Advertisement

ಆರ್ಥಿಕ ಅಭಿವೃದ್ಧಿ ಬಗ್ಗೆ ಗಮನಹರಿಸಿ, ಕಾಮಿಡಿ ಸರ್ಕಸ್ ನಡೆಸೋದು ಬೇಡ; ಪ್ರಿಯಾಂಕಾ

10:20 AM Oct 20, 2019 | sudhir |

ಹೊಸದಿಲ್ಲಿ : ಆರ್ಥಿಕ ವಲಯದಲ್ಲಿನ ಸ್ಥಿತಿ-ಗತಿಗಳನ್ನು ಸುಧಾರಿಸುವ ಕೆಲಸ ಮಾಡುವುದನ್ನು ಬಿಟ್ಟು  ಕಾಮಿಡಿ ಸರ್ಕಸ್‌ ನಡೆಸುವುದು ಬೇಡ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ವಿರುದ್ಧ  ಹರಿಹಾಯ್ದಿದ್ದಾರೆ.

Advertisement

ಶುಕ್ರವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ  ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್‌ ಗೋಯಲ್‌ ನೊಬೆಲ್‌ ಪ್ರಶಸ್ತಿ ಪುರಸ್ಕೃತ ಅಭಿಜಿತ್‌ ಬ್ಯಾನರ್ಜಿಯವರನ್ನು ಎಡಪಂಥೀಯ ವ್ಯಕ್ತಿ ಎಂದು ಹೇಳಿಕೆ ನೀಡಿದ್ದು, ಭಾರತೀಯ ಮತದಾರರು ತಿರಸ್ಕರಿಸಿರುವ ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆಯಲ್ಲಿದ್ದ  ಕಡಿಮೆ ಆದಾಯ ಯೋಜನೆಯ ನ್ಯಾಯ್ ಗೆ ಬೆಂಬಲ ನೀಡಿದ್ದಾರೆ. ಹೀಗಾಗಿ ಆ ವ್ಯಕ್ತಿಯ ಅಭಿಪ್ರಾಯವನ್ನು ಒಪ್ಪಬೇಕಾಗದ ಅಗತ್ಯವಿಲ್ಲ ಎಂಬ ಹೇಳಿಕೆಯನ್ನು ನೀಡಿದ್ದರು.

ಇದಕ್ಕೆ  ತಿರುಗೇಟು ನೀಡಿರುವ ಪ್ರಿಯಾಂಕಾ,  ಬಿಜೆಪಿ ನಾಯಕರು ತಮ್ಮ  ಕೆಲಸ ಮಾಡುವುದನ್ನು ಬಿಟ್ಟು, ಇನ್ನೊಬ್ಬರು ಮಾಡಿದ ಸಾಧನೆಯನ್ನು  ಅಲ್ಲಗಳೆಯುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದು, ಕಳೆದ ಮೇ ನಲ್ಲಿ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ನ್ಯಾಯ್ ಯೋಜನೆ ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆಯಲ್ಲಿನ ಮುಖ್ಯ ಯೋಜನೆಗಳಲ್ಲಿ ಒಂದಾಗಿತ್ತು ಎಂದು ಸಮರ್ಥನೆಯನ್ನು ನೀಡಿದ್ದಾರೆ.

ಅಲ್ಲದೇ ಪ್ರಸ್ತುತ ದೇಶದ ಆರ್ಥಿಕ ವಲಯ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿದ್ದು , ಅದರತ್ತ ಗಮನ ಹರಿಸಬೇಕಾದ ಸಚಿವರು ಸರ್ಕಸ್‌ ಕಂಪೆನಿ ನಡೆಸುವ ಕೆಲಸ ಮಾಡುತ್ತಿದ್ದಾರೆ ಎಂದು ಸೆಪ್ಟೆಂಬರ್‌ ತಿಂಗಳಲ್ಲಿ  ಆಟೋಮೊಬೈಲ್‌ ವಲಯದ ಬೆಳವಣಿಗೆ ಕುರಿತು ಬಿಡುಗಡೆಯಾದ ವರದಿ ಛಾಯಾಚಿತ್ರವನ್ನು ಲಗತ್ತಿಸುವ ಮೂಲಕ ಪ್ರಿಯಾಂಕಾ ಟ್ವಿಟರ್‌ನಲ್ಲಿ  ಟೀಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next