Advertisement

ಪಣಜಿ : ಹೆಣ್ಣು ಮಕ್ಕಳ ಕುರಿತು ಗೋವಾ ಮುಖ್ಯಮಂತ್ರಿ ಹೇಳಿಕೆಗೆ ಯುವ ಕಾಂಗ್ರೆಸ್ ಆಕ್ರೋಶ

02:45 PM Jul 31, 2021 | Team Udayavani |

ಪಣಜಿ: ಅಪ್ರಾಪ್ತ ವಯಸ್ಸಿನ ಮಕ್ಕಳು ಮಧ್ಯ ರಾತ್ರಿಯ ವೇಳೆ ಗೋವಾ ಬೀಚ್‍ನಲ್ಲಿ ಏನು ಮಾಡುತ್ತಾರೆ ಎಂಬುದನ್ನು ಪಾಲಕರು ಪರೀಕ್ಷಿಸಬೇಕು, ಹೆಣ್ಣುಮಕ್ಕಳು ರಾತ್ರಿ ವೇಳೆ ಬೀಚ್‍ನಲ್ಲಿ ಏನು ಮಾಡುತ್ತಾರೆ ಎಂಬುದನ್ನು ನೋಡಬೇಕು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ನೀಡಿದ್ದ ಹೇಳಿಕೆಗೆ ಯುವ ಕಾಂಗ್ರೇಸ್ ತೀವ್ರ ಆಕ್ರೋಷ ವ್ಯಕ್ತಪಡಿಸಿದೆ.

Advertisement

ಮುಖ್ಯಮಂತ್ರಿಗಳ ಹೇಳಿಕೆಯ ವಿರುದ್ಧ ಕಾಂಗ್ರೇಸ್ ನಾಯಕರು ಅಲ್ತಿನೊದಲ್ಲಿರುವ ಮುಖ್ಯಮಂತ್ರಿಗಳ ನಿವಾಸದ ಎದುರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಪೋಲಿಸರು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ.

ಹೆಣ್ಣುಮಕ್ಕಳ ಬಗ್ಗೆ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ನೀಡಿರುವ ಹೇಳಿಕೆ ಸರಿಯಲ್ಲ, ಇಂತಹ ಹೇಳಿಕೆಗೆ ನಮ್ಮ ಧಿಕ್ಕಾರವಿದೆ ಎಂದು ಯುವ ಕಾಂಗ್ರೇಸ್ ಕಾರ್ಯಕರ್ತರು ಆಕ್ರೋಷ ವ್ಯಕ್ತಪಡಿಸಿದರು.

ಇದನ್ನೂ ಓದಿ :Free Fire ಗೇಮ್ ಚಟ; ಹಣ ಕಳೆದುಕೊಂಡ 13 ವರ್ಷದ ಬಾಲಕ ನೇಣಿಗೆ ಶರಣು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next