Advertisement
22 ವರ್ಷದ ಯುವತಿ ದೈಹಿಕ ದೌರ್ಜನ್ಯಕ್ಕೊಳಗಾಗಿದ್ದಾರೆ. ಕೃತ್ಯ ಎಸಗಿದ ನಿಲಾದ್ರಿನಗರ ನಿವಾಸಿ ಶಹಾಬುದ್ದೀನ್, ಆತನ ಸ್ನೇಹಿತ ಅರಾಪತ್ ಷರೀಫ್ ಅಲಿಯಾಸ್ ಅಖ್ತರ್ ಮತ್ತು ಶಹಾಬುದ್ದೀನ್ ಪ್ರಿಯತಮೆಯ ಸ್ನೇಹಿತೆ ಸೇರಿ ಮೂವರನ್ನು ಬಂಧಿಸಲಾಗಿದೆ.
Related Articles
Advertisement
ಕೇರಳ ಪೊಲೀಸರಿಂದ ಮಾಹಿತಿ: ಗಾಬರಿಗೊಂಡ ಸಂತ್ರಸ್ತೆ ಕೂಡಲೇ ತನ್ನ ಪ್ರಿಯಕರನಿಗೆ ವಿಷಯ ತಿಳಿಸಿ, ಕೇರಳದಲ್ಲಿ ಪರಿಚಯಸ್ಥ ಪೊಲೀಸ್ ಅಧಿಕಾರಿಯೊಬ್ಬರಿಗೆ ಮಾಹಿತಿ ನೀಡಿದ್ದಾರೆ. ಆ ಅಧಿಕಾರಿ ಆಗ್ನೇಯ ವಿಭಾಗ ಪೊಲೀಸರಿಗೆ ದೂರು ನೀಡಿದ್ದರು. ಅನಂತರ ಸಂತ್ರಸ್ತೆಯನ್ನು ಸಂಪರ್ಕಿಸಿದ ಪೊಲೀಸರು ಕೂಡಲೇ ಆಕೆಯಿಂದ ಹೇಳಿಕೆ ಪಡೆದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಮೂರು ತಂಡ ರಚಿಸಲಾಗಿತ್ತು. ಈ ತಂಡ ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ ಎಂದು ಪೊಲೀಸರು ಹೇಳಿದರು.
ಸಂತ್ರಸ್ತೆ ಪ್ರಿಯಕರನಿಗೆ ಸುಳ್ಳು ಮಾಹಿತಿನ.25ರಂದು ತಡರಾತ್ರಿ ಸಂತ್ರಸ್ತೆ ಎಲೆಕ್ಟ್ರಾನಿಕ್ ಸಿಟಿ 3ನೇ ಹಂತದಲ್ಲಿರುವ ಪ್ರಿಯಕರನ ಭೇಟಿಗೆ ರ್ಯಾಪಿಡೋ ಕಾಯ್ದಿರಿಸಿದ್ದರು. ಆದರೆ, ಮದ್ಯ ಸೇವಿಸಿದ್ದರಿಂದ ಮಾರ್ಗ ಮಧ್ಯೆ ಯುವತಿ ಅಸ್ವಸ್ಥಗೊಂಡಿದ್ದು, ಜತೆಗೆ ಆರೋಪಿಗೆ ಸಿಗರೇಟ್ ಕೊಡುವಂತೆ ಕೇಳಿದ್ದಾಳೆ ಎಂದು ಹೇಳಲಾಗಿದೆ. ಆಗ ಆರೋಪಿ ಸ್ನೇಹಿತನಿಗೆ ಕರೆ ಮಾಡಿ, ಯುವತಿಯ ವಿಚಾರ ತಿಳಿಸಿ, ತನ್ನ ಕೋಣೆಗೆ ಬರುವಂತೆ ತಿಳಿಸಿದ್ದಾನೆ. ಅನಂತರ ಇಬ್ಬರು ದೈಹಿಕ ದೌರ್ಜನ್ಯ ಎಸಗಿದ್ದಾರೆ. ಈ ಮಧ್ಯೆ ಎಲೆಕ್ಟ್ರಾನಿಕ್ ಸಿಟಿ ಮೂರನೇ ಹಂತದಲ್ಲಿ ಕಾಯುತ್ತಿದ್ದ ಸಂತ್ರಸ್ತೆ ಪ್ರಿಯಕರ, ನಸುಕಿನಲ್ಲಿ ಯುವತಿಯ ಮೊಬೈಲ್‌ಗೆ ಕರೆ ಮಾಡಿದ್ದಾನೆ. ಆಗ ಶಹಾಬುದ್ದೀನ್ ಪ್ರೇಯಸಿ ಕರೆ ಸ್ವೀಕರಿಸಿ, “ನಿಮ್ಮ ಸ್ನೇಹಿತೆ ರಸ್ತೆಯಲ್ಲಿ ಅಸ್ವಸ್ಥಗೊಂಡಿದ್ದರು. ಅದನ್ನು ಕಂಡು ಮನೆಗೆ ಕರೆ ತರಲಾಗಿದೆ. ಆರೋಗ್ಯವಾಗಿದ್ದಾರೆ. ಕೆಲವೇ ಹೊತ್ತಿನಲ್ಲಿ ಮನೆಗೆ ಬರಲಿದ್ದಾರೆ’ ಎಂದು ಕರೆ ಸ್ಥಗಿತಗೊಳಿಸಿ, ಮೊಬೈಲ್ ಸ್ವಿಚ್ಡ್ ಆಫ್ ಮಾಡಿದ್ದಾಳೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು. ಆರೋಪಿಗಳ ಮೇಲೆ ಕ್ರಿಮಿನಲ್ ಕೇಸ್
ಆರೋಪಿಗಳ ಪೈಕಿ ಶಹಾಬುದ್ದೀನ್ ರ್ಯಾಪಿಡೋ ಚಾಲಕನಾಗಿದ್ದರೆ, ಅಖ್ತರ್ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಈ ಮಧ್ಯೆ ಶಹಾಬುದ್ದೀನ್ ವಿರುದ್ಧ ನಗರ ಎರಡು ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಾಗಿದೆ. ಮತ್ತೊಂದೆಡೆ ರ್ಯಾಪಿಡೋ ಸಂಸ್ಥೆಗೆ ಆರೋಪಿಯ ಒಂದು ವರ್ಷದ ಪಿಕಪ್ ಮತ್ತು ಡ್ರಾಪ್‌ನ ಮಾಹಿತಿ ಪಡೆಯಲಾಗಿದೆ. ಅದನ್ನು ಪರಿಶೀಲಿಸಿ ಬೇರೆ ಎಲ್ಲಾದರೂ ಈ ರೀತಿಯ ಕೃತ್ಯ ಎಸಗಿದ್ದರೆ. ಈ ಸಂಬಂಧ ಹೆಚ್ಚುವರಿ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ಹೇಳಿದರು. ಕೇರಳ ಮೂಲದ ಸಂತ್ರಸ್ತೆ ಮೇಲೆ ಇಬ್ಬರಿಂದ ನಡೆದ ಅತ್ಯಾಚಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಘಟನಾ ಸ್ಥಳಕ್ಕೆ ವಿಧಿ ವಿಜ್ಞಾನ ತಂಡ ತೆರಳಿದ್ದು, ಎಲ್ಲ ರೀತಿಯ ಸಾಕ್ಷ್ಯ ಸಂಗ್ರಹಿಸಲಾಗಿದೆ. ಯುವತಿ ಸೇರಿ ಮೂವರನ್ನು ಬಂಧಿಸಲಾಗಿದೆ.
●ಪ್ರತಾಪ್ ರೆಡ್ಡಿ, ನಗರ ಪೊಲೀಸ್ ಆಯುಕ್ತ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ರ್ಯಾಪಿಡೋ ಚಾಲಕ ಮತ್ತು ಆತನ ಸ್ನೇಹಿತ ಹಾಗೂ ಒಬ್ಬ ಯುವತಿಯನ್ನು ಬಂಧಿಸಲಾಗಿದೆ. ಸಂತ್ರಸ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಸದ್ಯ ಆರೋಗ್ಯವಾಗಿದ್ದಾಳೆ. ಆರೋಪಿಗಳ ಹಿನ್ನೆಲೆ ಪರಿಶೀಲಿಸಲಾಗುತ್ತಿದೆ.
●ಸಿ.ಕೆ.ಬಾಬಾ, ಆಗ್ನೇಯ ವಿಭಾಗದ ಡಿಸಿಪಿ