ತೋಟಗಾರಿಕೆಗೆ ಸಂಬಂಧಿಸಿದ ಸ್ಟಾರ್ಟ್‌ಅಪ್‌ಗ್ಳನ್ನು ಸ್ಥಾಪಿಸಲು ಆಸಕ್ತಿ ಇರುವವರಿಗೆ ಸೂಕ್ತ ತರಬೇತಿ ನೀಡಿ, ಕಚೇರಿ ಮತ್ತು ಪ್ರಯೋಗಾಲಯಕ್ಕೆ ಜಾಗವನ್ನೂ ಕೊಟ್ಟು, ಹೊರತಂದ ಉತ್ಪಾದನೆಗಳಿಗೆ ಮಾರುಕಟ್ಟೆ ಜಾಲವನ್ನೂ
ಒದಗಿಸಲಾಗುತ್ತಿದೆ.
Advertisement
ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್‌ಆರ್) ಸ್ಟಾರ್ಟ್‌ಅಪ್ ಇನ್‌ಕ್ಯೂಬೇಷನ್ ಸೆಂಟರ್ ಅಡಿ ಈ ಹೊಸ ಪ್ರಯೋಗಕ್ಕೆ ವೇದಿಕೆ ಕಲ್ಪಿಸಿದೆ. ಈಗಾಗಲೇ ಹತ್ತಕ್ಕೂ ಹೆಚ್ಚು ಜನ ಇಲ್ಲಿ ತರಬೇತಿ ಪಡೆದು, ಬೇರೆ ಬೇರೆ ಕಡೆಗಳಲ್ಲಿ ಸ್ಟಾರ್ಟ್‌ಅಪ್ ಗಳನ್ನು ಆರಂಭಿಸಿದ್ದಾರೆ. 80ಕ್ಕೂ ಅಧಿಕ ಮಂದಿ ಆಫ್ ಸೈಟ್ ಇನ್‌ಕ್ಯು ಬೇಟರ್ (ತಾವಿದ್ದಲ್ಲಿಯೇ ತರಬೇತಿ ಪಡೆದವರು) ಗಳಾಗಿದ್ದಾರೆ. ವೈಜ್ಞಾನಿಕವಾಗಿ ತೋಟಗಾರಿಕೆ ಉದ್ಯಮ ಸ್ಥಾಪನೆಗೆ ಹಣಕಾಸು ಸೇರಿದಂತೆ ಎಲ್ಲ ರೀತಿಯ ಸಹಕಾರ ನೀಡುವ ಈ ವ್ಯವಸ್ಥೆ ಲಾಭದಾಯಕವಾಗಿ ಪರಿಣಮಿಸಿದ್ದು,ಇದರಿಂದ ಹೊಸ ವರ್ಗವನ್ನು ಕೃಷಿಯತ್ತ ಸೆಳೆಯುವಂತೆ ಮಾಡಿದೆ.
ಕಲ್ಲಿಕೋಟೆಯ ಲಿಬಿನ್ ವಿವರಿಸಿದರು. ಇಂಜಿನಿಯರ್ ಕ್ಷೇತ್ರದಲ್ಲೇ ಮುಂದುವರಿದಿದ್ದರೆ, ಹೆಚ್ಚೆಂದರೆ ತಿಂಗಳಿಗೆ 20ರಿಂದ 25 ಸಾವಿರ ರೂ. ಸಿಗುತ್ತಿತ್ತು. ಆದರೆ, ತಿಂಗಳಿಗೆ ಈಗ 75 ಸಾವಿರ ರೂ. ಗಳಿಸುತ್ತಿದ್ದೇನೆ. ಇನ್ನೆರಡು ತಿಂಗಳಲ್ಲಿ ಮೂರು ಟನ್ ಔಷಧ ಮಾರಾಟದ ಗುರಿ ಇದೆ. ಆಗ, ಮಾಸಿಕ ಆದಾಯ 2.75 ಲಕ್ಷ ಆಗಲಿದೆ ಎಂದು ಲಿಬಿನ್ ಹೇಳಿದರು.
Related Articles
ಮತ್ತು ದ್ರವ್ಯಗಳನ್ನು ಉತ್ಪಾದಿಸಿ, ಮಾರಾಟ ಮಾಡುತ್ತಿದ್ದಾರೆ. ತಿಂಗಳಿಗೆ 350 ಲೀ. ಮಾರಿ 30 ಸಾವಿರ ರೂ. ಗಳಿಸುತ್ತಿದ್ದೇನೆ. ದುಪ್ಪಟ್ಟು ಮಾಡುವ ಗುರಿ ಹೊಂದಿದ್ದೇನೆ ಎಂದು ಭರತ್ ತಿಳಿಸಿದ್ದಾರೆ.
