Advertisement

ಜಾತಕದಲ್ಲಿʼಬಂಧನ ದೋಷʼವಿದ್ದರೆ ಇಲ್ಲಿ 500 ರೂ.ಬಾಡಿಗೆ ಕೊಟ್ಟು ಒಂದು ದಿನ ಜೈಲಿನಲ್ಲಿರಬಹುದು!

12:08 PM Oct 01, 2022 | Team Udayavani |

ಉತ್ತರಾಖಂಡ್:‌ ಸಾಮಾನ್ಯವಾಗಿ ನಮ್ಮ ಜಾತಕದಲ್ಲಿ ಯಾವ ದೋಷವಿದೆಯೋ ಅದಕ್ಕೆ ಜ್ಯೋತಿಷಿಗಳು ಪರಿಹಾರ ಸೂಚಿಸುತ್ತಾರೆ. ನಮ್ಮ ಉದ್ಯೋಗ, ಮದುವೆ, ಸಂಬಂಧದಲ್ಲಿ ಯಾವ ದೋಷವಿದೆಯೋ ಅದಕ್ಕೆ ಪರಿಹಾರವನ್ನು ಜ್ಯೋತಿಷಿಗಳು ಸೂಚಿಸುತ್ತಾರೆ.

Advertisement

ಕಲಿತ ಮೇಲೆ ಉದ್ಯೋಗ ಸಿಗದಿದ್ರೆ, ಮದುವೆಗೆ ಸಂಬಂಧ ಹುಡುಕುವ ವೇಳೆ ಅಥವಾ ಮದುವೆಯಾದ ಬಳಿಕ ನಮಗೆ ಏನಾದರೂ ತೊಂದರೆ ಉಂಟಾದರೆ ಕೆಲವರು ಜ್ಯೋತಿಷಿಗಳ ಬಳಿ ತೆರೆಳಿ  ಹೀಗೆಕೆ ಆಗುತ್ತಿದೆ ಎಂದು ಹೇಳುತ್ತಾರೆ. ಅದಕ್ಕೆ ಸಂಬಂಧಿಸಿ ಪರಿಹಾರ, ಸಲಹೆಗಳನ್ನು ಜ್ಯೋತಿಷಿಗಳು ನೀಡುತ್ತಾರೆ. ಒಂದು ವೇಳೆ ನಮ್ಮ ಜಾತಕದಲ್ಲಿ ಮುಂದೆ ಬಂಧನದ ದೋಷವಿದ್ದರೆ ಅದಕ್ಕೆ ಪರಿಹಾರವಾಗಿ ಉತ್ತರಾಖಂಡದಲ್ಲಿ ಬಾಡಿಗೆ ರೂಪದಲ್ಲಿ ವಿಶೇಷವಾದ ಜೈಲ್ಲೊಂದಿದೆ.

ಹೌದು ಕೇಳಲು ವಿಚಿತ್ರವಾದರೂ ಇದು ಸತ್ಯ. ಒಂದು ವೇಳೆ ನಿಮ್ಮ ಜಾತಕದಲ್ಲಿ ನೀವು ಜೈಲು ಸೇರುತ್ತೀರಿ ಅಥವಾ ಬಂಧನವಾಗುವ ಸಾಧ್ಯತೆಯಿದ್ದರೆ ನಿಮ್ಮ ಜೈಲಿನ ದೋಷಕ್ಕೆ ಪರಿಹಾರವಾಗಿ ಒಂದು ದಿನಕ್ಕೆ ಬಾಡಿಗೆ ರೂಪದಲ್ಲಿ 500 ರೂ. ಕೊಟ್ಟು ಜೈಲುಶಿಕ್ಷೆ ಅನುಭವಿಸಬಹುದು.! ಉತ್ತರಾಖಂಡದ ಹಲ್ದ್ವಾನಿ ಜೈಲು ಈ ದೋಷವನ್ನು ಪರಿಹರಿಸಿಕೊಳ್ಳಲು ಅವಕಾಶ ನೀಡಿದೆ. ಈ ರೀತಿ ಬಾಡಿಗೆ ಕೊಟ್ಟು ಜೈಲಿನಲ್ಲಿರಲು ಅವಕಾಶ ನೀಡಿದ ದೇಶದ ಮೊದಲ ಜೈಲು ಇದಾಗಿದೆ.

ಒಂದು ವೇಳೆ ಜಾತಕದಲ್ಲಿ ʼಬಂಧನ ದೋಷʼವಿದ್ದರೆ ಅವರು ಜೈಲಿನಲ್ಲಿ ದಿನಕ್ಕೆ 500 ರೂ. ಕೊಟ್ಟು ಇರಬಹುದು ಅಂಥವರಿಗೆ ಜೈಲಿನ ಹಳೆಯ ವಿಭಾಗದಲ್ಲಿ ಪ್ರತ್ಯೇಕ ಕೊಠಡಿ ನೀಡಲಾಗುತ್ತದೆ. ಈ ವ್ಯವಸ್ಥೆಗೆ ಪ್ರಧಾನ ಕಚೇರಿಯಿಂದ ಅನುಮತಿ ಪಡೆಯಬೇಕೆಂದು ಜೈಲಿನ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next