Advertisement

ಶುರುವಾಯ್ತು ಯೋಗಿಯ ಲಂಕೆ ಪುರಾಣ!

09:43 AM Sep 10, 2021 | Team Udayavani |

ಯೋಗಿ ಕಣ್ಣಲ್ಲೊಂದು ಕನಸು ಕಾಣುತ್ತಿದೆ. ಅದು ಗೆಲುವಿನ ಕನಸು. ಆ ಗೆಲುವು ಯೋಗಿ ಪಾಲಿಗೆ ಸದ್ಯಕ್ಕೆ ತುಂಬಾ ಮಹತ್ವದ್ದು ಕೂಡಾ. ಹಾಗಾದರೆ, ಆಗೆಲುವಿಗೆ,ಕನಸಿಗೆ ಕಾರಣವಾಗಬಹುದಾದ ಅಂಶ ಯಾವುದೆಂದು ನೀವು ಕೇಳಬಹುದು. ಅದು”ಲಂಕೆ’.
ಯೋಗಿ ನಟನೆಯ “ಲಂಕೆ’ ಚಿತ್ರ ಇಂದು ತೆರೆಕಾಣುತ್ತಿದೆ. ಏಪ್ರಿಲ್‌ನಂತರ ಕನ್ನಡ ಚಿತ್ರರಂಗದಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿರುವ ಚಿತ್ರ ಇದಾಗಿದ್ದು, 200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. ಯೋಗಿ ಕೂಡಾ ಈ ಚಿತ್ರದ ಮೇಲೆಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ.

Advertisement

ಯೋಗಿ ಕೆರಿಯರ್‌ನಲ್ಲಿ ಔಟ್‌ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾ “ಲಂಕೆ’ಎನ್ನಬಹುದು. ಹಾಗಾದರೆ “ಲಂಕೆ’ ಚಿತ್ರದಲ್ಲಿ ಯೋಗಿಯ ಪಾತ್ರವೇನು ಎಂದು ನೀವು ಕೇಳಬಹುದು. ಚಿತ್ರದಲ್ಲಿನ ನಾಯಕ ಪಾತ್ರ ರಾಮ ಮತ್ತು ರಾವಣನನ್ನು ಹೋಲುತ್ತದೆ. ಹೀಗಾಗಿರಾಮನ ತೇಜಸ್ಸು, ರಾವಣನವರ್ಚಸ್ಸು ಇದೆ. ಸನ್ನಿವೇಶಕ್ಕೆತಕ್ಕಂತೆ ನಾಯಕನ ಪಾತ್ರಬದಲಾಗುತ್ತಾ ಸಾಗುತ್ತದೆ.ನನ್ನ ಹಿಂದಿನ ಸಿನಿಮಾಗಳಿಗಿಂತ ಭಿನ್ನವಾಗಿರಬೇಕೆಂದುಈ ಸಿನಿಮಾದಲ್ಲಿ ನಿರ್ದೇಶಕರು ಸಾಕಷ್ಟು ಬದಲಾವಣೆ ಕೂಡಾ ಮಾಡಿದ್ದಾರೆ.

