Advertisement

ಮೋದಿ ಸರಕಾರ 9 ವರ್ಷಗಳಲ್ಲಿ ಏನು ಕಡಿದು ಗುಡ್ಡೆ ಹಾಕಿದೆ: ನಲಪಾಡ್ ಪ್ರಶ್ನೆ

07:20 PM Mar 26, 2023 | Team Udayavani |

ಕುಷ್ಟಗಿ: 60 ವರ್ಷಗಳಲ್ಲಿ ಕಾಂಗ್ರೆಸ್ ಏನೂ ಮಾಡಿದೆ ಎಂದು ಪ್ರಶ್ನಿಸುವ ಬಿಜೆಪಿ, 9 ವರ್ಷಗಳಲ್ಲಿ ಮೋದಿ ಸರಕಾರ ಏನು ಕಿತ್ತು ಗುಡ್ಡೆ ಹಾಕಿದೆ ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮದ್ ಹ್ಯಾರಿಸ್ ನಲಪಾಡ್ ಪ್ರಶ್ನಿಸಿದ್ದಾರೆ.

Advertisement

ಭಾನುವಾರ ಸಿಂಧನೂರು ರಸ್ತೆಯ ಟಿಎಪಿಸಿಎಂಎಸ್ ಆವರಣದಲ್ಲಿ ಕುಷ್ಟಗಿ-ಹನುಮಸಾಗರ ಬ್ಲಾಕ್ ಕಾಂಗ್ರೆಸ್ ಹಾಗೂ ಯೂತ್ ಬ್ಲಾಕ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ನಡೆದ ಯುವ ಕ್ರಾಂತಿ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ನಿರುದ್ಯೋಗ ನಿವಾರಣೆಗೆ ಪ್ರತಿ ವರ್ಷ 2 ಕೋಟಿ ಯುವಕರಿಗೆ ಉದ್ಯೋಗ ಸೃಷ್ಟಿಯ ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ 9 ವರ್ಷದಲ್ಲಿ 18 ಕೋಟಿ ಯುವಕರಿಗೆ ಉದ್ಯೋಗ ಕೊಟ್ಟಿದ್ದಾರೆಯೇ ಎಂದು ಪ್ರಶ್ನಿಸಿದರು.

ಮಾಧ್ಯಮಗಳಿಗೆ ಮಾತನಾಡುವ ಹಕ್ಕು ಇಲ್ಲ.ಏನಾದರೂ ಮೋದಿಯವರ, ಬಿಜೆಪಿ ವಿರುದ್ದ ಸುದ್ದಿ ಮಾಡಿದರೆ ಚಾನಲ್ ರದ್ದು ಮಾಡ್ತಾರೆ. ಯಾರಾದರೂ ಒಬ್ಬ ವ್ಯಕ್ತಿ ಅವರ ವಿರುದ್ದ ಧ್ವನಿ ಎತ್ತಿದರೆ ಜೈಲಿಗೆ ಹಾಕ್ತಾರೆ. ರಾಹುಲ್ ಗಾಂಧಿ ಅವರು ಆದಾನಿ ಹಾಗೂ ಪ್ರದಾನಿ ಸಂಬಂಧ ಏನೂ? 20 ಸಾವಿರ ಕೋಟಿ ಅದಾನಿ ಸೆಲ್ ಕಂಪನಿಗೆ ಹೋಗಿದ್ದ ಹಣ ಯಾರದ್ದು? ಅದಾನಿ ಜೊತೆ ಪ್ರಧಾನಿ ವಿಮಾನದಲ್ಲಿ ಸುತ್ತಾಡಿದ್ದು ನಿಜನಾ, ಸುಳ್ಳಾ? ಈ ಒಂದು ಮಾತು ಆಡಿರುವುದಕ್ಕೆ ಲೋಕಸಭೆ ಸದಸ್ಯತ್ವ ಅನರ್ಹಗೊಳಿಸುವ ಮೂಲಕ ಸಂವಿಧಾನವನ್ನು ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದ್ದಾರೆ. ಇದಕ್ಕೆ ಯಾರೂ ಹೆದರುವ ಬೇಕಿಲ್ಲ ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟಿರುವ ನಮ್ಮ ಸಂವಿಧಾನದ ಹಕ್ಕು ನಿಮಗೋಸ್ಕರ, ನಿಮ್ಮ ಧ್ವನಿಗಾಗಿ ನಾವು ಎತ್ತಿ ಹಿಡಿಯುತ್ತೇವೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ಮಾತನಾಡಿ ಬಿಜೆಪಿ ಜಟಕಾ ಕಟ್, ಹಲಾಲ್ ಕಟ್ ಅಂದರೆ ಏನೆಂದು ಎಂಬುದು ನನಗೆ ಗೊತ್ತಿರುವಷ್ಟು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅವರಿಗೆ ಗೊತ್ತಿಲ್ಲ. ಆದರೆ ಇದರ ಬಗ್ಗೆ ಪ್ರಹ್ಲಾದ್ ಜೋಷಿಯವರಿಗೆ ಏನು ಗೊತ್ತು? ಅವರು ಬಿಜೆಪಿಗರಿಗೆ ಜಟ್ಕಾ ಕಟ್, ಹಲಾಲ್ ಕಟ್ ಯಾಕೆ ಬೇಕು . ಬಿಜೆಪಿಯವರು ಏನೂ ಮಾಡದೇ ಹಿಂದೂ- ಮುಸ್ಲಿಂ ಸಮುದಾಯಕ್ಕೆ ಜಗಳ ಹಚ್ಚುವ ಕೆಲಸ ಮಾಡಿದ್ದಾರೆ ಎಂದರು.

ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಮಾತನಾಡಿ, ಈ ಐದು ವರ್ಷಗಳಲ್ಲಿ ಸೇವಕನಾಗಿ ನೂರಕ್ಕೆ ನೂರರಷ್ಟು ಕೆಲಸ ಆಗಿಲ್ಲ ಶೇ. 60 ರಷ್ಟು ಮಾತ್ರ ಕೆಲಸ ಆಗಿದೆ. ಈ ಕ್ಷೇತ್ರದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಗೆಲ್ಲಿಸಿ ಶೇ. ನೂರರಷ್ಟು ಕೆಲಸ ಪೂರ್ಣಗೊಳಿಸಲು ಅವಕಾಶ ಕಲ್ಪಿಸಬೇಕು ಎಂದರು.

Advertisement

ವಿಪ ಸದಸ್ಯ ಶರಣಗೌಡ ಬಯ್ಯಾಪೂರ, ವಿನಯ್ ಆರ್. ತಿಮ್ಮಾಪೂರ, ಕೆಪಿಸಿಸಿ ರಾಜ್ಯ ವಕ್ತಾರ ಲಾಡ್ಲೆ ಮಷಕ್ ದೋಟಿಹಾಳ, ಯನುಮಸಾಗರ ಬ್ಲಾಕ್ ಅಧ್ಯಕ್ಷ ಕಲ್ಲಪ್ ತಳವಾರ, ಪಕೀರಪ್ಪ ಚಳಗೇರಿ, ವಸಂತ ಮೇಲಿನಮನಿ, ಶಿವರಾಜ ಕಟ್ಟಿಮನಿ, ಅನಂತ, ಭವ್ಯ, ಶುಕರಾಜ್ ತಾಳಕೇರಿ,ಮಹಾಂತೇಶ ಬಂಡೇರ್, ಸಂಗಪ್ಪ ಬಾವಿಕಟ್ಟಿ, ಪರಶುರಾಮಪ್ಪ ನಂದ್ಯಾಳ, ಶಾಂತರಾಜ್ ಗೋಗಿ, ಪ್ರಕಾಶ್ ರಾಠೋಡ, ಕೆ.ಬಿ. ತಳವಾರ, ಉಮೇಶ ಮಂಗಳೂರು, ಮೈನುದ್ದೀನ್ ಮುಲ್ಲಾ, ಶಾರದಾ ಕಟ್ಟಿಮನಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next