೆದ ಒಂದು ವರ್ಷದ ಹಿಂದೆ ಅಧಿಕಾರಿಗಳು ನೀಡಿದ್ದ ನೂರು ಬೆಡ್ಡುಗಳ ಆಸ್ಪತ್ರೆ ನಿರ್ಮಾಣದ ಕೆಲಸ ಇನ್ನು ಕಾರ್ಯರೂಪಗೊಳ್ಳದ ಹಿನ್ನೆಲೆಯಲ್ಲಿ ಯುವಕರ ತಂಡ ಅಧಿಕಾರಗಳ ವಿರುದ್ಧ ಉಗ್ರ ಪ್ರತಿಭಟನೆಗೆ ಮುಂದಾಗಿದೆ.
ಶೃಂಗೇರಿ ತಾಲೂಕಿಗೆ ನೂರು ಬೆಡ್ಡುಗಳ ಆಸ್ಪತ್ರೆ ಮಂಜೂರು ಮಾಡಲು ಊರಿನ ಜನ ಕಳೆದ ಒಂದು ವರ್ಷದಿಂದ ಹೋರಾಟ ನಡೆಸಿಕೊಂಡು ಬಂದರೂ ಯಾವುದೇ ಪ್ರಯೋಜನವಾಗಲಿಲ್ಲ, ಕಳೆದ ಬಾರಿ ಪ್ರತಿಭಟನೆ ನಡೆಸಿದ ವೇಳೆ ಒಂದು ತಿಂಗಳೊಳಗೆ ಆಸ್ಪತ್ರೆ ಮಂಜೂರು ಮಾಡುವುದಾಗಿ ಹೇಳಿದ್ದ ಅಧಿಕಾರಿಗಳು ಒಂದು ವರ್ಷ ಸಂದರೂ ಯಾವುದೇ ಪ್ರಗತಿ ಕಾಣಲಿಲ್ಲ, ಈ ವಿಚಾರವಾಗಿ ಯುವಕರ ತಂಡ ರಾತ್ರೋ ರಾತ್ರಿ ತಮಟೆ ಶೃಂಗೇರಿ ಪಟ್ಟಣ ತುಂಬಾ ತಮಟೆ ಬಾರಿಸಿ ಧರಣಿ ಸತ್ಯಾಗ್ರಹದ ಬಗ್ಗೆ ಪ್ರಚಾರ ಮಾಡಲು ಮುಂದಾಗಿದ್ದಾರೆ.
ಪ್ರಚಾರದ ವೇಳೆ ಮೈಕ್ ಬಳಸಲು ಅನುಮತಿ ನೀಡದ ಹಿನ್ನೆಲೆಯಲ್ಲಿ ಯುವಕರು ತಮಟೆ ಬಾರಿಸಿ ನಾಳೆಯಿಂದ ಅಹೋರಾತ್ರಿ ಧರಣಿ ನಡೆಸುವುದಾಗಿ ಕರೆ ನೀಡಿದರು.
ಕಳೆದ ಬಾರಿ ಆಸ್ಪತ್ರೆ ಮಂಜೂರು ಮಾಡುವಂತೆ ಶೃಂಗೇರಿ ಪಟ್ಟಣ ಬಂದ್ ಮಾಡಿ ಪ್ರತಿಭಟನೆಯನ್ನು ನಡೆಸಲಾಗಿತ್ತು ಈ ವೇಳೆ ಅಧಿಕಾರಿಗಳು ಒಂದು ತಿಂಗಳೊಳಗಾಗಿ ಆಸ್ಪತ್ರೆ ಮಂಜೂರು ಮಾಡುವುದಾಗಿ ಮಾತು ಕೊಟ್ಟಿದ್ದರು, ಆದರೆ ಮಾತು ಕೊಟ್ಟು ಒಂದು ವರ್ಷವೇ ಆದರೂ ಇನ್ನೂ ಆಸ್ಪತ್ರೆ ಮಂಜೂರು ಆಗಲಿಲ್ಲ.
ಇದನ್ನೂ ಓದಿ : ಔರಾದ್ಕರ್ ವರದಿ ಜಾರಿ, ಪೊಲೀಸರ ವೇತನ ತಾರತಮ್ಯ ನೀಗಿಸಲು ಪರ್ಯಾಯ ದಾರಿ: ಸಚಿವ ಆರಗ ಜ್ಞಾನೇಂದ್ರ