Advertisement

ಬ್ರಹ್ಮಾವರ: ರೋಸ್‌ ಸಮಾರಂಭದಲ್ಲಿ ಕುಸಿದು ಬಿದ್ದು ಯುವತಿ ಮೃತ್ಯು

08:53 PM Nov 24, 2022 | Team Udayavani |

ಬ್ರಹ್ಮಾವರ: ರೋಸ್‌ ಸಮಾರಂಭದಲ್ಲಿ ಕುಸಿದು ಬಿದ್ದು ಯುವತಿ ಮೃತಪಟ್ಟ ಘಟನೆ ಹಾವಂಜೆಯಲ್ಲಿ ನಡೆದಿದೆ.

Advertisement

ಮೂಲತಃ ಬಸ್ರೂರಿನ ಪ್ರಸ್ತುತ ಹಾವಂಜೆಯ ಚಿಕ್ಕಮ್ಮನ ಮನೆಯಲ್ಲಿ ನೆಲೆಸಿದ್ದ ಜೋಸ್ನಾ ಮರಿಯಾ ಕೊತಾ(23) ಮೃತಪಟ್ಟವರು. ಅವರು ಬುಧವಾರ ರಾತ್ರಿ ಮನೆಯಲ್ಲಿ ರೋಸ್‌ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭ ರಕ್ತದ ಒತ್ತಡ ಕಡಿಮೆಯಾಗಿ ಕುಸಿದು ಬಿದ್ದರು ಎನ್ನಲಾಗಿದೆ.

ತಕ್ಷಣ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಅವರು ತಂದೆ ಜೋರ್ಜ್‌ ಕೋತಾ, ತಾಯಿ ಐರಿನ್‌ ಕೋತಾ ಹಾಗೂ ಸಹೋದರನನ್ನು ಅಗಲಿದ್ದಾರೆ. ಅವರು ಎಂ.ಕಾಂ. ಪದವಿ ಮುಗಿಸಿದ್ದರು.

ಹರಿದಾಡಿದೆ ಮನಕಲಕುವ ವೀಡಿಯೋ:

ಯುವತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂತೋಷವಾಗಿಯೇ ಬರುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ನಡೆದುಕೊಂಡು ಬರುತ್ತಿದ್ದಂತೆಯೇ ಹಠಾತ್‌ ಅಸ್ವಸ್ಥರಾದ ಯುವತಿ ಮುಂಭಾಗಕ್ಕೆ ಕುಸಿದು ಬಿದ್ದರು. ಈ ವೀಡಿಯೋ ಮನಕಲಕುವಂತಿತ್ತು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next