Advertisement

ನೀವು ಅದ್ಭುತವನ್ನು ಸೃಷ್ಟಿಸಿದ್ದೀರಿ, ನಾಸಾ ತಂಡವನ್ನು ಶ್ಲಾಘಿಸಿದ ಬೈಡನ್ ..!

06:25 PM Mar 07, 2021 | Team Udayavani |

ವಾಷಿಂಗ್ಟನ್ :  ಮಂಗಳನ ಅಂಗಳದಲ್ಲಿ ನಾಸಾಸ ಮಹತ್ವಾಕಾಂಕ್ಷೆಯ ಪರ್ಸಿವರೆನ್ಸ್ ರೋವರ್ ಮಿಷನ್ ನನ್ನು ಯಶಸ್ವಿಯಾಗಿ ಇಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಭಾರತ ಮೂಲದ ಅಮೇರಿಕಾದ ನಾಸಾದ ಇಂಜಿನಿಯರ್ ಡಾ. ಸ್ವಾತಿ ಮೋಹನ್, ಬಾಲ್ಯದಲ್ಲಿ ಸ್ಟಾರ್ ಟ್ರೆಕ್ ನ ಮೊದಲ ಕಂತನ್ನು ನೋಡಿದಾಗ ಬಾಹ್ಯಾಕಾಶ ಹಾದಿ ನನಗೆ ತೆರೆದುಕೊಂಡಿತು ಎಂದು ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ಅವರಿಗೆ ವರ್ಚುವಲ್ ಸಂವಾದದಲ್ಲಿ ಹಂಚಿಕೊಂಡಿದ್ದಾರೆ.

Advertisement

ಪರ್ಸಿವರೆನ್ಸ್  ರೋವರ್ ಮಿಷನ್ ನ ಮಾರ್ಗದರ್ಶಕಿ ಹಾಗೂ ನಿಯಂತ್ರಣ ಕಾರ್ಯಚರಣೆಯ ನೇತೃತ್ವವನ್ನು ಡಾ. ಮೋಹನ್ ವಹಿಸಿದ್ದರು. ಮಂಗಳ ಗೃಹಕ್ಕೆ ರೋವರ್ ಮಿಷನ್ ತಲುಪಿದ್ದನ್ನು ಮೊದಲು ಖಚಿತ ಪಡಿಸಿದ್ದು, ಇದೇ ಭಾರತೀಯ ಮೂಲದ ಅಮೆರಿಕಾದ ಡಾ. ಸ್ವಾತಿ ಮೋಹನ್.

ಜನಪ್ರಿಯ ಟಿವಿ ಕಾರ್ಯಕ್ರಮ ಸ್ಟಾರ್ ಟ್ರೆಕ್ ನ್ನು ಬಾಲ್ಯದಲ್ಲಿ ನೋಡಿದಾಗ ನನ್ನ ಬಾಹ್ಯಕಾಶ ಕನಸು ಹೆಚ್ಚಾಯಿತು ಎಂದು ಸ್ವಾತಿ ಬೈಡನ್  ಜೊತೆಗೆ ಹಂಚಿಕೊಂಡಿದ್ದಾರೆ.

ಓದಿ :  ತೆರಿಗೆ ಹೆಸರಿನಲ್ಲಿ ಕೇಂದ್ರ ಸರ್ಕಾರ ದರೋಡೆ ಮಾಡುತ್ತಿದೆ : ರಾಹುಲ್ ಗಾಂಧಿ

ಬಾಹ್ಯಾಕಾಶದ ಆ ಅದ್ಭುತ ದೃಶ್ಯಗಳ ಜೊತೆಗೆ, ನನ್ನ ಗಮನವನ್ನು ನಿಜವಾಗಿಯೂ ಸೆಳೆದದ್ದು ನನ್ನ ತಂಡ ಒಟ್ಟಾಗಿ ಕೆಲಸ ಮಾಡುತ್ತಿದ್ದಿದ್ದು, ಬಾಹ್ಯಾಕಾಶವನ್ನು ಅನ್ವೇಷಿಸುವ ಮತ್ತು ಹೊಸ ವಿಷಯಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಹೊಸ ಜೀವನವನ್ನು ಹುಡುಕುವ ಏಕೈಕ ಉದ್ದೇಶದಿಂದ ಈ ಟೆಕ್ನಾಲಜಿ ಅದ್ಭುತವನ್ನು ನಿರ್ವಹಿಸುತ್ತಿದೆ”ಎಂದು ಸ್ವಾತಿ ಮೋಹನ್ ಗುರುವಾರ ವರ್ಚುವಲ್ ಸಂವಾದದ ಸಮಯದಲ್ಲಿ ಜೊ ಬೈಡನ್ ಅವರಿಗೆ ಹೇಳಿದರು.

