ಗೋರಖ್‌ಪುರ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ಬಾರಿಯ ಹೋಳಿ ಹಬ್ಬವನ್ನು ಗೋರಖ್‌ಪುರ ನಿವಾಸಿಗಳೊಂದಿಗೆ ಆಚರಿಸಲಿದ್ದಾರೆ. ಮಾರ್ಚ್ 6 ರಂದು ನಡೆಯಲಿರುವ ಹೋಳಿ ಮೆರವಣಿಗೆಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗಿಯಾಗಲಿದ್ದಾರೆ.
ಹೋಳಿ ಹಬ್ಬದ ಪ್ರಯುಕ್ತ ಮಾರ್ಚ್ 8 ರಂದು ನಡೆಯುವ ಬೃಹತ್ ಮೆರವಣಿಗೆಯಲ್ಲಿ ಲಕ್ಷಾಂತರ ಮಂದಿ ಭಾಗವಹಿಸುತ್ತಾರೆ. ಗೋರಖ್‌ಪುರ ನಿವಾಸಿಗಳ ಜೊತೆಗೆ ಯೋಗಿ ಬಣ್ಣ, ಹೂವಿನ ಸುರಿಮಳೆಗೈಯ್ಯಲಿದ್ದಾರೆ.
ಅದಲ್ಲದೇ, ಸಿಎಂ ಆದಿತ್ಯನಾಥ್ ʻಹೋಳಿ ಕಾ ದಹನ್ʼ ಕಾರ್ಯಕ್ರಮದಲ್ಲೂ ಭಾಗಿಯಾಗಲಿದ್ದಾರೆ. ಮಾರ್ಚ್ 8 ರಂದು ನಡೆಯಲಿರುವ ನರಸಿಂಹ ದೇವರ ಮೆರವಣಿಗೆರಯಲ್ಲಿಯೂ ಮುಖ್ಯಮಂತ್ರಿಗಳು ಬಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ. ಈ ಎರಡೂ ಮೆರವಣಿಗೆಗೆ ಈಗಿಂದಲೇ ಭಾರೀ ಸಿದ್ಧತೆ ನಡೆಸಲಾಗಿದ್ದು ಭದ್ರತಾ ಪಡೆಗಳು ತೀವ್ರ ತಪಾಸಣೆಯಲ್ಲಿ ತೊಡಗಿವೆ.
ಮಾರ್ಚ್ 6ರಂದು ಘಂಟಾಘರ್‌ನಿಂದ ಮೆರವಣಿಗೆ ಆರಂಭವಾಗಲಿದ್ದು ಈ ವೇಳೆ ಯೋಗಿ ನರಸಿಂದ ದೇವರಿಗೆ ಮಹಾರತಿ ನಡೆಸಲಿದ್ದಾರೆ. ಮಂಗಳವಾರ ಗೋರಖ್‌ನಾಥ್ ದೇಗುಲದಲ್ಲಿಯೇ ಯೋಗಿ ವಾಸ್ತವ್ಯ ಹೂಡಲಿದ್ದಾರೆ. ಪೀಠಾಧಿಪತಿ ಯೋಗಿ ಆದಿತ್ಯನಾಥರ ನೇತೃತ್ವದಲ್ಲಿ ಬುಧವಾರ ನರಸಿಂಹ ದೇವರ ಮೆರವಣಿಗೆಯೂಈ ನಡೆಯಲಿದೆ. ಇದಿಕ್ಕಾಗಿ ಆಡಳಿತ ಮಂಡಳಿ ಸಕಲ ಸಿದ್ಧತೆ ನಡೆಸಿದೆ.