Advertisement

ನಗರ ತೊರೆದ ಬಳಿಕ ಹಳಿಗಳಲ್ಲಿ ಸುಲಭ ಕೃಷಿಗಾಗಿ ಯುವಕರ ಒಲವು

12:05 PM Nov 13, 2021 | Team Udayavani |

ಬೆಂಗಳೂರು: ಕೊರೊನಾ ನಂತರದ ಕಾಲಘಟ್ಟದಲ್ಲಿ ನಗರ ಜೀವನಕ್ಕೆ ಗುಡ್‌ ಬೈ ಹೇಳಿ ಹಳ್ಳಿಗಳತ್ತ ಸಾಗಿರುವ ಯುವಕರು, ಕೃಷಿಯತ್ತ ಒಲವು ತೋರಿ ದ್ದಾರೆ. ಸುಲಭವಾಗಿ ಕೃಷಿ ಮಾಡಲು ಸಿಗಬಹು ದಾದ ಯಂತ್ರೋಪಕರಣಗಳಿಗೆ ಹುಡುಕಾಟದಲ್ಲಿ ನಿರತರಾಗಿದ್ದರು. ಜಿಕೆವಿಕೆಯಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ಕೃಷಿ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರೇ ಭೇಟಿ ನೀಡುತ್ತಿದ್ದು, ಆಧುನಿಕ ಕೃಷಿ ಯಂತ್ರೋ ಪಕರಣಗಳು, ನೂತನ ಕೃಷಿ ಪದ್ಧತಿ, ಉತ್ತಮ ಇಳುವರಿ ನೀಡಬಹುದಾದ ಬೆಳೆಗಳು, ವಾಣಿಜ್ಯ ಬೆಳೆಗಳು ಮತ್ತು ಸಣ್ಣ ರೈತರಾಗಿ ಒಂದೆರಡು ಎಕರೆ ಪ್ರದೇಶಗಳಲ್ಲಿ ಬೆಳೆಯಬಹುದಾದ ಮತ್ತು ಉತ್ತಮ ಆದಾಯ ಬರುವಂತಹ ಬೆಳೆಗಳತ್ತ ಯುವಕರು ನೋಟ ಹರಿಸಿದ್ದರು.

Advertisement

ಇತ್ತೀಚಿನ ದಿನಗಳಲ್ಲಿ ಕೃಷಿ ಕಾರ್ಮಿಕರ ಸಂಖ್ಯೆ ಇಳಿಮುಖವಾಗು¤ತಿದೆ. ಅದರ ಜೊತೆಗೆ ಕೃಷಿ ಕಾರ್ಮಿಕರ ಕೂಲಿ ಕೂಡ ಹೆಚ್ಚಳವಾಗುತ್ತಿದೆ. ಇದರಿಂದ ಸಣ್ಣ ರೈತರು, ವ್ಯವಸಾಯಕ್ಕೆ ಹೂಡಿರುವ ಹಣದ ಜೊತೆಗೆ ಲಾಭ ಕಡಿಮೆಯಾಗುತ್ತಿದೆ. ಹೀಗಾಗಿ, ಕೃಷಿ ಯಂತ್ರೋಪಕರಣಗಳನ್ನು ಬಳಸಿ ಸುಲಭವಾಗಿ ಕೃಷಿ ಮಾಡಬಹುದಾದ ಯಂತ್ರಗಳ ಮಾಹಿತಿಯನ್ನು ಯುವಕರು ಕೇಳಿ ಪಡೆಯುತ್ತಿದ್ದರು.

