Advertisement

ಯೋಗಿ ಕಣ್ಣಲ್ಲಿ ಲಂಕೆ ಕನಸು : 200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ರಿಲೀಸ್‌

12:26 PM Sep 07, 2021 | Team Udayavani |

ಯೋಗೇಶ್‌ ಅಭಿನಯದ “ಲಂಕೆ’ ಚಿತ್ರ ಸೆ.10 ರಂದು ಬಿಡುಗಡೆಯಾಗುತ್ತಿದೆ. ಏಪ್ರಿಲ್‌ ನಂತರಕನ್ನಡ ಚಿತ್ರರಂಗದಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿರುವ ಚಿತ್ರ ಇದಾಗಿದ್ದು, 200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಈ ಮೂಲಕ ಚಿತ್ರತಂಡ ಮತ್ತೂಮ್ಮೆ ಮಾಧ್ಯಮ ಮುಂದೆ ಬಂದು ಸಿನಿಮಾ ಬಿಡುಗಡೆಯ ಖುಷಿ ಹಂಚಿಕೊಂಡಿದೆ.

Advertisement

ಚಿತ್ರದ ನಿರ್ದೇಶಕ ರಾಮ್‌ ಪ್ರಸಾದ್‌ ಮಾತನಾಡಿ, “ಕೆಲವು ಚಿತ್ರಗಳ ಆರಂಭದಲ್ಲೇ ಅನೇಕ ತೊಂದರೆಗಳು ಎದುರಾಗುತ್ತದೆ. ಆದರೆ ನಮ್ಮ ಚಿತ್ರ ಯಾವುದೇ ತೊಂದರೆಯಿಲ್ಲದೇ ಬಿಡುಗಡೆ ಹಂತಕ್ಕೆ ಬಂದಿದೆ. ಅದಕ್ಕೆಕಾರಣ ನಮ್ಮ ಚಿತ್ರದ ನಿರ್ಮಾಪಕರಾದ ಪಟೇಲ್‌ ಶ್ರೀನಿವಾಸ್‌’ ಎಂದರು.

ಜೊತೆಗ ನಾಯಕ ಯೋಗಿ,ಕೃಷಿ ತಾಪಂಡ ಸೇರಿದಂತೆ ಚಿತ್ರತಂಡದ ಸದಸ್ಯರ ಬೆಂಬಲವನ್ನು ನೆನೆದರು ರಾಮ್‌ಪ್ರಸಾದ್‌, ನಾಯಕ ಯೋಗಿ ಕೂಡಾ ಖುಷಿಯಾಗಿದ್ದಾರೆ. ತುಂಬಾ ದಿನಗಳ ನಂತರ ಅವರ ಚಿತ್ರವೊಂದು ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ.

ಈ ಬಗ್ಗೆ ಮಾತನಾಡುವ ಯೋಗಿ, “ನಾನು ನಮ್ಮ ತಂದೆಯವರು ನಿರ್ಮಿಸಿದ್ದ ಚಿತ್ರಗಳಲ್ಲೇ ಇಷ್ಟು ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿಲ್ಲ. ಆದರೆ ಈ ಚಿತ್ರದ ಎಲ್ಲಾ ರೀತಿಯ ಪ್ರಚಾರ ಕಾರ್ಯಗಳಲ್ಲೂ ನಾನು ಭಾಗಿಯಾಗಿದ್ದೇನೆ. ಒಳ್ಳೆಯ ತಂಡದ ಜೊತೆ ಕೆಲಸ ಮಾಡಿದ ಖುಷಿಯಿದೆ. ಗಣಪತಿ ಹಬ್ಬಕ್ಕೆ ಚಿತ್ರ ಬರುತ್ತಿದೆ. ಎಲ್ಲರಿಗೂ ಇಷ್ಟವಾಗುವ ವಿಶ್ವಾಸವಿದೆ’ ಎಂದರು.

ಇದನ್ನೂ ಓದಿ:“ಹಕೂನ ಮಟಟ’ದಲ್ಲಿ ಚಿನ್ನಾರಿ ಮುತ್ತ : ಏನಿದು ಗೊತ್ತಾ ?

Advertisement

ನಾಯಕಿ ಕೃಷಿ ತಾಪಂಡ, ನಿರ್ಮಾಪಕರಾದ ಪಟೇಲ್‌ ಶ್ರೀನಿವಾಸ್‌, ಸುರೇಖ ರಾಮಪ್ರಸಾದ್‌ ಹಾಗೂ ಕಲಾವಿದರಾದ ಮಾ. ಮಿಥುನ್‌ ಗೌಡ, ಬೇಬಿ ಜನ್ಯ ಮುಂತಾದವರು ತಮ್ಮ ಅನುಭವ ಹಂಚಿಕೊಂಡರು. ದಿ ಗ್ರೇಟ್‌ ಎಂಟರ್‌ ಟೈನರ್‌ ಲಾಂಛನದಲ್ಲಿ ಪಟೇಲ್‌ ಶ್ರೀನಿವಾಸ್‌ (ನಾಗವಾರ) ಹಾಗೂ ಸುರೇಖ ರಾಮಪ್ರಸಾದ್‌ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ರಮೇಶ್‌ ಬಾಬು ಛಾಯಾಗ್ರಹಣ, ಶಿವರಾಜ್‌ ಮೇಹು ಸಂಕಲನ, ರವಿವರ್ಮ, ಪಳನಿರಾಜ್‌, ಅಶೋಕ್‌ ಸಾಹಸ ನಿರ್ದೇಶನ ಹಾಗೂ ಧನಂಜಯ್, ಮೋಹನ್‌ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ಚಿತ್ರದಲ್ಲಿ ಯೋಗೇಶ್‌, ಕೃಷಿ ತಾಪಂಡ, ಕಾವ್ಯ ಶೆಟ್ಟಿ, ಸಂಚಾರಿ ವಿಜಯ್‌, ಶರತ್‌ ಲೋಹಿತಾಶ್ವ, ಶೋಭ ರಾಜ್‌, ಡ್ಯಾನಿ ಕುಟ್ಟಪ್ಪ, ಸುಚೇಂದ್ರ ಪ್ರಸಾದ್‌ ಸೇರಿದಂತೆ ಅನೇಕರು ನಟಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next