Advertisement

Free Flight Ticket ವಿಐನಿಂದ ಗ್ರಾಹಕರಿಗೆ ಹಬ್ಬದ ವಿಶೇಷ ಸಂಭ್ರಮಾಚರಣೆ ಕೊಡುಗೆ

09:05 PM Sep 26, 2023 | Team Udayavani |

ಬೆಂಗಳೂರು: ಹಬ್ಬದ ಋತುವಿನ ಅಂಗವಾಗಿ ಪ್ರಮುಖ ದೂರಸಂಪರ್ಕ ಸೇವಾಸಂಸ್ಥೆ ವಿಐ (Vi), ಇಂದು ಈಸಿಮೈಟ್ರಿಪ್ (Ease MyTrip) ಸಹಯೋಗದಲ್ಲಿ ತನ್ನ ಪ್ರಿಪೇಯ್ಡ್ ಗ್ರಾಹಕರಿಗೆ ವಿಶೇಷ ಸಂಭ್ರಮಾಚರಣೆ ಕೊಡುಗೆ ‘ರೀಚಾರ್ಜ್ ಆ್ಯಂಡ್ ಫ್ಲೈ’ (Recharge & Fly) ಪ್ರಕಟಿಸಿದೆ.

Advertisement

ಈ ಕೊಡುಗೆಯ ಭಾಗವಾಗಿ, ವಿಐ ಬಳಕೆದಾರರು ವಿಐ ಆ್ಯಪ್ (Vi App)ಮೂಲಕ ಸೆಪ್ಟೆಂಬರ್ 26 ರಿಂದ 30 ರವರೆಗೆ ರೀಚಾರ್ಜ್ ಮಾಡಿದರೆ, ಪ್ರತಿ ಗಂಟೆಗೊಮ್ಮೆ ಉಚಿತ ವಿಮಾನ ಟಿಕೆಟ್ ಗೆಲ್ಲುವ ಅವಕಾಶವನ್ನು ಪಡೆಯಲಿದ್ದಾರೆ. ಇದರ ಮೌಲ್ಯ ₹ 5,000 ಇರಲಿದೆ. ಇದಕ್ಕೆ ಪರ್ಯಾಯವಾಗಿ, ಬಳಕೆದಾರರು ಹೆಚ್ಚಿನ ಬೆಲೆಯ ಟಿಕೆಟ್ ಅನ್ನು ಬುಕ್ ಮಾಡಬಹುದು ಮತ್ತು ₹ 5,000 ಗಳ ರಿಯಾಯ್ತಿಯನ್ನೂ ಪಡೆಯಬಹುದು.

ಇದೇ ಸಂದರ್ಭದಲ್ಲಿ ಈ 5 ದಿನಗಳ ಕೊಡುಗೆಯ ಅವಧಿಯಲ್ಲಿ, ತನ್ನ ಗ್ರಾಹಕರಿಗೆ ಅಂತರ್ಜಾಲದಲ್ಲಿ ಹೆಚ್ಚಿನ ಮಾಹಿತಿ ಜಾಲಾಡುವುದಕ್ಕೂ ‘ವಿಐ’ ಅನುವು ಮಾಡಿಕೊಡಲಿದೆ. ವಿಐ ಆ್ಯಪ್ ಮೂಲಕ ಆಯ್ದ ರೀಚಾರ್ಜ್ ಗಳ ಮೇಲೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 50 ಜಿಬಿ ಡೇಟಾವನ್ನು ಸಹ ವಿಐ ನೀಡಲಿದೆ.

ಈ ಮೇಲಿನ ಕೊಡುಗೆಗಳ ಜೊತೆಗೆ, ವಿಐ ಬಳಕೆದಾರರು, ಈಸಿಮೈಟ್ರಿಪ್ ಮೂಲಕ ವಿಮಾನ ಟಿಕೆಟ್ ಗಳ ಮೇಲೆ ₹ 400 ಮೌಲ್ಯದ ವಿಶೇಷ ರಿಯಾಯಿತಿ ಕೂಪನ್ ಗಳನ್ನು ಸಹ ಗೆಲ್ಲಬಹುದು.

ಈ ಮೇಲಿನ ಕೊಡುಗೆಗಳು ವಿಐ ಆ್ಯಪ್ ನಲ್ಲಿ ಮಾತ್ರ ಲಭ್ಯ ಇರಲಿವೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next