Advertisement

ಹುಟ್ಟೂರಿನತ್ತ ಯುವಜನತೆ ಸ್ವಾಗತಾರ್ಹ ಬೆಳವಣಿಗೆ: ಡಾ|ಹೆಗ್ಗಡೆ

01:14 AM Jan 16, 2022 | Team Udayavani |

ಮೂಡುಬಿದಿರೆ: ಶಿಕ್ಷಣ, ಉದ್ಯೋಗ ನಿಮಿತ್ತ ದೂರದ ಊರುಗಳಿಗೆ ತೆರಳಿದ್ದ ಯುವ ಜನತೆ ಹುಟ್ಟೂರಿಗೆ ಮರಳಿ ಇಲ್ಲೇ ನೆಲೆ ಕಾಣಲು ಹಂಬಲಿಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಹೀಗೆ ಬಂದವರು ಧರ್ಮಶ್ರದ್ಧೆಯಿಂದ, ಆರಾಧನ ಕೇಂದ್ರಗಳು, ಮುನಿಗಳು, ಸ್ವಾಮೀಜಿಗಳ ಸೇವೆ ಗೈ ಯುತ್ತ ಧರ್ಮಪ್ರಭಾವನೆಯ ಕಾರ್ಯ ದಲ್ಲಿ ಸಹ
ಕಾರಿ  ಗಳಾಗಿ ಜೀವನ ಸಾರ್ಥಕ್ಯ ಕಂಡುಕೊಳ್ಳ ಬೇಕಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿ ಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

Advertisement

ಶ್ರೀ ಮಹಾವೀರ ಭವನದಲ್ಲಿ ಶುಕ್ರವಾರ ಸಂಜೆ ಮೂಡುಬಿದಿರೆ ಶ್ರೀ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಜೈನಕಾಶಿ ಮೂಡುಬಿದಿರೆಗೆ ಆಗಮಿಸಿರುವ ಪ.ಪೂ. 108 ಅಮೋಘ ಸಾಗರ ಮುನಿಮಹಾರಾಜರು, ಪ.ಪೂ. 108 ಅಮರ ಕೀರ್ತಿ ಮುನಿಮಹಾರಾಜರು ಹಾಗೂ ಪ.ಪೂ. 108 ಪ್ರಸಂಗ ಸಾಗರ ಮುನಿಮಹಾ ರಾಜರ ಉಪಸ್ಥಿತಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.

ಪ.ಪೂ. 108 ಅಮೋಘ ಸಾಗರ ಮುನಿಮಹಾರಾಜರು ಆಶೀರ್ವಚನದಲ್ಲಿ ಸ್ವಾರ್ಥದ ತ್ಯಾಗಕ್ಕಿಂತ ಮಿಗಿಲು ಕಠಿನ ತಪವಿಲ್ಲ; ನಮ್ಮ ವಿಚಾರ, ನಡೆನುಡಿಯಲ್ಲಿ ಪರಿವರ್ತನೆ ಆಗದೇ ಇದ್ದರೆ ಜೀವನಕ್ಕೆ ಅರ್ಥವಿಲ್ಲ ಎಂದರು.
ಭಟ್ಟಾರಕ ಸ್ವಾಮೀಜಿ ಪ್ರಸ್ತಾವನೆಗೈದು, ಡಾ| ಹೆಗ್ಗಡೆಯವರು ಮೂಡುಬಿದಿರೆಯೊಂದಿಗೆ ಆತ್ಮೀಯ ಸಂಬಂಧ ಉಳ್ಳವರು. ಆರಾಧನ ಕೇಂದ್ರ ಗಳಿಗೆ ಕಾಯಕಲ್ಪದಂಥ ಧರ್ಮಕಾರ್ಯಗಳಲ್ಲಿ ನಾವೆಲ್ಲರೂ ಕೈಜೋಡಿಸಬೇಕು ಎಂದರು.

ಇದನ್ನೂ ಓದಿ:ಕಲಾವಿದರಿಗೆ ಸರ್ಕಾರ ಹೆಚ್ಚು ಅವಕಾಶ ಕಲ್ಪಿಸಲಿ

ಸಮ್ಮಾನ
ಧರ್ಮಕಾರ್ಯ ನಿರತೆ ತುಮಕೂರಿನ ಶಾಂತಲಾ ಅಜಿತ್‌ ಕುಮಾರ್‌ ಅವರನ್ನು ಭಟ್ಟಾರಕ ಸ್ವಾಮೀಜಿ ಸಮ್ಮಾನಿಸಿದರು. ಜೈನ್‌ ಮಿಲನ್‌ ಮಾಜಿ ಅಧ್ಯಕ್ಷೆ ಶ್ವೇತಾ ಕೆ. ಸಮ್ಮಾನ ಪತ್ರ ವಾಚಿಸಿದರು. ಅಮೋಘ ಸಾಗರ ಮುನಿಗಳ ಮಾತೃಶ್ರೀ ಕನಕಲತಾ ಅರವಿಂದ, ಅಮರ ಕೀರ್ತಿ ಮುನಿಗಳ ಸಹೋದರಿ, ಮುನಿ ಮಹಾರಾಜರ
ವಾಸ್ತವ್ಯಕ್ಕಾಗಿ ತಮ್ಮ ನೂತನ ಗೃಹವನ್ನು ಒದಗಿಸಿರುವ ಬೆಳುವಾಯಿ ಶಂಕರ ಶೆಟ್ಟಿ, ಭರತನಾಟ್ಯ ಕಲಾವಿದೆ ಅನನ್ಯಾ ಅವರನ್ನು ಸ್ವಾಮೀಜಿ ಪುರಸ್ಕರಿಸಿದರು.

Advertisement

ಮೊಕ್ತೇಸರರಾದ ಪಟ್ಣಶೆಟ್ಟಿ ಸುದೇಶ್‌ ಕುಮಾರ್‌, ಬಿ. ದಿನೇಶ್‌ ಕುಮಾರ್‌, ಆದರ್ಶ ಅರಮನೆ, ಸ್ವಾಗತ ಸಮಿತಿಯ ಅಧ್ಯಕ್ಷ, ಮಾಜಿ ಸಚಿವ ಕೆ. ಅಭಯಚಂದ್ರ, ಕಾರ್ಕಳದ ಹಿರಿಯ ವಕೀಲ ಎಂ.ಕೆ. ವಿಜಯಕುಮಾರ್‌, ರಾಜವರ್ಮ ಬೈಲಂಗಡಿ, ಧನಕೀರ್ತಿ ಬಲಿಪ, ಶಾಂತಿರಾಜ ಕಂಬಳಿ, ಶೈಲೇಂದ್ರ ಕುಮಾರ್‌, ಮಹೇಂದ್ರ ವರ್ಮ ಜೈನ್‌ ಪಾಲ್ಗೊಂಡಿದ್ದರು.

ಭಟ್ಟಾರಕಶ್ರೀಗಳ ಹಿರಿತನದಲ್ಲಿ ಕಲಿಕುಂಡಾರಾಧನೆ ಜರಗಿತು. ಶೈಲೇಂದ್ರ ಕುಮಾರ್‌ ಸ್ವಾಗತಿಸಿದರು.  ಡಾ| ಪ್ರಭಾತ್‌ ಕುಮಾರ್‌ ಬಿ. ನಿರೂಪಿಸಿದರು. ಜೈನ್‌ಮಿಲನ್‌ ಅಧ್ಯಕ್ಷ ನಮಿರಾಜ ಜೈನ್‌ ವಂದಿಸಿದರು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next