ತುಂಬಾ ದಿನಗಳಿಂದ ನಿಮ್ಮತ್ರ ಏನೋ ಒಂದ್ ಹೇಳ್ಕೊಳ್ಬೇಕು ಅಂತ ಬಹಳ ಒದ್ದಾಡ್ತಾ ಇದ್ದೇನೆ. ಆದ್ರೆ, ಹೇಳ್ಳೋಕೆ ಆಗಿರ್ಲಿಲ್ಲ. ಇವತ್ತು ಏನೇ ಆಗ್ಲೀ ಹೇಳ್ಳೇಬೇಕು ಅಂತ ಧೈರ್ಯ ಮಾಡಿದ್ದೀನಿ. ಇದು ಬರೀ ನಿವೇದನೆ ಅಲ್ಲ. ನನ್ ಮನಸಿನೊಳಗೆ ಅವಿತು ಕುಳಿತಿರೋ ಭಾವಗಳ ಮಾತು..ಕೇಳಿ..! ಅದೇನಂದ್ರೆ…
Advertisement
ಯಾವತ್ತು ನಿಮ್ಮನ್ನು ನೋಡಿದೆನೋ ಅವತ್ತೇ ನಿಮ್ಮ ಸೌಂದರ್ಯಕ್ಕೆ ಸೋತು ಶರಣಾಗೋದೆ. ಅವತ್ತೇ ಅಂದ್ಕೊಂಡೆ, ಈ ನನ್ನ ಹೃದಯ ಸಾಮ್ರಾಜ್ಯದ ಅಂತಃಪುರಕ್ಕೆ ನೀವೇ ಪಟ್ಟದರಸಿ ಆಗಬೇಕು ಅಂತ. ನಿಮ್ಮ ಆಸೆ ಕನಸುಗಳು ಏನೇ ಇದ್ರೂ, ಅದೆಷ್ಟೇ ಇದ್ರೂ, ನೀವು ಕೇಳ್ಳೋ ಮುಂಚೇನೇ ಎಲ್ಲವನ್ನೂ ಈಡೇರಿಸ್ಬೇಕು ಅಂತ ಪಣ ತೊಟ್ಟಿರೋದು ಅಷ್ಟೇ ನಿಜ!
ಯಾಕಂದ್ರೆ ನಿಮ್ಗೆ ಕಾಳಜಿ, ರಕ್ಷಣೆ ನೀಡೋ ಅಪ್ಪಾನೂ ನಾನೇ, ಪ್ರತಿಕ್ಷಣ ಮಮತೆಯಿಂದ ಪ್ರೀತ್ಸೋ ಅಮ್ಮಾನು ನಾನೇ ಆಗಿ ಕೊನೆವಗೂ ನನ್ ಉಸಿರೊಳಗೆ ನಿಮ್ಮ ಜೀವವಿಟ್ಟು ಮುದ್ದು ಮಗುವಂತೆ ಕಾಪಾಡ್ತೀನಿ.
ಟ್ರಸ್ಟ್ ಮಿ!
ಪ್ರೀತಿಯಿಂದ ಮಂಡಿಯೂರಿ ಹೇಳ್ತಿದೀನಿ, “ಐ ಲವ್ ಯೂ ರೀ’ ಪುರುಷೋತ್ತಮ್ ವೆಂಕಿ