Advertisement

ಇನ್ನು, ಅಧ್ಯಕ್ಷ ಜೊ ಬೈಡನ್, ಪರ್ಸಿವರೆನ್ಸ್  ರೋವರ್ ಮಿಷನ್ ನನ್ನು ಮಂಗಳಕ್ಕೆ ಇಳಿಸುವಲ್ಲಿ ಯಶಸ್ವಿಯಾದ ನಾಸಾದ ತಂಡವನ್ನು ಪ್ರಶಂಸಿದರು. ಡಾ ಮೈಕೆಲ್ ವಾಟ್ಕಿನ್ಸ್ ನೇತೃತ್ವದ ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ (ಜೆಪಿಎಲ್) ತಂಡದ ಪರಿಶ್ರಮಕ್ಕೆ ಹರ್ಷ ವ್ಯಕ್ತಪಡಿಸಿದರು.

ಅಧ್ಯಕ್ಷ ಜೋ ಬೈಡನ್ ಮಾತಾತ್ತಿರುವ ನಡುವೆಯೆ ಸ್ವಾತಿ ಮಾತಿಗಳಿದು,  ಜೆಪಿಎಲ್ ನಲ್ಲಿ ಪರ್ಸಿವಿರೆನ್ಸ್ ನನ್ನ ಮೊದಲ ಮಿಷನ್, ಅಲ್ಲಿ ನಾನು ಫಾರ್ಮುಲೇಶನ್ ಪ್ರಾರಂಭದಿಂದಲೂ, ಕಾರ್ಯಾಚರಣೆಗಳ ಮೂಲಕವೂ ಕೆಲಸ ಮಾಡಬೇಕಾಗಿತ್ತು, ಈ ಸಂದರ್ಭದಲ್ಲಿ  ಸಿಬ್ಬಂದಿಗಳೊಂದಿಗೆ ಪೂರ್ಣವಾಗಿ ಪಾಲ್ಪಡೆದಿದ್ದೆ. ಈ ಅದ್ಭುತ  ಪ್ರತಿಭಾವಂತ ತಂಡವು ನನ್ನ ಪಾಲಿಗೆ ಈಗ ಕುಟುಂಬದಂತೆ ಬದಲಾಗಿದೆ, ನಮ್ಮದೇ ಆದ ತಾಂತ್ರಿಕ ಅದ್ಭುತವನ್ನು ಸೃಷ್ಟಿಸಲು ವರ್ಷಗಳನ್ನು ಕಳೆಯುವುದು ಒಂದು ಪ್ರಿವಿಲೆಜ್ ಎಂದರು.

ಲ್ಯಾಂಡಿಂಗ್ ಗೆ ಒಂದು ವಾರಗಳು ಇರುವಾಗ ನಾವೆಲ್ಲರೂ ಯಶಸ್ಸನ್ನು ಎದುರುಗಾಣುತ್ತಿದ್ದೆವು. ನಾವು ಶಾಂತಚಿತ್ತರಾಗಿದ್ದೆವು. ಆದರೇ, ಲ್ಯಾಂಡಿಂಗ್ ಗೆ ಇನ್ನು ಕೇವಲ ಏಳು ನಿಮಿಷ ಇರುವಾಗ ನಾವು ನಿಜಕ್ಕೂ ಭಯಭೀತರಾಗಿದ್ದೆವು. ಎಂದು ಸ್ವಾತಿ ತಮ್ಮ ಅನುಭವವನ್ನು ಹಂಚಿಕೊಂಡರು.

