ವಿಜಯಪುರ : ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಕೃಷಿಯನ್ನೇ ನಂಬಿದ್ದ ಯುವಕನೊಬ್ಬ ತಾಯಿ ಚಿಕಿತ್ಸೆಗೆ ಮಾಡಿದ್ದ ಸಾಲ ತೀರಿಸುವ ಬಗೆ ತಿಳಿಯದೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದರೊಂದಿಗೆ ಜಿಲ್ಲೆಯಲ್ಲಿ ಸಾಲಬಾಧೆಯಿಂದ ಭಾನುವಾರ ಒಂದೇ ದಿನ ಇಬ್ಬರು ಆತ್ಮಹತ್ಯೆ ಮಾಡಿಕೊಂಡಂತಾಗಿದೆ.
ಇಂಡಿ ತಾಲೂಕ ಅಂಜುಟಗಿ ಗ್ರಾಮದ 23 ವರ್ಷದ ಕೃಷಿಯನ್ನು ನಂಬಿದ್ದ ಯುವಕ ಪುಂಡಲೀಕ ಹಂಜಗಿ ಸಾಲಬಾಧೆಗೆ ಆತ್ಮಹತ್ಯೆ ಮಾಡಿಕೊಂಡವ. ತನ್ನ ತೋಟದಲ್ಲಿ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದಾನೆ.
ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯ ಚಿಕಿತ್ಸೆಗಾಗಿ ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕ್ ನಲ್ಲಿ 55 ಸಾವಿರ ಹಾಗೂ ಖಾಸಗಿ 4 ಲಕ್ಷ ರೂ. ಸಾಲ ಮಾಡಿದ್ದ.
ಇದನ್ನೂ ಓದಿ:ಕೋವಿಡ್ ತಡೆ ನಿಯಮ ಉಲ್ಲಂಘನೆ: 18,500 ರೂ. ದಂಡ ಸಂಗ್ರಹ
ಎಷ್ಟೇ ಸಾಲ ಮಾಡಿ ಚಿಕಿತ್ಸೆ ನೀಡಿದರೂ ತಾಯಿ ಆರೋಗ್ಯದಲ್ಲಿ ಬದಲಾವಣೆ ಕಾಣದ ಕಾರಣ ಹಾಗೂ ಮನನೊಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಈ ಕುರಿತು ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.