Advertisement

ಬ್ಯಾಂಕ್ ರಜಾ ದಿನಗಳಲ್ಲಿಯೂ ಕೂಡ ಎನ್.ಎ.ಸಿ.ಎಚ್ ಸೇವೆ ಲಭ್ಯ : ಆರ್ ಬಿ ಐ

01:44 PM Jun 06, 2021 | |

ಮುಂಬೈ :   ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಹೊಸದೊಂದು ಪ್ರಕಟಣೆಯೊಂದನ್ನು ಹೊರಡಿಸಿದೆ.

Advertisement

ಇನ್ಮುಂದೆ ಬ್ಯಾಂಕ್ ರಜಾ ದಿನಗಳು ಹಾಗೂ ಆದಿತ್ಯವಾರವನ್ನೊಳಗೊಂಡು ಎಲ್ಲಾ ದಿನಗಳಲ್ಲಿಯೂ ರಾಷ್ಟ್ರೀಯ ಸ್ವಯಂಚಾಲಿತ ಕ್ಲಿಯರಿಂಗ್ ಹೌಸ್ (ಎನ್.ಎ.ಸಿ.ಎಚ್.)ವ್ಯವಸ್ಥೆ ಲಭ್ಯವಿರುತ್ತದೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಬರುವ ಆಗಸ್ಟ್ 1 ರಿಂದ ಭಾನುವಾರ ಮತ್ತು ಬ್ಯಾಂಕ್ ರಜಾದಿನಗಳು ಒಳಗೊಂಡು ಎಲ್ಲಾ ದಿನಗಳಲ್ಲಿ ರಾಷ್ಟ್ರೀಯ ಸ್ವಯಂಚಾಲಿತ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಕಟಿಸಿದೆ. ಆರ್‌ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಕೇಂದ್ರ ಬ್ಯಾಂಕಿನ ಎಂಪಿಸಿ ಪ್ರಕಟಣೆಯ ಸಂದರ್ಭದಲ್ಲಿ ಈ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಸಿಂಪಲ್ ‍ಸ್ಟಾರ್ ಬರ್ತ್ ಡೇಗೆ ಬಂಪರ್ ಉಡುಗೊರೆ:’777 ಚಾರ್ಲಿ’ ಚಿತ್ರದ ಟೀಸರ್ ಇಲ್ಲಿದೆ ನೋಡಿ

ಸಾಲಗಳ ಆವರ್ತಕ ಕಂತುಗಳು, ಮ್ಯೂಚುವಲ್ ಫಂಡ್‌ ಗಳಲ್ಲಿನ ಹೂಡಿಕೆ, ವಿಮಾ ಪ್ರೀಮಿಯಂ ಇತ್ಯಾದಿಗಳನ್ನು ಒಳಗೊಂಡು ಇನ್ನು ಬ್ಯಾಂಕ್ ರಜಾದಿನಗಳಲ್ಲಿಯೂ ಕೂಡ ಕಾರ್ಯ ನಿರ್ವಹಿಸಬಹುದು  ಎಂದು ರಿಸರ್ವ್ ಬ್ಯಾಂಕ್ ಹೇಳಿದೆ.

Advertisement

ಈ ಹಿಂದೆ ಬ್ಯಾಂಕ್ ರಜಾ ಸ್ವಯಂಚಾಲಿತ ಕ್ಲಿಯರಿಂಗ್ ಹೌಸ್ (ಎನ್.ಎ.ಸಿ.ಎಚ್.)ವ್ಯವಸ್ಥೆ ಪ್ರಕ್ರಿಯೆಗೊಳಿಸಿರದಿದ್ದ ರಜಾದಿನಗಳಲ್ಲಿ ಸಂಬಳ ಖಾತೆಗೆ ಜಮೆ ಆಗುತ್ತಿರಲಿಲ್ಲ.

“ಎನ್‌ ಪಿ ಸಿ ಐ ನಿರ್ವಹಿಸುವ ಬೃಹತ್ ಪಾವತಿ ವ್ಯವಸ್ಥೆಯಾದ ಎನ್.ಎ.ಸಿ.ಎಚ್.ಹೆಚ್ಚಿನ ಸಂಖ್ಯೆಯ ಫಲಾನುಭವಿಗಳಿಗೆ ನೇರ ಮತ್ತು ಲಾಭದಾಯಕ ಡಿಜಿಟಲ್ ಮೋಡ್ (ಡಿಬಿಟಿ) ಯಾಗಿ ಹೊರಹೊಮ್ಮಿದೆ. ಇದು ಪ್ರಸ್ತುತ ಕೋವಿಡ್ -19ರ ಸಮಯದಲ್ಲಿ ಸರ್ಕಾರದ ಸಬ್ಸಿಡಿಗಳನ್ನು ವರ್ಗಾವಣೆ ಮಾಡಲು ಸಹಾಯ ಮಾಡಲಿದೆ. ಅದೂ ಸಮಯೋಚಿತ ಮತ್ತು ಪಾರದರ್ಶಕ ರೀತಿಯಲ್ಲಿರಲಿದೆ.” ಕೇಂದ್ರ ಬ್ಯಾಂಕ್ ಹೇಳಿದೆ.

ಇನ್ನು, ರಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರ ಅನುಕೂಲಕ್ಕಾಗಿ, ವರ್ಷದ ಎಲ್ಲಾ ದಿನಗಳಲ್ಲಿ ಆರ್‌ ಟಿ ಜಿ ಎಸ್ ಲಭ್ಯತೆಯ ಲಾಭವನ್ನು ಪಡೆಯಲು, 2021 ರ ಆಗಸ್ಟ್ 1 ರಿಂದ ಜಾರಿಗೆ ಬರುವಂತೆ ವರ್ಷದುದ್ದಕ್ಕೂ ವಾರದ ಎಲ್ಲಾ ದಿನಗಳಲ್ಲಿ ರಾಷ್ಟ್ರೀಯ ಸ್ವಯಂಚಾಲಿತ ಕ್ಲಿಯರಿಂಗ್ ಹೌಸ್ ವ್ಯವಸ್ಥೆಯ ಸೇವೆ ಲಭ್ಯವಿರುವಂತೆ  ಮಾಡಲು ಪ್ರಕ್ರಿಯೆ ನಡೆಯುತ್ತದೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ : ದಾಸನ ಕರೆಗೆ ಒಗೊಟ್ಟ ಅಭಿಮಾನಿಗಳು: ಪ್ರಾಣಿಗಳ ದತ್ತು ಪಡೆಯಲು ಮುಗಿಬಿದ್ದ ಜನ  

Advertisement

Udayavani is now on Telegram. Click here to join our channel and stay updated with the latest news.

Next