ಓದಿ :  ಹಾಸನದ ಮಗುವನ್ನು 5 ಲಕ್ಷ ರೂ. ಗೆ ಕಾರ್ಕಳದಲ್ಲಿ ಮಾರಾಟ: ಇಬ್ಬರು ಮಹಿಳೆಯರು ಸೇರಿ ಮೂವರ ಬಂಧನ

ಇದು, ನಮ್ಮ ಹಿಂದಿನ ಪ್ರಯತ್ನಗಳಲ್ಲಿ ಎಲ್ಲೆಲ್ಲಿ ವಿಫಲವಾಗಿದ್ದೆವು ಎಂಬುವುದನ್ನೆಲ್ಲಾ ತಿಳಿಯಲು ಸಾದ್ಯವಾಯಿತು. ಈಗ ನಾವು ಅಲ್ಲಿಗೆ ತಲುಪಿದ್ದೇವೆ. ಅದು ನೀಡುವ ವರದಿಗಳನ್ನು ನಾವು ಎದುರುಗಾಣುತ್ತಿದ್ದೇವೆ ಎಂದರು.

ನಾಸಾ ತಂಡದೊಂದಿಗೆ ಮಾತನಾಡಿದ ಅಮೆರಿಕದ ಅಧ್ಯಕ್ಷರಿಗೆ ಅವರು ಧನ್ಯವಾದ ಅರ್ಪಿಸಿದರು. “ನಮ್ಮೊಂದಿಗೆ ಮಾತನಾಡಲು ಸಮಯ ತೆಗೆದುಕೊಂಡಿದ್ದಕ್ಕಾಗಿ ಧನ್ಯವಾದಗಳು” ಎಂದು ಸ್ವಾತಿ ಹೇಳಿದರು.

ನೀವು ನನಗೆ ತಮಾಷೆಮಾಡುತ್ತಿದ್ದೀರಾ? ಇದು ಎಂತಹ ಗೌರವ, ಎಂತಹ ಅದ್ಭುತವಾಗಿದೆ. ಭಾರತೀಯ ಅಮೆರಿಕನ್ನರು ದೇಶವನ್ನು ಸ್ವಾಧೀನಪಡಿಸಿಕೊಳ್ಳುತ್ತಿದ್ದಾರೆ, ನೀವು (ಸ್ವಾತಿ ಮೋಹನ್), ಉಪಾಧ್ಯಕ್ಷೆ (ಕಮಲಾ ಹ್ಯಾರಿಸ್), ನನ್ನ ಭಾಷಣ ಬರಹಗಾರ ವಿನಯ್ (ರೆಡ್ಡಿ). ಧನ್ಯವಾದಗಳು ನಿಮಗೆ.

ನೀವು ಅದ್ಭುತವನ್ನು ಸೃಷ್ಟಿಸಿದ್ದೀರಿ ನೀವು ಅಮೆರಿಕಾದ ಸಹಸ್ರಾರು ಮಕ್ಕಳಿಗೆ, ಅಮೆರಿಕಾದ ಯುವಕರಿಗೆ ಕನಸನ್ನು ಸೃಷ್ಟಿ ಮಾಡಿಕೊಟ್ಟಿದ್ದೀರಿ. ನೀವೆಲ್ಲರೂ ಅದ್ಭುತವನ್ನು ಸೃಷ್ಟಿ ಮಾಡಿದ್ದಿರಿ. ಇಡಿ ಜೆಪಿಎಲ್ ತಂಡ ಅದ್ಭುತವನ್ನು ಸೃಷ್ಟಿ ಮಾಡಿದೆ. ನೀವು ಅಮೆರಿಕಾದೆ ವಿಶ್ವಾಸವನ್ನು ಮರುಸ್ಥಾಪಿಸಿದ್ದೀರಿ ಎಂದು ಅಧ್ಯಕ್ಷ ಬೈಡನ್ ಅಭಿಪ್ರಾಯ ಪಟ್ಟರು.

ಓದಿ : ಕೃಷಿ ಇಲಾಖೆ ರಾಯಭಾರಿಯಾಗಿ ನಟ ದರ್ಶನ್ ಅಧಿಕಾರ ಸ್ವೀಕಾರ

ಇನ್ನು, ಡಾ. ಮೋಹನ್ ಈ ಸಂತಸದ ಕ್ಷಣವನ್ನು ಟ್ವೀಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next