ಲಕ್ನೋ: ಸ್ವಿಜರ್ಲೆಂಡ್‌ನ ದಾವೋಸ್‌ನಲ್ಲಿ 2023ರ ಜ.16ರಿಂದ 20ರವರೆಗೆ ನಡೆಯುವ ವಿಶ್ವ ಆರ್ಥಿಕ ಶೃಂಗದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗವಹಿಸಲಿದ್ದಾರೆ.
ಈ ಮೂಲಕ ಅವರು ಶೃಂಗದಲ್ಲಿ ಭಾಗವಹಿಸುತ್ತಿರುವ ಮೊದಲ ಉ.ಪ್ರ. ಸಿಎಂ ಆಗಲಿದ್ದಾರೆ. ಯೋಗಿ ಅವರ ಜತೆಗೆ ಉತ್ತರ ಪ್ರದೇಶ ಕೈಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಗಳು ತೆರಳಲಿದ್ದಾರೆ.
“ಇನ್‌ವೆಸ್ಟ್ ಯುಪಿ’, ಉತ್ತರ ಪ್ರದೇಶ ಸರ್ಕಾರ ಹೊಸದಾಗಿ ರಚಿಸಲಾದ ಹೂಡಿಕೆ ಉತ್ತೇಜನ ಮತ್ತು ವ್ಯವಸ್ಥೆ ಕಲ್ಪಿಸುವ ಸಂಸ್ಥೆಗೆ ದಾವೋಸ್ ಪ್ರವಾಸದ ಜವಾಬ್ದಾರಿ ವಹಿಸಲಾಗಿದೆ.
2023ರ ಫೆಬ್ರವರಿಯಲ್ಲಿ ಉತ್ತರ ಪ್ರದೇಶದಲ್ಲಿ ಆಯೋಜಿಸಿರುವ ವಿಶ್ವ ಹೂಡಿಕೆ ಸಮಾವೇಶ ಕುರಿತು ಪ್ರಚಾರ ಮಾಡಲು ಈ ಅವಕಾಶವನ್ನು ಬಳಸಿಕೊಳ್ಳಲಾಗುತ್ತದೆ.