Advertisement

ವಿಶ್ವ ಟೇಬಲ್‌ ಟೆನಿಸ್‌ : ಯುವ ಟಿಟಿ ತಾರೆ ಹನ್ಸಿನಿ ಮಾಥನ್‌ ರಾಜನ್‌ಗೆ ಪ್ರಶಸ್ತಿ

11:28 PM Aug 24, 2022 | |

ಹೊಸದಿಲ್ಲಿ: ಯುವ ಟೇಬಲ್‌ ಟೆನಿಸ್‌ ತಾರೆ ಹನ್ಸಿನಿ ಮಾಥನ್‌ ರಾಜನ್‌ ಅವರು ಇಕ್ವಾಡೋರ್‌ನಲ್ಲಿ ನಡೆದ ವಿಶ್ವ ಟೇಬಲ್‌ ಟೆನಿಸ್‌ ಕಂಟೆಂಡರ್‌ ಸ್ಪರ್ಧೆಯ ಅಂಡರ್‌-13 ವಿಭಾಗದಲ್ಲಿ ಕೊಲಂಬಿಯದ ಮರಿಯಾನಾ ರಾಡ್ರಿಗಸ್‌ ಅವರನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

Advertisement

ಇಕ್ವಾಡೋರ್‌ನ ಕ್ಯುನ್‌ಸ್ಕದಲ್ಲಿ ಆ. 19ರಿಂದ 21ರ ವರೆಗೆ ನಡೆದ ಈ ಸ್ಪರ್ಧೆಯಲ್ಲಿ ಹನ್ಸಿನಿ 11-7, 11-8, 11-7 ಅಂಕಗಳಿಂದ ಗೆಲುವು ಸಾಧಿಸಿದ್ದರು. ಇದು ಅವರ ನಾಲ್ಕನೇ ವಿಶ್ವ ಟಿಟಿ ಕಂಟೆಂಡರ್‌ ಪ್ರಶಸ್ತಿಯಾಗಿದೆ.

ಭಾರತದ ಯಶಸ್ವಿನಿ ಘೋರ್ಪಡೆ ಅವರು ಸ್ಯಾಲಿ ಮೊಯ್‌ಲ್ಯಾಂಡ್‌ ಅವರನ್ನು 10-12, 11-5, 11-6, 11-7 ಅಂಕಗಳಿಂದ ಸೋಲಿಸಿ ಅಂಡರ್‌-19 ವಿಭಾಗದ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಬ್ರಝಿಲ್‌ನ ಜಿ. ತಕಸುಯಿ ಅವರನ್ನು 11-6, 11-8, 11-7 ಅಂತರದಿಂದ ಉರುಳಿಸಿದ ಸುಹಾನಾ ಸೈನಿ ಅವರು ಅಂಡರ್‌-17 ವಿಭಾಗದ ಪ್ರಶಸ್ತಿ ಜಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next