ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದಲ್ಲಿ ಈಜಲು ಹೋಗಿದ್ದ ಯುವಕ ನೊಬ್ಬ ಸಂಪ್‌ಗೆ ಬಿದ್ದು ಮೃತಪಟ್ಟಿರುವ ಘಟನೆ ಕಾಡುಗೊಂಡನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೆ.ಜಿ.ಹಳ್ಳಿ ನಿವಾಸಿ ಚಂದ್ರು (15) ಮೃತ ಬಾಲಕ.
ಐವರು ಯುವಕರನ್ನು ರಕ್ಷಿಸಲಾಗಿದೆ. ಕಳೆದ ಕೆಲ ದಿನಗಳಿಂದ ನಗರದಲ್ಲಿ ಸುರಿ ಯುತ್ತಿರುವ ಭಾರೀ ಮಳೆಯಿಂದಾಗಿ ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿರುವ ನಿರ್ಮಾಣ ಹಂತದ ಕಟ್ಟಡದ ನೆಲಮಹಡಿಯಲ್ಲಿ ಸುಮಾರು ನಾಲ್ಕೈದು ಅಡಿಗಳಷ್ಟು ನೀರು ತಂಬಿತ್ತು. ಜತೆಗೆ ಸಂಪ್ ಅಲ್ಲೇ ಇರುವುದರಿಂದ ನೀರಿನ ಪ್ರಮಾಣ ಹೆಚ್ಚಾಗಿತ್ತು.
ಹೀಗಾಗಿ ಚಂದ್ರು ಸೇರಿ 6 ಮಂದಿ ಯುವಕರು ಈಜಲು ಹೋಗಿದ್ದಾರೆ. ಈ ವೇಳೆ ನಾಲ್ವರು ಯುವಕರು ನೀರು ಕಲುಷಿತಗೊಂಡಿದ್ದರಿಂದ ಕೆಲ ಹೊತ್ತು ಈಜಾಡಿ, ಮೇಲಕ್ಕೆ ಬಂದಿದ್ದಾರೆ. ಆದರೆ, ಚಂದ್ರು ಮತ್ತು ಇನ್ನೊಬ್ಬ ಯುವಕ ಸಂಪ್‌ಗೆ ಸಿಲುಕಿಕೊಂಡಿದ್ದು, ರಕ್ಷಣೆಗಾಗಿ ಸ್ನೇಹಿತರನ್ನು ಕೂಗಿಕೊಂಡಿದ್ದಾರೆ.
ಇದನ್ನೂ ಓದಿ:- ಬುದ್ಧನ ನಿರ್ವಾಣ ಸ್ಥಳ;ಕುಶಿನಗರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ
ಆದರೆ, ರಕ್ಷಣೆಗೆ ಹೋಗಲು ಹೆದರಿದ ಸ್ನೇಹಿತರು ಕೂಡಲೇ ಪೋಷಕರಿಗೆ ಮಾಹಿತಿ ನೀಡಿ ದ್ದಾರೆ. ಸ್ಥಳಕ್ಕೆ ಬಂದವರು ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಅಲ್ಲೇ ಇದ್ದ ಕೆಲವರು ರಕ್ಷಣೆಗೆ ಯತ್ನಿಸಿದರೂ ನೀರಿನ ಪ್ರಮಾಣ ಹೆಚ್ಚಾದರಿಂದ ಹೆದರಿದ್ದಾರೆ. ಅಷ್ಟರಲ್ಲಿ ಚಂದ್ರು ಉಸಿರುಗಟ್ಟಿ ಮೃತಪಟ್ಟಿದ್ದಾನೆ. ಮತ್ತೂಬ್ಬ ಬಾಲಕನನ್ನು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ. ಕಟ್ಟಡ ಮಾಲೀಕರ ವಿರುದ್ಧ ಕೆ.ಜಿ.ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.