ಇದನ್ನೂ ಓದಿ:ಪ್ರಧಾನಿಗಳ ಮಹತ್ವಾಂಕ್ಷೆಯ ಸ್ವಾಮಿತ್ವ ಯೋಜನೆಗೆ ತಾಲೂಕಿನಲ್ಲಿ ಹಿನ್ನಡೆ

ಇಡೀಸಿನಿಮಾ ಕಲರ್‌ಫ‌ುಲ್‌ಆಗಿದೆ’ ಎನ್ನುತ್ತಾರೆ ಯೋಗಿ.ಇನ್ನು, ಈ ಚಿತ್ರ ನೈಜ ಘಟನೆಯಿಂದ ಪ್ರೇರಿತವಾಗಿದೆಯಂತೆ.”ಮುಖ್ಯವಾಗಿ ಇದು ನೈಜ ಘಟನೆಯಿಂದ ಪ್ರೇರಿತವಾದ ಸಿನಿಮಾ.ಇಲ್ಲಿ ಯಾವ ಅಂಶವೂ ಅನಾವಶ್ಯಕವಾಗಿ ಬರೋದಿಲ್ಲ. ಕತೆಯ ಆಶಯಕ್ಕೆತಕ್ಕಂತೆ ಎಲ್ಲವೂ ನಡೆಯುತ್ತದೆ. ಮೊದಲೇ ಹೇಳಿದಂತೆ ಇಲ್ಲಿ ಲುಕ್‌, ಮ್ಯಾನರಿಸಂ, ಡೈಲಾಗ್‌ಡೆಲಿವರಿ ಎಲ್ಲವೂ ಭಿನ್ನವಾಗಿದೆ’ ಎನ್ನುವುದುಯೋಗಿ ಮಾತು.”ಈ ಸಿನಿಮಾದಲ್ಲಿ ಅಂದಿನಿಂದ ಇಂದಿನವರೆಗೂ ಕನೆಕ್ಟ್ ಆಗುವಂಥ ಸಬ್ಜೆಕ್ಟ್ ಇದೆ. ವೇಶ್ಯಾವಾಟಿಕೆಯಿಂದ ತುಳಿತಕ್ಕೊಳಗಾದವರ ಕಥೆ ಇದರಲ್ಲಿದೆ.ಶಿಕ್ಷಣ, ಇಂದಿನ ಸಾಮಾಜಿಕ ಸ್ಥಿತಿಗತಿ ಹೀಗೆ ಹಲವು ವಿಷಯಗಳನ್ನ ಸಿನಿಮಾದಲ್ಲಿ ಹೇಳಿದ್ದೇವೆ. ಜೊತೆಗೊಂದು ಮೆಸೇಜ್‌ಕೂಡ ಇದೆ. ಮನುಷ್ಯ ಅಂದುಕೊಂಡಿದ್ದನ್ನು ಸಾಧಿಸಬೇಕಾದ್ರೆ, ಮೊದಲು ತಾನುಬೆಳೆಯಬೇಕು ಅನ್ನೋದನ್ನ ಸಿನಿಮಾ ಹೇಳುತ್ತದೆ. ಸೀತಾ ಅಪಹರಣ ದಂಥೆ ಸನ್ನಿವೇಶ ಈ ಕಥೆಯಲ್ಲೂ ಇದೆ.

ನಾಯಕಯೋಗಿ ಅವರದ್ದು ರಾಮಮತ್ತು ಆಂಜನೇಯ ಎರಡೂಪಾತ್ರಗಳನ್ನು ಬ್ಲೆಂಡ್‌ ಮಾಡಿದಂಥ ಪಾತ್ರ. ಹೀಗಾಗಿ ಸಬೆjಕ್ಟ್,ಕ್ಯಾರೆಕ್ಟರ್‌, ಸನ್ನಿವೇಶ ಎಲ್ಲದಕ್ಕೂಹೊಂದಾಣಿಕೆಯಾಗುತ್ತದೆ ಎಂಬಕಾರಣಕ್ಕೆ “ಲಂಕೆ’ ಅಂಥ ಟೈಟಲ್‌ಇಟ್ಟಿದ್ದೇವೆ’ ಎಂದು ಚಿತ್ರದ ಬಗ್ಗೆವಿವರಣೆ ಕೊಡುತ್ತಾರೆ.”ಲಂಕೆ’ ಚಿತ್ರದಲ್ಲಿ ನಾಯಕಯೋಗಿ ಜೊತೆಗೆ ಕೃಷಿ ತಾಪಂಡ,ಕಾವ್ಯ ಶೆಟ್ಟಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.

Advertisement

ಇತ್ತೀಚೆಗೆ ನಿಧನರಾದ ನಟ ಸಂಚಾರಿ ವಿಜಯ್‌ಕೂಡ ಚಿತ್ರದಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಶರತ್‌ಲೋಹಿತಾಶ್ವ, ಶೋಭರಾಜ್‌,ಡ್ಯಾನಿ ಕುಟ್ಟಪ್ಪ, ಸುಚೇಂದ್ರಪ್ರಸಾದ್‌, ವಾಣಿಶ್ರೀ, ಮೂಸಾ,ಆದ್ಯಾ ನಾಯಕ್‌, ಗಾಯಿತ್ರಿಜಯರಾಂ, ಎಸ್ತಾರ್‌ ನರೋನ,ಪ್ರಶಾಂತ್‌ ಸಿದ್ದಿ ಮುಂತಾದವರು “ಲಂಕೆ’ಯ ಇತರ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ದಿ ಗ್ರೇಟ್‌ಎಂಟರ್‌ಟೈನರ್’ ಬ್ಯಾನರ್‌ನಲ್ಲಿಪಟೇಲ್‌ ಶ್ರೀನಿವಾಸ್‌(ನಾಗವಾರ) ಹಾಗೂ ಸುರೇಖಾ ರಾಮಪ್ರಸಾದ್‌ ಈ ಚಿತ್ರವನ್ನುನಿರ್ಮಿಸಿದ್ದಾರೆ. ಚಿತ್ರಕ್ಕೆ ರಾಮ್‌ಪ್ರಸಾದ್‌ ಎಂ.ಡಿ ಕಥೆ, ಚಿತ್ರಕಥೆಬರೆದು ನಿರ್ದೇಶಿಸಿದ್ದಾರೆ. ಚಿತ್ರದ ಆರು ಹಾಡುಗಳಿಗೆ ಕಾರ್ತಿಕ್‌ಶರ್ಮಾ ಸಂಗೀತ ಸಂಯೋಜಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next