Advertisement

ನೀವು ಬರೆದ್ರೇ ಚೆನ್ನಾಗಿರುತ್ತೆ ಸರ್‌

11:58 PM Feb 12, 2020 | Sriram |

ಮಿಸ್ಟರ್‌ ಡಿಪೆಂಡೆಬಲ್‌ ಅನಿಸಿಕೊಂಡಾತ ರಾಹುಲ್‌ ದ್ರಾವಿಡ್‌. ಖ್ಯಾತಿಯ ಶಿಖರವೇರಿದ ನಂತರವೂ ತನ್ನ ವಿನಯದ ಮಾತುಗಳಿಂದಲೇ ಎಲ್ಲರಿಗೂ ಇಷ್ಟವಾದದ್ದು ದ್ರಾವಿಡ್‌ ಅವರ ಹೆಚ್ಚುಗಾರಿಕೆ. ಅವರ ಸರಳತೆ, ಸೌಜನ್ಯಕ್ಕೆ ಸಾಕ್ಷಿಯಾಗುವ ಪ್ರಸಂಗವೊಂದು ಹೀಗಿದೆ: ದ್ರಾವಿಡ್‌ ಓದಿದ್ದು ಬೆಂಗಳೂರಿನ ಸೇಂಟ್‌ ಜೋಸೆಫ್ ಶಾಲೆ, ಕಾಲೇಜಿನಲ್ಲಿ.

Advertisement

ಚಿಕ್ಕಂದಿನಿಂದಲೂ ಅವರಿಗೆ ಕ್ರಿಕೆಟ್‌ನಲ್ಲಿ ಆಸಕ್ತಿಯಿತ್ತು. ಶಾಲೆ ಕಾಲೇಜಿನಲ್ಲಿದ್ದಾಗ, ಕ್ರಿಕೆಟ್‌ನಲ್ಲಿ ಗೆದ್ದಾಗಲೆಲ್ಲ ಒಂದು ಚಿತ್ರ ಮತ್ತು ವರದಿಯೊಂದಿಗೆ ಇಂಡಿಯನ್‌ ಎಕ್ಸ್‌ಪ್ರೆಸ್‌ ಕಚೇರಿಗೆ ಹೋಗುತ್ತಿದ್ದರು ದ್ರಾವಿಡ್‌. ಅಲ್ಲಿದ್ದ ಹಿರಿಯ ಕ್ರೀಡಾ ವರದಿಗಾರ ವೇದಂ ಜೈಶಂಕರ್‌ ಅವರ ಎದುರು ನಿಂತು, “ಸರ್‌, ನಿನ್ನೆ ಟೂರ್ನಮೆಂಟ್‌ ಇತ್ತು. ನಾವೇ ಗೆದ್ದಿದ್ದು. ದಯವಿಟ್ಟು ಈ ಸುದ್ದಿಯನ್ನು ನಾಳಿನ ಪತ್ರಿಕೆಯಲ್ಲಿ ಪ್ರಕಟಿಸಿ’ ಎನ್ನುತ್ತಿದ್ದರು. ವೇದಂ, “ಆಯ್ತಪ್ಪ ಹಾಕ್ತೇನೆ. ಆದ್ರೆ ಒಂದು ಷರತ್ತು. ಎಲ್ಲ ಪಂದ್ಯಗಳಲ್ಲೂ ನೀನು ಚೆನ್ನಾಗಿ ಆಡಬೇಕು’ ಎನ್ನುತ್ತಿದ್ದರಂತೆ. ಆನಂತರದಲ್ಲಿ ಪದೇಪದೇ ಕ್ರೀಡಾ ಸುದ್ದಿಯೊಂದಿಗೆ ದ್ರಾವಿಡ್‌, ಎಕ್ಸ್‌ಪ್ರಸ್‌ ಬಿಲ್ಡಿಂಗಿನ ಮೆಟ್ಟಿಲೇರುವುದು, ವೇದಂ ಜೈಶಂಕರ್‌ ಅವರ ಮೆಚ್ಚುಗೆಗೆ ಪಾತ್ರನಾಗುವುದು ಮಾಮೂಲಾಯಿತು.

ಹೀಗೇ ಹತ್ತು ವರ್ಷ ಕಳೆದಾಗ, ದ್ರಾವಿಡ್‌ ಕ್ರಿಕೆಟ್‌ ಅಂಗಳದ ದಂತಕಥೆ ಅನ್ನಿಸಿಕೊಂಡರು. ದಾಖಲೆಗಳ ವೀರನಾದರು. ದ ವಾಲ್‌ ಅನ್ನುವ ಹೆಗ್ಗಳಿಕೆಗೆ ಪಾತ್ರರಾದರು. ಆಗಲೇ ಅವರ ಬದುಕಿನ ಕಥೆ ಬರೆಯಲು ಕ್ರೀಡಾ ಪತ್ರಕರ್ತರು ಸಾಲುಗಟ್ಟಿ ನಿಂತರು. ನಿಮ್ಮ ಕಥೆ ಬರೆಯಲು ಅವಕಾಶ ಕೊಡಿ ಸರ್‌ ಎಂದು ಕೇಳಿಕೊಂಡರು. ಆಗ ದ್ರಾವಿಡ್‌ ಏನು ಮಾಡಿದರು ಗೊತ್ತೇ? ಸೀದಾ ವೇದಂ ಜೈಶಂಕರ್‌ ಬಳಿಗೆ ಬಂದು, “ಸರ್‌ ನನ್ನನ್ನು ತುಂಬಾ ಹತ್ತಿರದಿಂದ ಕಂಡಿರುವುದು ನೀವೇ. ನನ್ನ ಕಥೆಯನ್ನು ನೀವೇ ಬರೆಯಿರಿ, ಆಗ ಮಾತ್ರ ಅದು ಚೆನ್ನಾಗಿರುತ್ತೆ’ ಅಂದರು. ವೇದಂ ಬರೆದಿರುವ ಪುಸ್ತಕ, ನಾಲ್ಕು ಭಾಷೆಗಳಿಗೆ ಅನುವಾದವಾಗಿದೆ!

Advertisement

Udayavani is now on Telegram. Click here to join our channel and stay updated with the latest news.

Next