Advertisement

ರಫೇಲ್‌ನಲ್ಲಿ ನಿಮಗೆಷ್ಟು ಕಮಿಷನ್‌ ಬಂದಿದೆ

06:30 AM Oct 14, 2018 | Team Udayavani |

ಬೆಂಗಳೂರು: ಹಿಂದಿನ ಕಾಂಗ್ರೆಸ್‌ ಸರ್ಕಾರವನ್ನು 10% ಸರ್ಕಾರ ಎಂದು ಆರೋಪ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರೇ,ರಫೇಲ್‌ ಡೀಲ್‌ನಲ್ಲಿ ನಿಮಗೆಷ್ಟು ಕಮಿಷನ್‌ ಸಿಕ್ಕಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

Advertisement

ಈ ಕುರಿತು ಸರಣಿ ಟ್ವೀಟ್‌ ಮಾಡುವ ಮೂಲಕ ಪ್ರಧಾನಿ ಮೋದಿಯನ್ನು ಪ್ರಶ್ನಿಸಿರುವ ಅವರು  ರಫೇಲ್‌ ಡೀಲ್‌ನಿಂದ ನಿಮಗೆಷ್ಟು ಪ್ರತಿಶತ ಕಮಿಷನ್‌ ಸಿಕ್ಕಿದೆ ಎಂದು ನೀವು ದೇಶದ ಜನತೆಗೆ ಉತ್ತರಿಸುವ ಸಮಯ ಬಂದಿದೆ.

ನಿಮ್ಮಂತಹ ಮಹಾನ್‌ ಭಾಷಣಕಾರರು ಹೀಗೆ ಮೌನವಾದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ದೇಶದ ಪ್ರಧಾನಿಯೊಬ್ಬರು
ಬಂಡವಾಳಶಾಹಿಗಳ ಪರ ವ್ಯವಹಾರ ಕುದುರಿಸಲು ವಿದೇಶ ಯಾತ್ರೆಗಳನ್ನು ಮಾಡಿರುವುದು ದೇಶದಇತಿಹಾಸದಲ್ಲಿ ಇದೇ ಮೊದಲು.

ಪ್ರಧಾನಿಯೇ ಖಾಸಗಿ ಸಂಸ್ಥೆಗಳ ಪರವಾಗಿ ಮಧ್ಯವರ್ತಿಯಾದಾಗ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಗತಿ ಏನು ಎಂದು ಪ್ರಶ್ನೆ ಮಾಡಿದ್ದಾರೆ.ಅಲ್ಲದೆ, ಮಾನ್ಯ ನರೇಂದ್ರ ಮೋದಿಯವರೆ, ಪ್ರಧಾನ ಸೇವಕರಾಗಿ ಜನ ಸೇವೆಯನ್ನು ಮಾಡಲಿಲ್ಲ. ಕಣ್ಣ ಮುಂದೆಯೇ ಸಾಲಗಾರರು ಓಡಿ ಹೋದರೂ ಮಾತನಾಡಲಿಲ್ಲ. ರಫೇಲ್‌ ಡೀಲ್‌ ಬಗ್ಗೆಯಾದರೂ ಮಾತನಾಡಿ.ರಫೇಲ್‌ ಡೀಲ್‌ನಲ್ಲಿ ತಾವು ಅಂಬಾನಿಯವರಿಗೆ ತೋರುತ್ತಿರುವ ನಿಷ್ಠೆಯನ್ನು ದೇಶದ ಬಗ್ಗೆ ತೋರಿದ್ದರೆ ಡಾಲರ್‌ ಮೌಲ್ಯ ಇಂದು 74ರೂ. ಗಡಿ ದಾಟುತ್ತಿರಲಿಲ್ಲ ಎಂದು ಟ್ವೀಟ್‌ ಮೂಲಕ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next