Advertisement
ಈಗಾಗಲೇ ದೇಶ ಆರ್ಥಿಕ ಸಂಕಷ್ಟದಿಂದ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಮುಖ್ಯವಾಗಿ ಕೈಗಾರಿಕ ವಲಯಗಳು ತೀವ್ರ ಹಾನಿಗೊಳಗಾಗಿದೆ. ಇನ್ನು ಒಂದು ವೇಳೆ ಪ್ಲಾಸ್ಟಿಕ್ ಬ್ಯಾನ್ ಮಾಡಿ ಮತ್ತಷ್ಟು ಸಮಸ್ಯೆಯನ್ನು ಸರಕಾರ ಮೈಮೇಲೆ ಎಳೆದುಕೊಳ್ಳಲು ಇಷ್ಟವಿಲ್ಲದೇ ಇರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಈಗಾಗಲೇ ಪ್ಲಾಸ್ಟಿಕ್ ನಿಷೇಧ ಕುರಿತಾದ ಸ್ಪಷ್ಟವಾದ ಕಾನೂನು ರೂಪುಗೊಳ್ಳದೇ ಇರುವುದರಿಂದ ಸರಕಾರ ಈ ಕ್ರಮ ಕೈಗೊಂಡಿದೆ.
ಪ್ಲಾಸ್ಟಿಕ್ ಸಹಾಯದಿಂದ ಈಗಾಗಲೇ ಹಲವಾರು ವಸ್ತುಗಳನ್ನು ಉತ್ಪಾದಿಸಲಾಗುತ್ತಿದ್ದು, ಅಧ್ಯಯನವೊಂದರ ಪ್ರಕಾರ ಸುಮಾರು 50 ಸಾವಿರ ಕಾರ್ಖಾನೆಗಳು ಪ್ಲಾಸ್ಟಿಕ್ ಉತ್ಪಾದಿಸುತ್ತವೆ. ಇದರಲ್ಲಿ ಸುಮಾರು 40 ರಿಂದ 50 ಲಕ್ಷ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಈಗ ಒಂದು ವೇಳೆ ಸರಕಾರ ಪ್ಲಾಸ್ಟಿಕ್ ಬ್ಯಾನ್ ಮಾಡಿದರೆ ಅದು ಭಾರೀ ದೊಡ್ಡ ಪ್ರಮಾಣದಲ್ಲಿ ಉದ್ಯೋಗವನ್ನು ಕಡಿತಗೊಳಿಸಲಿದೆ. ಮಾತ್ರವಲ್ಲದೆ ಕೈಗಾರಿಗೆಗಳು ನೆಲ ಕಚ್ಚಲಿವೆ. ಇನ್ನು ಸಿಂಗಲ್ ಯೂಸ್ ಪ್ಲಾಸ್ಟಿಕ್ ತಯಾರಿಸುವ 10 ಸಾವಿರ ಕಾರ್ಖಾನೆಗಳು ಇದ್ದು, ಅವುಗಳಲ್ಲಿ 5 ಲಕ್ಷಜನರು ಕೆಲಸ ಮಾಡುತ್ತಿದ್ದಾರೆ. ಈ ಕಾರಣದಿಂದ ಸದ್ಯದ ಮಟ್ಟಿಗೆ ಪ್ರಮಾಣ ಕಡಿತಗೊಳಿಸಲಷ್ಟೇ ಸರಕಾರ ತೀರ್ಮಾನಿಸಿದೆ.
ಈಗಾಗಲೇ ಪ್ಲಾಸ್ಟಿಕ್ ಉತ್ಪಾದನೆಯಲ್ಲಿ ನಿರವಾಗಿರುವ ಸಂಸ್ಥೆಗಳನ್ನು ಗುರುತಿಸಿ, ಪ್ಲಾಸ್ಟಿಕ್ ಬದಲು ಪರ್ಯಾಯ ವಸ್ತುವನ್ನು ಉತ್ಪಾದಿಸುವತ್ತ ಅವುಗಳನ್ನು ಪರಿವರ್ತಿಸಬೇಕಿದೆ. ಇವುಗಳಿಗೆ ಪರ್ಯಾಯವಾಗಿ ಕೈಗೊಳ್ಳಬಹುದಾದ ಕ್ರಮದ ಕುರಿತು ಸರಕಾರ ಚಿಂತಿಸುತ್ತಿದೆ.
Related Articles
ಪ್ಲಾಸ್ಟಿಕ್ ನಿಜೂಕ್ಕೂ ಬ್ಯಾನ್ ಆಗುವುದೇ ಆದರೆ ಆದರೆ ಬ್ಯಾನ್ ಆಗಲಿದೆ ಎಂಬುದು ಅಂತಿಮವಾಗಿರಲಿಲ್ಲ. ಸಿಂಗಲ್ ಪ್ಲಾಸ್ಟಿಕ್ ಗಳ ಸಾಲಿಗೆ ಯಾವೆಲ್ಲಾ ವಸ್ತುಗಳು ಸೇರುತ್ತವೆ? ಅವುಗಳಿಗೆ ಪರ್ಯಾಯವಾಗಿ ಯಾವುದನ್ನು ಬಳಸಬೇಕು ಎಂಬುದು ಇನ್ನೂ ಅಂತಿಮವಾಗಿಲ್ಲ. ಒಂದು ವೇಳೆ ಸಿಂಗಲ್ ಯೂಸ್ ಪ್ಲಾಸ್ಟಿಕ್ ಆದರೆ, ಈಗಾಗಲೇ ನಮ್ಮ ನಡುವೆ ಇರುವ ಪ್ಲಾಸ್ಟಿಕ್ ಅನ್ನು ಏನು ಮಾಡಬೇಕು? ಪೆನ್ನು, ಬ್ಯಾಗು ಸೇರಿದಂತೆ ವೈದ್ಯಕೀಯ ಕ್ಷೇತ್ರದಲ್ಲಿ ಬಳಸಲಾಗುತ್ತಿರುವ ಪ್ಲಾಸ್ಟಿಕ್ ಅನ್ನು ಏನು ಮಾಡುವುದು ಮೊದಲಾದ ಗೊಂದಲಗಳು ಅಂತಿಮ ಕ್ಷಣದವರೆಗೆ ಗೊಂದಲವಾಗಿಯೇ ಉಳಿದಿತ್ತು.
Advertisement