Advertisement
ಪ್ರೀತಿಯ ನಾಟಕವಾಡಿ ಹೋದವಳೆ… ಓಮ್ಮೆ ಕೇಳಿಲ್ಲಿ. ನಿನ್ನ ಮೈ ಬಣ್ಣಕ್ಕೆ ಮಾರು ಹೋದವನಲ್ಲ ನಾನು. ನಿನ್ನಲ್ಲಿರುವ ಮಗುವಿನಂಥ ಮುಗ್ಧ ಮಾತುಗಳಿಗೆ ಶರಣಾದವನು. ನೀನು ಮಾತನಾಡಲು ಪ್ರಾರಂಬಿಸಿದಾಗ ನಾನು ನನ್ನ ನೋವನ್ನೆಲ್ಲ ಮರೆತು, ನಿನ್ನ ಜಗತ್ತಿನಲ್ಲಿ ನನ್ನ ಮನಸ್ಸನ್ನು ತೇಲಿ ಬಿಡುತ್ತಿದ್ದೆ. ಒಂದು ದಿನ ನಿನ್ನ ಧ್ವನಿ ಬೀಳದಿದ್ದರೆ ಒಂದೇ ಸಮನೆ ಚಡಪಡಿಸುತ್ತಿದ್ದೆ. ಯಾಕೆ ಗೋತ್ತ? ನನ್ನ ಭವಿಷ್ಯ ಎಂಬ ಕನಸಿನ ಅರಮನೆಯನ್ನು ನಿನ್ನ ಜೊತೆ ಕಟ್ಟಿದ್ದೆ . ಅಷ್ಟರ ಮಟ್ಟಿಗೆ ನಿನ್ನನ್ನು ಪ್ರೀತಿಸುತ್ತಿದ್ದೆ.
Related Articles
Advertisement
ನಿನ್ನ ಕೈ ಬೆರಳು ಹಿಡಿದು ಜಾತ್ರೆಯಲ್ಲಿ ಸುತ್ತಾಡಿದ್ದು, ಮ್ಯಾಚಿಂಗ್ ಡ್ರೆಸ್ ಹಾಕಿಕೊಂಡು ಅಕ್ಕನ ಮದುವೆಯಲ್ಲಿ ಓಡಾಡಿದ್ದು, ಅಕ್ಕ ಪಕ್ಕ ಕುಳಿತು ನವ ದಂಪತಿಯಂತೆ ಊಟ ಮಾಡಿದ್ದು, ಕಾಲೇಜಿನಲ್ಲಿ ನಿನ್ನ ಕಾರ್ಯಕ್ರಮಗಳು ಇದ್ದಾಗ ಮುಂದಿನ ಸಾಲಿನಲ್ಲಿ ಕುಳಿತು ನೊಡುತ್ತಿದ್ದದ್ದು , ನಿನ್ನ ನೋಡುವ ಸಲುವಾಗಿ ಕಾಲೇಜಿಗೆ ಬಂಕ್ ಮಾಡಿದ್ದು… ಇದನ್ನೆಲ್ಲ ನೀನು ಮರೆತಿರಬಹುದು. ಆದರೆ, ನಾನು ಮರೆತಿಲ್ಲ. ಮುಂದೊಂದು ದಿನ ನನ್ನ ಪ್ರೀತಿಯ ಬೆಲೆ ನಿನಗೆ ಅರ್ಥವಾಗುತ್ತದೆ. ಆದರೆ ಪ್ರಯೋಜನವಿಲ್ಲ, ಏಕೆಂದರೆ, ಆಗ ಕಾಲ ಮಿಂಚಿ ಹೋಗಿರುತ್ತದೆ. ಆಗ ಮರಳಿ ಬರುವ ಪ್ರಯತ್ನವೂ ಮಾಡಬೇಡ.
ಏಕೆಂದರೆ, ಮತ್ತೂಮ್ಮೆ ನಿನ್ನ ಮೋಹದ ಬಲೆಗೆ ಬೀಳುವ ಹುಡುಗ ನಾನಲ್ಲ .
ಅಮೃತ ಚಂದ್ರಶೇಖರ ತೀರ್ಥಹಳ್ಳಿ