Advertisement
120 ಉತ್ಪನ್ನಗಳು ಲಭ್ಯಕೃಷಿ ವಾಣಿಜ್ಯೀಕರಣ ಇನ್‌ಕ್ಯುಬೇಷನ್‌ನಲ್ಲಿ ಬೀಜ ಮತ್ತು ನಾಟಿ, ಗಿಡಗಳ ಆರೋಗ್ಯ ನಿರ್ವಹಣೆ ತಂತ್ರಜ್ಞಾನ, ಕೊಯ್ಲೋತ್ತರ ತಂತ್ರಜ್ಞಾನ, ಯಂತ್ರೋಪಕರಣ, ಜೈವಿಕ ತಂತ್ರಜ್ಞಾನ ಹೀಗೆ ಐದು ಪ್ರಕಾರದ ತಂತ್ರಜ್ಞಾನಗಳಲ್ಲಿ ಸಂಶೋಧನೆಗೆ ಅವಕಾಶ ಇದೆ. ಇದರಲ್ಲಿ ಒಟ್ಟಾರೆ 120 ಉತ್ಪನ್ನಗಳು ಲಭ್ಯ ಇವೆ. ಇದರಲ್ಲಿ ಯಾವುದಾದರೂ ಉತ್ಪನ್ನವನ್ನು ಆಯ್ಕೆ ಮಾಡಿಕೊಂಡು ಅಭಿವೃದಿಟಛಿಪಡಿಸಬಹುದು. ಈ ಉತ್ಪನ್ನಗಳ ಮಾರುಕಟ್ಟೆಗೆ ಐಐಎಚ್‌ಆರ್
ಲೋಗೋ ಬಳಸಿಕೊಳ್ಳಲೂ ಅವಕಾಶ ಇದೆ ಎಸ್ಸೆಸ್ಸೆಲ್ಸಿ ಪಾಸಾದವರೂ ಕಲಿಯಬಹುದು
ಈ ತರಬೇತಿ ಪಡೆಯಲು ಯಾವುದೇ ಡಿಗ್ರಿ ಅವಶ್ಯಕತೆಯಿಲ್ಲ. ಎಸ್ಸೆಸ್ಸೆಲ್ಸಿ ಪಾಸಾಗಿದ್ದರೂ ಸಾಕು. ಕನಿಷ್ಠ 4 ದಿನಗಳಿಂದ ತಿಂಗಳುಗಳ ಕಾಲ ವಿವಿಧ ರೀತಿಯ ತರಬೇತಿ ನೀಡಲಾಗುತ್ತದೆ. ಅದು ಆಯಾ ಉತ್ಪನ್ನಗಳನ್ನು ಅವಲಂಬಿಸಿರುತ್ತದೆ. ಐಐಎಚ್‌ಆರ್‌ನಲ್ಲಿರುವ ಇನ್‌ಕ್ಯುಬೇಷನ್ ಕೇಂದ್ರ ದೇಶದ ಅತಿದೊಡ್ಡ ಸೆಂಟರ್ ಆಗಿದೆ.
2013ರಲ್ಲಿ ಆರಂಭಗೊಂಡ ಈ ಕೇಂದ್ರಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ದೇಶದ ನಾನಾ ಭಾಗಗಳಿಂದ ತರಬೇತಿ ಪಡೆಯಲು ಇಲ್ಲಿಗೆ ಬರುತ್ತಿದ್ದಾರೆ. ಅಲ್ಲದೆ, ನಮ್ಮ ಉತ್ಪನ್ನಗಳ ಮಾರಾಟಕ್ಕೆ ಪರವಾನಗಿ ಕೂಡ ನೀಡಲಾಗುತ್ತದೆ. 500ಕ್ಕೂ ಅಧಿಕ ಪರವಾನಗಿಗಳನ್ನು ನೀಡಲಾಗಿದೆ ಎಂದು ಐಐಎಚ್‌ಆರ್ ಅಗ್ರಿ ಬ್ಯುಸಿನೆಸ್ ಇನ್‌ಕ್ಯುಬೇಷನ್ ಸೆಂಟರ್ ಮುಖ್ಯಸ್ಥೆ ಡಾ.ಸುಧಾ ಮೈಸೂರು ಮಾಹಿತಿ ನೀಡಿದರು. ಡಾ.ಸುಧಾ ಸಂಪರ್ಕ ಸಂಖ್ಯೆ: 9448073198 – ವಿಜಯಕುಮಾರ್ ಚಂದರಗಿ