ಬೆಂಗಳೂರು: ಯುಟ್ಯೂಬ್ ನೋಡಿ ನಕಲಿ ನೋಟುಗಳನ್ನು ತಯಾರಿಸಿ ಚಲಾವಣೆ ಮಾಡುತ್ತಿದ್ದ ಆರೋಪಿಯನ್ನು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಪುಲ್ಲಲರೇವು ರಾಜು (36) ಬಂಧಿತ. ಆರೋಪಿಯಿಂದ 500 ರೂ. ಮುಖಬೆಲೆಯ ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದಲ್ಲಿ ಆರೋಪಿಗೆ ಸಹಕಾರ ನೀಡಿದ ಆಂಧ್ರಪ್ರದೇಶದ ಕಡಪದ ರಜನಿ ಮತ್ತು ಚರಣ್ ಸಿಂಗ್ ಎಂಬರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಇದನ್ನೂ ಓದಿ:ಸಿದ್ದರಾಮಯ್ಯ ಸ್ವಂತ ಪಕ್ಷ ಕಟ್ಟಿ 5 ಸೀಟು ಗೆದ್ದು ತೋರಿಸಲಿ: ಕುಮಾರಸ್ವಾಮಿ ಸವಾಲು
7ನೇ ತರಗತಿಯಲ್ಲಿ ವ್ಯಾಸಂಗ ಮಾಡಿರುವ ಆರೋಪಿ, ಕೊಠಡಿಯೊಂದನ್ನು ಬಾಡಿಗೆ ಪಡೆದು, ನಗರದಲ್ಲಿ ವಾಸವಾಗಿದ್ದ. ಯುಟ್ಯೂಬ್ ನೋಡಿ ನಕಲಿ ನೋಟುಗಳ ತಯಾರಿ ಬಗ್ಗೆ ತಿಳಿದುಕೊಂಡು, ಖೋಟಾ ನೋಟುಗಳನ್ನು ಸಿದ್ಧಪಡಿಸುತ್ತಿದ್ದ. ಆದರೆ, ಸ್ಥಳೀಯರ ಬಳಿ ಶೋರೂಂವೊಂದರಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದ ಎಂದು ಪೊಲೀಸರು ಹೇಳಿದರು.
Related Articles
ಬಾರ್, ಚಿತ್ರಮಂದಿರ, ಪೆಟ್ರೋಲ್ ಬಂಕ್, ಪಬ್‌ಗಳು, ರೆಸ್ಟೋರೆಂಟ್‌ಗಳಲ್ಲಿ ಮಾತ್ರ ಖೋಟಾ ನೋಟುಗಳನ್ನು ಚಲಾವಣೆ ಮಾಡುತ್ತಿದ್ದ. ಅಸಲಿ ನೋಟುಗಳ ಜತೆ ನಕಲಿ ನೋಟುಗಳನ್ನು ಸೇರಿಸಿ ಚಲಾವಣೆ ಮಾಡುತ್ತಿದ್ದ. ಆನ್ ಲೈನ್ ಮೂಲಕವೇ ಖೋಟಾ ನೋಟುಗಳ ತಯಾರಿಕೆಗೆ ಬೇಕಾದ ವಸ್ತುಗಳನ್ನು ತರಿಸಿಕೊಳ್ಳುತ್ತಿದ್ದ ಎಂದು ಪೊಲೀಸರು ಹೇಳಿದರು.