ಯಾವ ಬೆಳೆಗಳಿಗೆ ಆದ್ಯತೆ? ತೋಟಗಾರಿಕಾ ಬೆಳೆಗಳಾದ ಟೊಮೆಟೋ, ದಪ್ಪ ಮೆಣಸಿನಕಾಯಿ, ಹಸಿರು ಮೆಣಸಿನಕಾಯಿ, ಹುರುಳಿಕಾಯಿ, ಬದನೆಕಾಯಿ, ಕ್ಯಾರೇಟ್‌, ಆಹಾರ ಬೆಳೆಗಳಾದ ರಾಗಿ, ಭತ್ತ, ಕಡಿಮೆ ನೀರಿನಲ್ಲಿ ಮತ್ತು ಖುಷ್ಕಿ ಜಮೀನುಗಳಲ್ಲಿ ಬೆಳೆಯಬಹುದಾದ ಸಿರಿಧಾನ್ಯಗಳಾದ ಸಾಮೆ, ಆರ್ಕ, ನವಣೆ, ಬರಗು, ಎಣ್ಣೆಕಾಳುಗಳು ಮತ್ತು ಫಾಸ್ಟ್‌ ಫ‌ುಡ್‌ಗಳಿಗೆ ಬಳಸಬಹುದಾದ ವಿದೇಶಿ ತರಕಾರಿಗಳನ್ನು ಬೆಳೆಯಲು ಯುವ ರೈತರು ಆಸಕ್ತಿ ತೋರುತ್ತಿದ್ದಾರೆ.

ಇದನ್ನೂ ಓದಿ:- ಪುನೀತ್‌ ಹೆಸರಿಡಲು ಹೋದರೆ ಅಂಬೇಡ್ಕರ್‌ ವಿರೋಧಿಗಳೆಂಬ ಹುನ್ನಾರ..!

ಇದಕ್ಕಾಗಿ ಕಳೆ ತೆಗೆಯುವುದು, ಬದು ನಿರ್ಮಾಣ, ಗುಳಿ ತೋಡುವುದು, ಉಳುಮೆ ಮಾಡು ವುದು, ಕೀಟನಾಶಕ ಸಿಂಪಡಣೆ ಮತ್ತು ಕೊಯ್ಲು ಕೆಲಸವನ್ನು ಸುಲಭಗೊಳಿಸುವ ಯಂತ್ರ ಗಳಿಗೆ ಹೆಚ್ಚಿನ ಜನರು ಆಸಕ್ತಿಯಿಂದ ನೋಡುತ್ತಿದ್ದರು. ಈ ಕುರಿತು ಮಾತನಾಡಿದ ಮೈಸೂರಿನ ರೈತ ಮಹದೇವಪ್ಪ, ಇಸ್ರೇಲ್‌ ಮಾದರಿ ಕೃಷಿಯಿಂದ ನೀರಿನ ಬಳಕೆ ಮತ್ತು ಕೃಷಿ ಕಾರ್ಮಿಕರ ಬಳಕೆ ಎರಡೂ ಕೂಡ ಕಡಿಮೆಯಾಗುತ್ತದೆ.

Advertisement

ಯಂತ್ರೋಪಕರಣಗಳನ್ನು ಬಳಸಿಕೊಳ್ಳುವ ಜೊತೆಗೆ ಆಧುನಿಕ ತಂತ್ರಜ್ಞಾನ ಗಳನ್ನು ಅಳವಡಿಸಿಕೊಂಡರೆ, ಹೆಚ್ಚಿನ ಪ್ರಮಾಣದಲ್ಲಿ ಇಳುವರಿ ತೆಗೆಯಲು ಸಾಧ್ಯವಾಗುತ್ತದೆ. ಅದಕ್ಕಾಗಿ ಬೇಕಾಗುವ ಸಲಕರಣೆಗಳನ್ನು ನೋಡುತ್ತಿದ್ದೇನೆ ಎಂದು ಅಭಿ ಪ್ರಾಯ ವ್ಯಕ್ತಪಡಿಸಿದರು. ಸಾಮಾನ್ಯವಾಗಿ ಮಂಡ್ಯ, ಮೈಸೂರು, ಚಾಮರಾಜನಗರದಲ್ಲಿ ದೇಸಿ ಬೆಳೆಗಳಾದ ಕಬ್ಬು, ಭತ್ತ, ರಾಗಿಯನ್ನೇ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದಾರೆ. ಇದರ ಬದಲಾಗಿ ರೈತರಿಗೆ ಆದಾಯವನ್ನು ತರುವಂತಹ ಬೆಳೆಗಳನ್ನು ಬೆಳೆಯಲು ಆಸಕ್ತನಾಗಿದ್ದೇನೆ. ಹೀಗಾಗಿ, ಕೃಷಿ ಮೇಳದಲ್ಲಿ ಏನಾದರೂ ಅನುಕೂಲ ವಾಗಬಹುದು ಎಂಬ ಉದ್ದೇಶದಿಂದ ಬಂದಿದ್ದೇನೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next