ತಿರುವನಂತಪುರ: ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಸಂಸ್ಥಾಪಕ ಸಯ್ಯದ್ ಅಹ್ಮದ್ ಖಾನ್ ಅವರು ತಮ್ಮನ್ನು ಹಿಂದೂ ಎಂದು ಕರೆಯುವಂತೆ ಹೇಳುತ್ತಿದ್ದರು ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ನೆನಪಿಸಿದರು.
ಕೇರಳದ ತಿರುವನಂತಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ವಸಾಹತುಶಾಹಿ ಸಂದರ್ಭದಲ್ಲಿ ಆರ್ಯ ಸಮಾಜದ ಸಭೆಯಲ್ಲಿ ಮಾತನಾಡಿದ್ದ ಸುಧಾರಕ, ಶಿಕ್ಷಣ ತಜ್ಞ ಸಯ್ಯದ್ ಖಾನ್ ಅವರು ಈ ಮಾತುಗಳನ್ನು ಆಡಿದ್ದರು,’ ಎಂದರು.
“ಭಾರತದಲ್ಲೇ ಯಾರೇ ಹುಟ್ಟಿದ್ದರೂ, ಇಲ್ಲಿ ಬೆಳೆದ ಆಹಾರ ಸೇವಿಸುತ್ತಿದ್ದವರು, ಇಲ್ಲಿ ಹರಿಯುವ ನದಿಗಳ ನೀರು ಕುಡಿಯುತ್ತಿರುವವರು ಹಿಂದೂಗಳೇ ಆಗಿದ್ದಾರೆ. ಹಿಂದೂ ಧಾರ್ಮಿಕ ಪದವಲ್ಲ. ಇದು ಭೌಗೋಳಿಕ ಪದವಾಗಿದೆ’ ಎಂದು ಸಯ್ಯದ್ ಖಾನ್ ಅವರ ಹೇಳಿಕೆಯನ್ನು ರಾಜ್ಯಪಾಲರು ಉಲ್ಲೇಖೀಸಿದರು.