ಕಾಸರಗೋಡು: ಇಂದಿನ ಕಾಲಘಟ್ಟದಲ್ಲಿ ಕಣ್ಮರೆಯಾಗುತ್ತಿರುವ ಹಳೆಯ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವಲ್ಲಿ ಇಂದಿನ ಯುವ ಪೀಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ನಮ್ಮ ಹಬ್ಬ ಹರಿದಿನಗಳೆಲ್ಲಾ ಧಾರ್ಮಿಕ ತಳಹದಿಯ ಹಿನ್ನೆಲೆಯಲ್ಲಿ ಬಂದವುಗಳು. ಈ ಆಚರಣೆಯ ಹಿಂದೆ ಉದಾತ್ತವಾದ ಮೌಲ್ಯ ಅಡಗಿದೆ ಎಂದು ಸತೀಶ್ ಮಾಸ್ಟರ್ ಕೂಡ್ಲು ಅವರು ಹೇಳಿದರು.
ಅವರು ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘದ ವತಿಯಿಂದ ಕೂಡ್ಲು ಉಪಸಂಘದ ನೇತೃತ್ವದಲ್ಲಿ ಜರಗಿದ ಹಿರಿಯರೊಂದಿಗೆ ಯುಗಾದಿ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕೂಡ್ಲು ಉಪಸಂಘದ ಅಧ್ಯಕ್ಷ ಬಿ.ಸತೀಶ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ದಿ|ಆನಂದ ಅವರ ಪತ್ನಿ ರೇವತಿ ಮತ್ತು ರಾಧಾ ಬಾಲಕೃಷ್ಣ ಕೂಡ್ಲು ಅವರಿಗೆ ಈ ವರ್ಷದ ಯುಗಾದಿ ಉಡುಗೋರೆಯನ್ನು ಸತೀಶ್ ಮಾಸ್ಟರ್ ವಿತರಿಸಿದರು.
ನಿವೃತ್ತ ಮುಖ್ಯೋಪಾಧ್ಯಾಯ ಚಂದ್ರಶೇಖರ ಮಾಸ್ಟರ್, ಕೆ.ಸತೀಶ್ ಕೂಡ್ಲು, ವೆಂಕಟೇಶ್ ಬಿಎಸ್‌ಎನ್‌ಎಲ್, ರಾಜೇಂದ್ರ ಕೂಡ್ಲು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಶಾರದಾ ನಾಂಗೂರಿ, ಸ್ವರ್ಣಲತಾ, ಪುಷ್ಪಾ ಕೂಡ್ಲು, ಪದ್ಮಿನಿ, ಪ್ರಪುಲ್ಲ ಕೂಡ್ಲು, ಪ್ರೇಮಾ ಉಮೇಶ್, ಸಹನಾ ಮೊದಲಾದವರು ಉಪಸ್ಥಿತರಿದ್ದರು.
ಶುಶ್ಮಿತಾ, ಶ್ವೇತಾ, ಭವ್ಯ ಅವರಿಂದ ಭಕ್ತಿಗೀತೆ ಗಾಯನ ನಡೆಯಿತು. ಕೆ.ಜಗದೀಶ್ ಕೂಡ್ಲು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶೈಲಿನಿ ಚಂದ್ರಶೇಖರ್ ಅವರು ವಂದಿಸಿದರು.