Advertisement

ಸೆಟ್‌ –ಟಾಪ್‌ ಬಾಕ್ಸ್‌ನಲ್ಲಿ ಚಿಪ್‌

10:20 AM Apr 16, 2018 | Karthik A |

ಮಾರುಕಟ್ಟೆಗೆ ಬರಲಿರುವ ನೂತನ ಸೆಟ್‌ ಟಾಪ್‌ ಬಾಕ್ಸ್‌ಗಳಲ್ಲಿ ವಿಶೇಷ ಚಿಪ್‌ ಅಳವಡಿಸಲು ಕೇಂದ್ರ ಚಿಂತನೆ ನಡೆಸಿದೆ. ತನ್ನ ಈ ಚಿಂತನೆಯನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ಮುಂದಿಟ್ಟಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಈ ಬಗ್ಗೆ ಎಲ್ಲ ಡಿಟಿಎಚ್‌ ಉಪಕರಣಗಳ ತಯಾರಕರಿಗೆ ಸೂಚಿಸಬಹುದೆಂದು ಹೇಳಿದೆ. ಯಾಕೀ ಚಿಂತನೆ, ಇದರಿಂದೇನು ಪ್ರಯೋಜನ? ಮಾಹಿತಿ ಇಲ್ಲಿದೆ. 

Advertisement

ಉದ್ದೇಶವೇನು?
ವಾಹಿನಿಗಳ ಜನಪ್ರಿಯತೆ ಅರಿಯವುದೇ ಇದರ ಮೂಲ ಉದ್ದೇಶ. ಜನರು ಯಾವ ವಾಹಿನಿಗಳನ್ನು ಹೆಚ್ಚು ನೋಡುತ್ತಾರೆ, ಯಾವ ವಾಹಿನಿಯ ವೀಕ್ಷಣೆಯಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ ಎಂಬ ಮಾಹಿತಿಯನ್ನು ಈ ಮೂಲಕ ಕಲೆಹಾಕಲು ಚಿಂತನೆ ನಡೆಸಲಾಗಿದೆ. 

ಮಾನದಂಡವಿಲ್ಲವೇ?
ಸದ್ಯಕ್ಕೆ, ವಾಹಿನಿಗಳ ಜನಪ್ರಿಯತೆ ಅಳೆಯುತ್ತಿರುವ ಪ್ರಸರಣ ವೀಕ್ಷಕ ಸಂಶೋಧನಾ ಮಂಡಳಿಯ (ಬಾರ್ಕ್‌) ಮಾನದಂಡಗಳು ಹಳೆಯದಾಗಿವೆ. ಅಲ್ಲದೆ, ಬಾರ್ಕ್‌ ನೀಡುವ ಜನಪ್ರಿಯ ತೆಯ ಅಂಕಿ – ಅಂಶ ನಿಖರವಾಗಿರುವುದಿಲ್ಲ. ಹಾಗಾಗಿಯೇ, ಬಾರ್ಕ್‌ಗೆ ಪರ್ಯಾಯವಾಗಿ, ಈ ‘ಚಿಪ್‌’ ಐಡಿಯಾ ನೀಡಲಾಗಿದೆ. 

ಮತ್ತೂಂದು ಐಡಿಯಾ!
ಚಿಪ್‌ ಅಳವಡಿಕೆಯನ್ನು ಜನ ಒಪ್ಪದಿದ್ದರೆ, ಬಾರ್ಕ್‌ ಅಳವಡಿಸಿಕೊಂಡಿರುವ ವಿಧಾನದಲ್ಲೇ ಸುಧಾರಣೆ ತಂದು ನಿಖರವಾಗಿ ವೀಕ್ಷಕ ವರ್ಗವನ್ನು ಅಳೆಯುವ ಮತ್ತೂಂದು ಆಲೋಚನೆಯೂ ಸರಕಾರದ ಮುಂದಿದೆ. ನಮ್ಮ ಮನೆಗಳಲ್ಲಿರುವ ಟಿವಿಗಳಲ್ಲಿನ ಮದರ್‌ ಬೋರ್ಡ್‌ನಲ್ಲಿ ಪೀಪಲ್‌ ಮೀಟರ್‌ ಎಂಬ ವಿಶೇಷ ಹಾಗೂ ಪುಟ್ಟ ಪರಿಕರ ಇರುತ್ತದೆ. ಇದರ ಆಧಾರದ ಮೇಲೆ ಬಾರ್ಕ್‌, ಯಾವ ವಾಹಿನಿಯನ್ನು ಎಷ್ಟು ಜನ ನೋಡಿದರೆಂದು ನಿರ್ಧರಿಸುತ್ತದೆ. ಆದರೆ, ಪ್ರತಿ 30,000 ಪೀಪಲ್‌ ಮೀಟರ್‌ಗಳು ನೀಡುವ ಮಾಹಿತಿಯ ಸರಾಸರಿಯನ್ನು ಆಧರಿಸಿ ಯಾವ ವಾಹಿನಿ ನಂಬರ್‌ ಒನ್‌ ಎಂಬುದನ್ನು ಬಾರ್ಕ್‌ ಹೇಳುತ್ತದೆ. ಪ್ರತಿ 30,000 ಪೀಪಲ್‌ ಮೀಟರ್‌ಗಳ ಬದಲಿಗೆ ಪ್ರತಿ 300 ಪೀಪಲ್‌ ಮೀಟರ್‌ಗಳ ಲೆಕ್ಕವನ್ನಿಟ್ಟುಕೊಂಡು ಜನ ಪ್ರಿಯತೆ ಅಳೆಯಲು ಆಲೋಚಿಸಲಾಗಿದೆ. 

ಪ್ರಯೋಜನಗಳೇನು?
– ಸರಳವಾಗಿ, ನಿಖರವಾಗಿ ವಾಹಿನಿಗಳ ಜನಪ್ರಿಯತೆ ಅಳೆಯಲು ಸಾಧ್ಯ
– ಜಾಹೀರಾತುದಾರರಿಗೆ ಜನಪ್ರಿಯ ವಾಹಿನಿಗಳನ್ನು ಆಯ್ಕೆ ಮಾಡಲು ಸುಲಭ ಸಾಧ್ಯ
– ವಾಹಿನಿಗಳ ಬಗ್ಗೆ ತಿಳಿಯಲು ಜಾಹೀರಾತು ಹಾಗೂ ದೃಶ್ಯ ಪ್ರಚಾರ ನಿರ್ದೇಶನಾಲಯ (ಡಿಎವಿಪಿ)ಕ್ಕೆ  ಅನುಕೂಲ
ಅತಿ ಹೆಚ್ಚು ವೀಕ್ಷಕರಿರುವ ವಾಹಿನಿಗಳಿಗೆ ಸರಕಾರದಿಂದ ಉತ್ತೇಜನ

Advertisement
Advertisement

Udayavani is now on Telegram. Click here to join our channel and stay updated with the latest news.

Next