Advertisement

ಧೂಳಿಪಟದಲ್ಲಿ ಯೋಗಿ ಗೆಸ್ಟ್‌

10:55 AM Aug 01, 2017 | Team Udayavani |

ನಟ ಯೋಗೇಶ್‌ ಈಗಾಗಲೇ ಹಲವು ಸಿನಿಮಾಗಳಲ್ಲಿ ಗೆಸ್ಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಒಂದೆರಡು ದೃಶ್ಯ ಅಥವಾ ಹಾಡಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಆಗಾಗ ತಮ್ಮ ಅಭಿಮಾನಿಗಳಿಗೆ ದರ್ಶನ ನೀಡುತ್ತಿರುವ ಯೋಗಿ ಈಗ ಸದ್ದಿಲ್ಲದೇ ಹೊಸಬರ ಚಿತ್ರವೊಂದರಲ್ಲಿ ಗೆಸ್ಟ್‌ ಅಪಿಯರೆನ್ಸ್‌ ಮಾಡಿದ್ದಾರೆ.

Advertisement

ಅದು “ಧೂಳಿಪಟ’ ಚಿತ್ರದಲ್ಲಿ. ಹೌದು, “ಧೂಳಿಪಟ’ ಎಂಬ ಚಿತ್ರದಲ್ಲಿ ಯೋಗಿ ಅತಿಥಿ ಪಾತ್ರ ಮಾಡಿದ್ದಾರೆ. ಈಗಾಗಲೇ ಅವರು ನಟಿಸಿರುವ ದೃಶ್ಯಗಳ ಚಿತ್ರೀಕರಣ ಕೂಡಾ ಆಗಿದೆ. ಈ ಚಿತ್ರದ ರಶ್ಮಿ ಪಿ. ಕಾರ್ತಿ ಎನ್ನುವವರು ನಿರ್ದೇಶಿಸುತ್ತಿದ್ದಾರೆ.  ಈ “ಹಿಂದೆ ಸಾರಿ ಕಣೇ’ ಚಿತ್ರದಲ್ಲಿ ನಟಿಸಿದ್ದ ರೂಪೇಶ್‌ ಈ ಚಿತ್ರದ ಹೀರೋ.

ಇದು ಅವರ ನಟನೆಯ ಎರಡನೇ ಚಿತ್ರ. ಸ್ವತಃ ನಾಯಕನಟ ರೂಪೇಶ್‌ ಅವರೇ ಕಥೆ, ಚಿತ್ರಕಥೆ ರಚಿಸಿರುವ ಈ ಚಿತ್ರಕ್ಕೆ ಈಗಾಗಲೇ ಅರವತ್ತು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಹುಬ್ಬಳ್ಳಿ ಬೆಂಗಳೂರು ಬಾಗಲಕೋಟೆ ಮತ್ತು ಟಿಬೆಟ್‌ಗಳಲ್ಲಿ ಚಿತ್ರೀಕರಣ ಮುಗಿಸಿಕೊಂಡುಬಂದಿರುವ ಚಿತ್ರತಂಡ ರಾಜೇಶ್‌ ರಾಮನಾಥ್‌ ಅವರ ಸ್ಟುಡಿಯೋದಲ್ಲಿ ಡಬ್ಬಿಂಗ್‌ ಕಾರ್ಯವನ್ನೂ ಮುಕ್ತಾಯಗೊಳಿಸಿದೆ.  

ವೀರೇಶ್‌ ಛಾಯಾಗ್ರಹಣ, ಅರುಣ್‌ ಶೆಟ್ಟಿ ಗೀತ ರಚನೆ ಮತ್ತು ಸಂಗೀತ, ಶಿವರಾಜ್‌ ಮೇಹು ಸಂಕಲನ, ತಿರುಪತಿ ಶ್ರೀನಿವಾಸ್‌ ಮತ್ತು ಫ್ರಾನ್ಸಿ ನೃತ್ಯ ನಿರ್ದೇಶನ ಹಾಗೂ ಕೌರವ ವೆಂಕಟೇಶ್‌ ಅವರ ಸಾಹಸ ನಿರ್ದೇಶನ “ಧೂಳೀಪಟ’ ಚಿತ್ರಕ್ಕಿದೆ. ಚಿತ್ರದಲ್ಲಿ ಅರ್ಚನಾ, ಐಶ್ವರ್ಯಾ, ಟೆನ್ನಿಸ್‌ ಕೃಷ್ಣ, ರಮಾನಂದ್‌, ಹೊನ್ನವಳ್ಳಿ ಕೃಷ್ಣ, ಕಿಲ್ಲರ್‌ ವೆಂಕಟೇಶ್‌, ಕುರಿಬಾಂಡ್‌ ರಂಗ ಮುಂತಾದವರಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next