Advertisement

ಮೇ 6: ಬಿ.ಸಿ.ರೋಡ್‌ನ‌ಲ್ಲಿ ಯೋಗಿ ರೋಡ್‌ ಶೋ, ಹೆದ್ದಾರಿ ವಾಹನ ಸಂಚಾರ ನಿಷೇಧ ಸಾಧ್ಯತೆ

11:30 PM May 04, 2023 | Team Udayavani |

ಬಂಟ್ವಾಳ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಮೇ 6ರಂದು ಸಂಜೆ 4 ಕ್ಕೆ ಬಿ.ಸಿ. ರೋಡ್‌ನ‌ಲ್ಲಿ ರೋಡ್‌ ಶೋ ನಡೆಸಲಿದ್ದು, ಈ ಹಿನ್ನೆಲೆಯಲ್ಲಿ ಭದ್ರತೆಯ ಜತೆಗೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಬಾರದು ಎಂಬ ದೃಷ್ಟಿಯಿಂದ ಮಂಗಳೂರು-ಬಿ.ಸಿ. ರೋಡ್‌ ಹೆದ್ದಾರಿಯಲ್ಲಿ ಕೆಲವು ತಾಸುಗಳ ಕಾಲ ವಾಹನ ಸಂಚಾರ ನಿಷೇಧಗೊಳ್ಳುವ ಸಾಧ್ಯತೆ ಇದೆ.

Advertisement

ಯೋಗಿ ಅವರು ಹೆಲಿಕಾಪ್ಟರ್‌ ಮೂಲಕ ಬಂಟ್ವಾಳ ವಿದ್ಯಾಗಿರಿ ಎಸ್‌ವಿಎಸ್‌ ಕಾಲೇಜಿನ ಬಳಿಯ ಹೆಲಿಪ್ಯಾಡ್‌ಗೆ ಆಗಮಿಸಿ ಅಲ್ಲಿಂದ ಝೀರೋ ಟ್ರಾಫಿಕ್‌ ಮೂಲಕ ಕೈಕಂಬಕ್ಕೆ ತೆರಳಿ ಅಲ್ಲಿಂದ ಖಾಸಗಿ ಬಸ್‌ ನಿಲ್ದಾಣದವರೆಗೆ ರೋಡ್‌ ಶೋ ನಡೆಸುವರು. ರೋಡ್‌ ಶೋ ಸಾಗುವ ಹಾದಿಯುದ್ದಕ್ಕೂ ಬ್ಯಾರಿಕೇಡ್‌ ಹಾಕಲಿದ್ದು, ಅಲ್ಲಲ್ಲಿ ಅಳವಡಿಸಲಾಗುವ ಮೆಟಲ್‌ ಡಿಟೆಕ್ಟರ್‌ ಮೂಲಕ ಮಾತ್ರ ಪ್ರವೇಶಕ್ಕೆ ಅವಕಾಶವಿರುತ್ತದೆ.

ಎಸ್‌ಪಿಜಿ ತಂಡ
ಭದ್ರತೆಯ ಹಿನ್ನೆಲೆಯಲ್ಲಿ ರೋಡ್‌ ಶೋ ವಾಹನದ ಹಿಂದೆ-ಮುಂದೆ ಸುಮಾರು 500 ಮಂದಿ ವಿಶೇಷ ಸ್ವಯಂಸೇವಕರು ಬೇರೆ ಯಾರೂ ವಾಹನದತ್ತ ಆಗಮಿಸದಂತೆ ಎಚ್ಚರಿಕೆ ವಹಿಸುವರು. ಜತೆಗೆ ಯೋಗಿ ಅವರ ಭದ್ರತೆಗಾಗಿ ಎಸ್‌ಪಿಜಿಯ ತಂಡ ಮಂಡ್ಯದಿಂದ ಬಂಟ್ವಾಳಕ್ಕೆ ಆಗಮಿಸಲಿದೆ.

ಹೆದ್ದಾರಿಯಲ್ಲಿ ವಾಹನ ಸಂಚಾರ ನಿಷೇಧದ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆ ಪರ್ಯಾಯ ರಸ್ತೆ ಹಾಗೂ ಆ ಸಮಯದಲ್ಲಿ ಅಂಗಡಿ ಮುಂಗಟ್ಟುಗಳು ತೆರೆದಿಡಲು ಅವಕಾಶವಿದೆಯೆ ಎಂಬುದರ ಕುರಿತು ಪೊಲೀಸ್‌ ಇಲಾಖೆ ಇನ್ನೂ ಖಚಿತಪಡಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next