Advertisement

ಕೋವಿಡ್‌ ಸೋಂಕಿತರಿಗೆ ಯುವ ವೈದ್ಯರು ಆಶಾಕಿರಣ

10:18 PM May 20, 2021 | Team Udayavani |

ಕುಂದಾಪುರ:  ಕೋವಿಡ್ ಕಾಲಘಟ್ಟದಲ್ಲಿ ಕೋವಿಡ್‌ ಸೋಂಕಿತರನ್ನು ನಾವು ಆರೈಕೆ  ಮಾಡುತ್ತೇವೆ ಎನ್ನುವ   ಸಮರ್ಪಣ ಮನೋಭಾವದ ಸೇವೆಯನ್ನು ಮಾಡುತ್ತಿರುವ ಯುವ ವೈದ್ಯರ ತಂಡವೊಂದು ಇಲ್ಲಿನ ಸರಕಾರಿ ಕೋವಿಡ್‌ ಆಸ್ಪತ್ರೆಯಲ್ಲಿ  ಇದೆ.

Advertisement

ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್‌  :

ಚಿಕಿತ್ಸೆಗಾಗಿ ವೈದ್ಯರ ಕೊರತೆ ಕಂಡಾಗ ಸರಕಾರ ತಾತ್ಕಾಲಿಕ ನೆಲೆಯಲ್ಲಿ ಸೇವೆ ಸಲ್ಲಿಸಲು ಅರ್ಹ ವೈದ್ಯಕೀಯ ಪದವೀಧರರಿಂದ ಅರ್ಜಿ ಆಹ್ವಾನಿಸಿತ್ತು. ಕೊರೊನಾ ಪೀಡಿತರಿಗೆ ಚಿಕಿತ್ಸೆ ನೀಡಬೇಕು ಎನ್ನುವ ಕಾರಣಕ್ಕಾಗಿ ಅರ್ಜಿ ಸಲ್ಲಿಸಲು ದೊಡ್ಡ ಮಟ್ಟದ ಉತ್ಸಾಹಗಳಿರಲಿಲ್ಲ. ಈ ಸಂದರ್ಭದಲ್ಲಿಯೇ ಸೇವೆಗೆ ನಾವು ಸಿದ್ಧ ಎಂದು ಸೇವೆಗೆ ಟೊಂಕ ಕಟ್ಟಿ  ನಿಂತವರು  ಡಾ| ಆಶಿತ್‌, ಡಾ| ರಜತ್‌, ಡಾ| ರಚನಾ ಹಾಗೂ ಡಾ| ನಿವೇದಿತಾ ಎನ್ನುವ ನಾಲ್ವರು ಯುವ ವೈದ್ಯರು.

ಈ ವೈದ್ಯರು, ಪ್ರತಿಯೊಬ್ಬ ರೋಗಿಗಳ ಬಳಿಗೆ  ಹೋಗಿ ಅವರ ಕುಶಲೋಪರಿ  ವಿಚಾರಿಸುವ ಪರಿಯನ್ನು  ಮೆಚ್ಚಲೇಬೇಕು.  ಕುಂದಾಪ್ರ ಭಾಷೆಯಲ್ಲೇ ಸೋಂಕಿತರೊಂದಿಗೆ ಸಂವಹನ ನಡೆಸಿ ಅವರಲ್ಲಿ ಆತ್ಮವಿಶ್ವಾಸ ತುಂಬಿಸುತ್ತಿದ್ದಾರೆ.

ಸಹೋದರರಾದ ಡಾ| ಆಶಿತ್‌ ಹಾಗೂ ಡಾ| ರಜತ್‌ ಅವರ ತಂದೆ ಬಡಾಬೈಲ್‌ ರತ್ನಾಕರ ಶೆಟ್ಟಿ ಅವರು ಮುಂಬಯಿಯಲ್ಲಿ ಉದ್ಯಮಿ. ಕೆಲವು ತಿಂಗಳ ಹಿಂದಷ್ಟೇ ನಿಧನ ಹೊಂದಿದ್ದ,ರಚನಾ ಅವರ ತಂದೆ ಮರಾಠ ಸುರೇಶ್‌ ಶೆಟ್ಟಿ ಅವರ ತಂದೆಯೂ ಮುಂಬಯಿಯಲ್ಲಿ ಹೊಟೇಲ್‌ ಉದ್ಯಮಿಯಾಗಿದ್ದರು.  ನಿವೇದಿತಾ ಅವರು ಕುಂದಾಪುರದ ಹವಲ್ದಾರ್‌ ಕುಟುಂಬದವರು.

Advertisement

ಡಾ| ರಚನಾ ಅವರನ್ನು ಹೊರತುಪಡಿಸಿ ಉಳಿದ ಮೂವರು ಈ ಮೊದಲೇ ಕೊರೊನಾ ಸೋಂಕಿತರಿಗಾಗಿ ಸೇವೆ ಆರಂಭಿಸಿದ್ದರು. ಲಾಕ್‌ಡೌನ್‌ ಕಾರಣಕ್ಕಾಗಿ ಮುಂಬಯಿಯಿಂದ ಊರಿಗೆ ಬಂದಿದ್ದ ರಚನಾ ಅವರನ್ನು ಡಾ| ಆಶಿತ್‌ ಹಾಗೂ ಡಾ| ರಜತ್‌ ಅವರ ಸೇವಾ ಕಾರ್ಯ ಕುಂದಾಪುರದ ಕೋವಿಡ್‌ ಆಸ್ಪತ್ರೆ ಬಾಗಿಲೊಳಗೆ ಕರೆತಂದಿದೆ. ವೈದ್ಯಕೀಯ ಪದವಿ ಪಡೆದಿರುವುದು ಜನ ಸೇವೆಗಾಗಿ ಎನ್ನುವ ದೃಢಸಂಕಲ್ಪವನ್ನು ಹೊಂದಿರುವ ನಾಲ್ವರಲ್ಲಿಯೂ ತಾವು ಸಲ್ಲಿಸುತ್ತಿರುವ ಸೇವೆಯ ಬಗ್ಗೆ ಸಂಪೂರ್ಣ ತೃಪ್ತಿ ಇದೆ.

ಹಿರಿಯ ವೈದ್ಯರಾದ ಡಾ| ನಾಗೇಶ್‌,  ಡಾ| ವಿಜಯಶಂಕರ್‌, ಡಾ| ಚಂದ್ರ ಮರಕಾಲ  ಅವರು ವೈದ್ಯಕೀಯ ಮಾರ್ಗದರ್ಶನ  ನೀಡುತ್ತಿದ್ದಾರೆ.

ತಂದೆಯೇ ಪ್ರೇರಣೆ : ಸಮಾಜಮಖೀ ಕಾರ್ಯದಲ್ಲಿ ಮುಂಚೂಣಿಯಲ್ಲಿ ಇದ್ದ ತಂದೆಯ ಸೇವಾ ಕಾರ್ಯಗಳೇ ನನಗೆ ಪ್ರೇರಣೆ. ಕೊರೊನಾ ಎನ್ನುವ ಆತಂಕದ ನಡುವೆಯೂ, ಅಮ್ಮ ಹಾಗೂ ಮನೆಯವರ ಪ್ರೋತ್ಸಾಹ ಉತ್ಸಾಹವನ್ನು ಹೆಚ್ಚಿಸುತ್ತಿದೆ ಎಂದು ಡಾ| ರಚನಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next